ಬೆಂಗಳೂರಿನಲ್ಲಿ ಒಬ್ಬಂಟಿ ಮಹಿಳೆ ಕೊಂದ ಆರೋಪಿ ಸಿಗಲಿಲ್ಲವೆಂದು 'ಸಿ' ರಿಪೋರ್ಟ್ ಸಲ್ಲಿಸಿದ ಪೊಲೀಸರು

ಬೆಂಗಳೂರಿನಲ್ಲಿ ಹಾಡ ಹಗಲೇ ಮನೆಗೆ ನುಗ್ಗಿ ಒಬ್ಬಂಟಿ ಮಹಿಳೆಯನ್ನು ಕೊಲೆಗೈದು  ನಗದು, ಚಿನ್ನಾಭರಣ ದೋಚಿದ್ದ ಆರೋಪಿ ಸಿಗಲಿಲ್ಲವೆಂದು ಪೊಲೀಸರು ಕೋರ್ಟ್‌ಗೆ ಸಿ ರಿಪೋರ್ಟ್‌ ಸಲ್ಲಿಕೆ ಮಾಡಿದ್ದಾರೆ.

Bengaluru single woman murder case killer was not found police submitted C report to court sat

ಬೆಂಗಳೂರು (ನ.22): ದೇಶದಲ್ಲಿ ಸೂಪರ್‌ ಕಾಪ್‌ ಎಂದು ಕರೆಸಿಕೊಳ್ಳುವ ಬೆಂಗಳೂರು ಪೊಲೀಸರು ಕೊಲೆ ಪ್ರಕರಣವೊಂದರಲ್ಲಿ ಕೊಲೆಗಾರನನ್ನು ಪತ್ತೆ ಮಾಡಲಾದೇ ನ್ಯಾಯಾಲಯಕ್ಕೆ ಸಿ ರಿಪೋರ್ಟ್‌ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ.

ಇಡೀ ದೇಶದಲ್ಲಿ ಯಾವುದೇ ಕೊಲೆ, ಸುಲಿಗೆ, ದರೋಡೆ, ಕಳ್ಳತನ ಅಥವಾ ಬೇರಾವುದೇ ಅನ್ಯಾಯ ನಡೆದಾಗ ಮೊದಲು ಪೊಲೀಸ್‌ ಠಾಣೆಗೆ ಹೋಗುತ್ತೇವೆ. ಇನ್ನು ಪೊಲೀಸ್‌ ಠಾಣೆಯಲ್ಲಿ ದಾಖಲಾದ ಅತಿ ಕ್ಲಿಷ್ಟ ಪ್ರಕರಣಗಳನ್ನು ಬೇಧಿಸುತ್ತಿದ್ದ ಬೆಂಗಳೂರು ಪೊಲೀಸರಿಗೆ ದೇಶದಲ್ಲಿಯೇ ಸೂಪರ್ ಕಾಪ್ ಎಂಬ ಪಟ್ಟವೂ ಸಿಕ್ಕಿತ್ತು. ಈಗ ಇದೇ ಬೆಂಗಳೂರು ಪೊಲೀಸರಿಗೆ ಒಬ್ಬಂಟಿ ಮಹಿಳೆಯನ್ನು ಕೊಲೆಗೈದು, ಮನೆ ದರೋಡೆ ಮಾಡಿಕೊಂಡು ಹೋದ ಕಳ್ಳನನ್ನು ಪತ್ತೆ ಮಾಡಲಾಗದೇ ನ್ಯಾಯಾಲಯಕ್ಕೆ ಸಿ ರಿಪೋರ್ಟ್‌ ಸಲ್ಲಿಕೆ ಮಾಡಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಸಂಪಂಗಿರಾಮನಗರದ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ವೃದ್ದೆ ಸಂತೋಷಿ ದೇವಿ ಅವರ ಹತ್ಯೆಯಾಗಿತ್ತು. ಒಬ್ಬಂಟಿ ಮಹಿಳೆ ಇರುವುದನ್ನು ಗಮನಿಸಿದ್ದ ಡಕಾಯಿತನೊಬ್ಬ ಮನೆಗೆ ನುಗ್ಗಿ ವೃದ್ಧೆಯನ್ನು ಹೆದರಿಸಿ ಅವರ ಮೈಮೇಲಿದ್ದ ಚಿನ್ನಾಭರಣ ಹಾಗೂ ಮನೆಯ ಲಾಕರ್‌ನಲ್ಲಿದ್ದ ಹಣ, ಒಡವೆಗಳನ್ನು ದೋಚಿದ್ದನು. ನಂತರ, ಅವರನ್ನು ಜೀವಸಹಿತ ಬಿಡದೇ ಕೊಲೆ ಮಾಡಿ ಅಲ್ಲಿಂದ ಪರಾರಿ ಆಗಿದ್ದರು. ಈ ಘಟನೆ 2019 ಫೆಬ್ರವರಿ 5 ರಂದು ನಡೆದಿತ್ತು.

