ಮಳೆಗಾಗಿ ಪ್ರಾರ್ಥಿಸಿ ಬಾಲಕರಿಗೆ ಮದುವೆ: ಹಾಡು-ಕುಣಿತದ ಮೂಲಕ ಪ್ರಾರ್ಥನೆ

ರಾಜ್ಯದ ಹಲವು ಜಿಲ್ಲೆ, ತಾಲೂಕುಗಳಲ್ಲಿ ಮಳೆಯ ಕೊರತೆ ಎದುರಾಗಿದೆ. ಬರದ ಮುನ್ಸೂಚನೆ ಕಂಡು ಬರುತ್ತಿದೆ. ಮುಂಗಾರು ಆರಂಭವಾಗಿ ಸರಿ ಸುಮಾರು 2 ತಿಂಗಳಾಗುತ್ತಾ ಬಂದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಂದಿಲ್ಲ.

bengaluru rural villagers held boys marriage for praying rains gvd

ಕೆ.ಆರ್‌.ರವಿಕಿರಣ್‌

ದೊಡ್ಡಬಳ್ಳಾಪುರ (ಆ.14): ರಾಜ್ಯದ ಹಲವು ಜಿಲ್ಲೆ, ತಾಲೂಕುಗಳಲ್ಲಿ ಮಳೆಯ ಕೊರತೆ ಎದುರಾಗಿದೆ. ಬರದ ಮುನ್ಸೂಚನೆ ಕಂಡು ಬರುತ್ತಿದೆ. ಮುಂಗಾರು ಆರಂಭವಾಗಿ ಸರಿ ಸುಮಾರು 2 ತಿಂಗಳಾಗುತ್ತಾ ಬಂದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಂದಿಲ್ಲ. ಆರಂಭದಲ್ಲಿ ಉತ್ತಮ ಮಳೆಯಾದರೂ ಬಳಿಕ ಮಳೆಯ ಮಾರುತಗಳ ಸುಳಿವೇ ಇಲ್ಲದಾಗಿರುವುದು ಕೃಷಿಕರಲ್ಲಿ ತೀವ್ರ ಆತಂಕ ಉಂಟು ಮಾಡಿದೆ.

ತಾಲೂಕಿನಲ್ಲೂ ವಾಡಿಕೆಗಿಂತ ಅತಿ ಕಡಿಮೆ ಮಳೆಯಾಗಿದೆ. ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣವಿಲ್ಲದಾಗಿದೆ. ಆರಂಭದಲ್ಲಿ ಸುರಿದ ಮಳೆಯಿಂದ ಹರ್ಷಿತರಾಗಿದ್ದ ರೈತರು, ಜಮೀನು ಹಸನುಗೊಳಿಸಿ, ಉಳುಮೆ ಮಾಡಿ ಬೀಜ ಬಿತ್ತಿದ್ದಾರೆ. ಮೊಳಕೆ ಬರುವ ವೇಳೆಗೆ ಮಳೆ ಕೈಕೊಟ್ಟಿರುವುದು ಕೃಷಿಕರನ್ನು ಕಂಗೆಡಿಸಿದೆ. ಈ ಹಂತದಲ್ಲಿ ಜನರು ಜನಪದ ನಂಬಿಕೆಗಳ ಮೊರೆ ಹೋಗಿದ್ದು, ಮಳೆಗಾಗಿ ಪ್ರಾರ್ಥಿಸಿ ವಿಭಿನ್ನ ಆಚರಣೆಗಳಲ್ಲಿ ತೊಡಗಿದ್ದಾರೆ. ಬಾರೋ ಬಾರೋ ಮಳೆರಾಯ ಎಂದು ಎಲ್ಲೆಡೆ ಪ್ರಾರ್ಥಿಸುವ ದೃಶ್ಯಗಳು ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತಿವೆ. ರೈತರು ಆಕಾಶದತ್ತ ದೃಷ್ಟಿನೆಟ್ಟು, ಮಳೆಗಾಗಿ ಮೊರೆಯಿಡುವ ದೃಶ್ಯ ಸಾಮಾನ್ಯವಾಗಿದೆ.

