Asianet Suvarna News Asianet Suvarna News

Bengaluru: ಫುಟ್ ಪಾತ್ ರೈಡಿಂಗ್ ವಿರುದ್ಧ ಸಿಡಿದೆದ್ದ ಪಾದಚಾರಿ, ಅತಿಥಿಗಳಂತೆ ಬಂದು ಹೋದ ಪೊಲೀಸ್ರು!

ಫುಟ್ ಪಾತ್ ನಲ್ಲಿ ಸವಾರಿ ಮಾಡುವಂತಿಲ್ಲ ಎಂಬ ನಿಯಮವಿದ್ದರೂ ವಾಹನ ಸವಾರನೊಬ್ಬ ಬೈಕ್ ರೈಡಿಂಗ್ ಮಾಡಿದ್ದು, ಇದನ್ನು ವಿರೋಧಿಸಿ ಪಾದಾಚಾರಿಯ ವಿಡಿಯೋವೊಂದು ವೈರಲ್ ಆಗಿದೆ.

bengaluru public oppose biker riding on footpath video goes viral gow
Author
First Published May 14, 2023, 1:28 PM IST

ಬೆಂಗಳೂರು (ಮೇ.14): ಒಂದೆಡೆ ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ, ಇದರಿಂದ ಸಾರ್ವಜನಿಕರಿಗೂ ತುಂಬಾ ತೊಂದರೆಯಾಗಿತ್ತು. ಪಾದಾಚಾರಿಗಳಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಫುಟ್ ಪಾತ್ ಗಳನ್ನು ನಿರ್ಮಿಸಲಾಗಿದೆ. ಆದರೆ ದ್ವಿಚಕ್ರ ವಾಹನ ಸವಾರರು ಈ ನಿಯಮವನ್ನು ಉಲ್ಲಂಘಿಸಿ ಪಾದಾಚಾರಿ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಫುಟ್ ಪಾತ್ ನಲ್ಲಿ ಸವಾರಿ ಮಾಡುವಂತಿಲ್ಲ ಎಂಬ ನಿಯಮವಿದ್ದರೂ ವಾಹನ ಸವಾರನೊಬ್ಬ ಬೈಕ್ ರೈಡಿಂಗ್ ಮಾಡಿದ್ದು, ಇದನ್ನು ವಿರೋಧಿಸಿ ಪಾದಾಚಾರಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ಓಡಾಡುವ ಫುಟ್ ಪಾತ್ ನಲ್ಲಿ ಸವಾರಿ ಮಾಡುವಂತಿಲ್ಲ.  ಪಾದಚಾರಿ ಫುಟ್ ಪಾತ್ ರೈಡರ್ ಗಳ ವಿರುದ್ಧ ಸಿಡಿದೆದ್ದರು. ಫುಟ್ ಪಾತ್ ಮೇಲೆ ಬೈಕ್ ಸವಾರಿ ಮಾಡುತ್ತಿದ್ದವನ ಬೈಕ್ ಅಡ್ಡ ಹಾಕಿ ಪಾದಚಾರಿ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಗಲಾಟೆ ತಾರಕ್ಕೇರಿ ಇಬ್ಬರೂ ಕೈ ಕೈ ಮಿಲಾಯಿಸಿಕೊಂಡಿದ್ದು. ಈ ಸಂಬಂಧ ವಿಡಿಯೋ ವೈರಲ್ ಆಗಿದೆ.

ಹೊಸಕೋಟೆ: ಮತ ಹಾಕಿಲ್ಲ ಅನ್ನೋ ವಿಚಾರಕ್ಕೆ ಗಲಾಟೆ, ದೊಡ್ಡಪ್ಪನನ್ನೇ ಕೊಲೆ ಮಾಡಿದ ಮಗ..!

ರಸ್ತೆ ಫ್ರೀ ಇದ್ದರೂ ಬೈಕ್ ಸವಾರ ಫುಟ್ ಪಾತ್ ಮೇಲೆ ಸವಾರಿ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ  ಪಾದಚಾರಿ  ಫುಟ್ ಪಾತ್ ನಿಂದ ವಾಹನ ರಸ್ತೆಗೆ ಇಳಿಸುವವರೆಗೂ ಪಟ್ಟು ಬಿಡಲಿಲ್ಲ. ಈ ವೇಳೆ ಇಬ್ಬರು ಜಗಳವಾಡುತ್ತಿದ್ದ ಸ್ಥಳಕ್ಕೆ ಬಂದ ಇಬ್ಬರು ಕಾನ್ಸ್ಟೇಬಲ್ ಗಳು 'ಗೆಸ್ಟ್ ಅಪೀರಿಯನ್ಸ್'  ನಂತೆ ಬಂದು ಹೋದರು. ನಂತರ ಇಬ್ಬರಿಗೂ ಗದರಿಸಿ ಅಲ್ಲಿಂಸ ಕಾಲ್ಕಿತ್ತರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ನಡೆಗೆ ಕೂಡ ಆಕ್ರೋಶ ವ್ಯಕ್ತವಾಗಿದೆ.

Bengaluru: ಪತ್ನಿ ಶೋಕಿಗೆ ಹಣ ಹೊಂದಿಸಲಾಗದೇ, ಮಕ್ಕಳ ಸಮೇತ ತಂದೆಯೂ ಆತ್ಮಹತ್ಯೆ!

Follow Us:
Download App:
  • android
  • ios