ಎಂಗೇಜ್ಮೆಂಟ್ ಉಂಗುರ ಕಳೆದು ಹೋಗಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವಕ

ಕೊಲೆ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸಂಪಂಗಿರಾಮನಗರ ಠಾಣೆ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದರು. ಅದ್ರೆ ಈವರೆಗೂ ಆರೋಪಿ ಅಥವಾ ಆರೋಪಿಗಳ ಯಾವುದೇ ಸುಳಿವು ಪತ್ತೆಯಾಗದ ಹಿನ್ನಲೆಯಲ್ಲಿ ಎಸ್.ಆರ್. ನಗರ ಪೊಲೀಸರು ನ್ಯಾಯಾಲಯಕ್ಕೆ 'ಸಿ' ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಇನ್ನು ನ್ಯಾಯಾಲಯವು ಪತ್ತೆಯಾಗದ ಪ್ರಕರಣವೆಂದು ತನಿಖೆ ಮುಕ್ತಾಯಗೊಳಿಸಲು ಆದೇಶ ನೀಡಲಾಗುತ್ತದೆ.

ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆಗೈದ ಕೇಸ್‌ಗೂ ಸಿ ರಿಪೋರ್ಟ್‌ ಸಲ್ಲಿಕೆ: ಕಳೆದ 2013ರಲ್ಲಿ ಬೆಂಗಳೂರು ನಗರದ ಜನರನ್ನು ಬೆಚ್ಚಿಬೀಳಿಸಿದ್ದ ಎಟಿಎಂನಲ್ಲಿ ಮಹಿಳೆ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಈಗ 10 ವರ್ಷಗಳು ಪೂರ್ಣಗೊಂಡಿದೆ. ಸತತವಾಗಿ ಮೂರು ವರ್ಷಗಳ ಕಾಲ ಆರೋಪಿಯ ಪತ್ತೆಗೆ ತನಿಖೆ ಮುಂದುವರೆಸಿದ ಪೊಲೀಸರಿಗೆ ಆರೋಪಿಯ ಸಣ್ಣ ಸುಳಿವು ಸಹ ಲಭ್ಯವಾಗಿಲ್ಲ. ಹಾಗಾಗಿ ಪೊಲೀಸರು ಈ ಪ್ರಕರಣ ಸಂಬಂಧಿಸಿದಂತೆ 2016ರ ನವೆಂಬರ್‌ನಲ್ಲಿ ನ್ಯಾಯಾಲಯಕ್ಕೆ 'ಸಿ-ರಿಪೋರ್ಟ್‌' ಸಲ್ಲಿಸಿದ್ದರು.

ಬಿಜೆಪಿ ಅವಧಿಯಲ್ಲಿನ ಟೆಂಡರ್‌ ರದ್ದುಗೊಳಿಸುತ್ತಿರುವ ಕಾಂಗ್ರೆಸ್‌ ಸರ್ಕಾರ: ಸಂಕಷ್ಟದಲ್ಲಿ ಎಸ್ಕಾಂ ಗುತ್ತಿಗೆದಾರರು

2013ರ ನ. 19ರಂದು ಹಡ್ಸನ್‌ ವೃತ್ತದಲ್ಲಿನ ಎಟಿಎಂಗೆ ಹೋಗಿದ್ದ ಜ್ಯೋತಿ ಉದಯ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಘಟನೆ ಸಂಬಂಧ ಎಸ್‌.ಜೆ.ಪಾರ್ಕ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ಪತ್ತೆಗೆ 250ಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡ 15 ಪೊಲೀಸ್‌ ತಂಡಗಳನ್ನು ರಚಿಸಲಾಗಿತ್ತು. ಆ ತಂಡಗಳು ಆಂಧ್ರ, ತಮಿಳುನಾಡು ಮತ್ತು ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಗೆ ತೆರಳಿ ಕಾರ್ಯಾಚರಣೆ ನಡೆಸಿದ್ದವು. ಆದರೂ ಆರೋಪಿ ಸಿಗದ ಹಿನ್ನೆಲೆಯಲ್ಲಿ ಸಿ ರಿಪೋರ್ಟ್‌ ಸಲ್ಲಿಕೆ ಮಾಡಿತ್ತು.

Latest Videos
Follow Us:
Download App:
  • android
  • ios