ಸೇವಾ ಮನೋಭಾವದ ವೈದ್ಯರು ಸಂಖ್ಯೆ ಹೆಚ್ಚಾಗಲಿ: ಸಚಿವ ಪರಮೇಶ್ವರ್‌

ಬಾಲಕರಿಗೆ ಮದುವೆ!: ಮಳೆಗಾಗಿ ಪ್ರಾರ್ಥಿಸಿ ನಮ್ಮಲ್ಲಿ ವಿಭಿನ್ನ ಆಚರಣೆಗಳಿವೆ. ಗ್ರಾಮೀಣರಲ್ಲಿ ನೆಲೆಯೂರಿರುವ ಈ ನಂಬಿಕೆಗಳ ವೈಜ್ಞಾನಿಕ ಹಿನ್ನೆಲೆಗಿಂತಲೂ ನಿಸರ್ಗದ ಅನನ್ಯತೆಯನ್ನು ಪೂಜಿಸುವ, ಶ್ರದ್ಧಾಭಕ್ತಿಯಿಂದ ಬೇಡುವ ಮುಗ್ಧ ನಂಬಿಕೆ ಮುಖ್ಯ ಎನಿಸುತ್ತದೆ. ಈ ಹಂತದಲ್ಲಿ ಮಳೆರಾಯನನ್ನು ಮಾಡುವುದು, ಕಪ್ಪೆಗಳ ಮದುವೆ ಮಾಡುವುದು, ಗುಂಡು ಕಲ್ಲು ಮದುವೆ, ನಾಯಿ ಮದುವೆ ಇತ್ಯಾದಿ ಆಚರಣೆಗಳ ಸಾಲಿಗೆ ಇದೀಗ ಬಾಲಕರ ಮದುವೆಯೂ ಸೇರಿದೆ.

ತಾಲೂಕಿನ ಕೆಳಗಿನ ಜೂಗಾನಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಇಬ್ಬರು ಗಂಡು ಮಕ್ಕಳಿಗೆ ಸಾಂಕೇತಿಕವಾಗಿ ಚಂದಮಾಮ ಮದುವೆ ಮಾಡುವ ಮೂಲಕ ವಿಶೇಷವಾಗಿ ವರುಣದೇವನಿಗೆ ಹರಕೆ ಸಲ್ಲಿಸಿದ್ದಾರೆ. ಶಾಸ್ತೊ್ರೕಕ್ತವಾಗಿ ವಿವಿಧ ಪೂಜಾ ಕಾರ‍್ಯಕ್ರಮಗಳನ್ನು ನೆರವೇರಿಸಿ ಶ್ರದ್ಧಾಭಕ್ತಿಯಿಂದ ಆಚರಣೆ ನಡೆಸಲಾಗಿದೆ.

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮವಹಿಸಲು ಸಚಿವ ಬೋಸರಾಜು ಸೂಚನೆ

ಹಾಡು-ನೃತ್ಯದ ಮೂಲಕ ಪ್ರಾರ್ಥನೆ: ಮದುವೆಯಲ್ಲಿ ವರ ಹಾಗೂ ವಧುವಾಗಿ ಇಬ್ಬರು ಗಂಡು ಮಕ್ಕಳನ್ನೇ ಆಯ್ಕೆ ಮಾಡಲಾಗಿತ್ತು. ವಧುವಾಗಿ ಶಶಾಂಕ್‌, ವರನಾಗಿ ಅರವಿಂದ್‌ ಸಜ್ಜಾಗಿ ಕುಳಿತಿದ್ದರು. ನಂತರ ಎಲ್ಲಾ ಗ್ರಾಮಸ್ಥರು ಒಂದೆಡೆ ಸೇರಿ ಮಳೆರಾಯನ ಕುರಿತು ಹಾಡುಗಳನ್ನು ಹಾಡಿದರು. ನೃತ್ಯ ಮಾಡಿ ಬಾರೋ ಬಾರೋ ಮಳೆರಾಯ, ಈಗಲೇ ಬಾರೋ ಮಳೆರಾಯ ಎಂದು ಕರೆದಿದ್ದು ವಿಶೇಷವಾಗಿತ್ತು. ಬಹುಮುಖ್ಯವಾಗಿ ನಾಯಕ ಸಮುದಾಯದ ಜನರೇ ಇರುವ ಗ್ರಾಮದಲ್ಲಿ ನಡೆದ ಈ ಆಚರಣೆ ಗಮನ ಸೆಳೆಯಿತು. ಇಡೀ ಗ್ರಾಮದ ಜನರು ಕಲೆತು ಧಾರ್ಮಿಕ ಕಾರ‍್ಯಕ್ರಮಗಳನ್ನು ನಡೆಸಿದರು. ಕಳಶಗಳನ್ನು ಪೂಜಿಸಿ ಮಳೆಗಾಗಿ ಸಂಕಲ್ಪದ ಮೊರೆಯಿಟ್ಟರು.

Latest Videos
Follow Us:
Download App:
  • android
  • ios