ಕೆಪಿಟಿಸಿಎಲ್ ಕೈಗೊಂಡಿರುವ ತುರ್ತು ನಿರ್ವಹಣಾ ಕಾಮಗಾರಿಯಿಂದಾಗಿ ನವೆಂಬರ್ 30ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ಲಾಟಿನಮ್ ಸಿಟಿ ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ಕೈಗೊಳ್ಳಲಾಗಿರುವ ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ನವೆಂಬರ್ 30ರಂದು ನಗರದ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ, 66/11 ಕೆವಿ ಪ್ಲಾಟಿನಮ್ ಸಿಟಿ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು

ಈ ಕೆಳಗಿನ ಪ್ರದೇಶಗಳು ಹಾಗೂ ಸಂಸ್ಥೆಗಳಲ್ಲಿ ನಾಳೆ ವಿದ್ಯುತ್ ಲಭ್ಯವಿರುವುದಿಲ್ಲ. ಅವುಗಳೆಂದರೆ ರಿಲಯನ್ಸ್ ಇಂಡಸ್ಟ್ರೀಸ್, ಕರ್ಲೋನ್, CKA, ಅಲಿಸ್ಡಾ, ಟಾಟಾ ಅಕೆವಲ್, ಕಾರ್ಲೆ, ರಾಘವೇಂದ್ರ ಲೇಔಟ್, RNS ಮೋಟಾರ್ಸ್, ಮುನೇಶ್ವರ ನಗರ, ವೈಷ್ಣವಿ ನಕ್ಷತ್ರ ಅಪಾರ್ಟ್‌ಮೆಂಟ್, ಲೆಫ್ಟಿನೆಂಟ್ ಕಾರ್ಲೆ, ಮುನೇಶ್ವರ ನಗರ 1ನೇ ಬ್ಲಾಕ್, RTO ಟ್ರಾಕ್‌ಮೆನ್ ರಸ್ತೆ, ಪ್ಲಾಟಿನಮ್ ಸಿಟಿ ಅಪಾರ್ಟ್‌ಮೆಂಟ್, BFW, NTRO, ಜಲ ಸೌಧ, ಸುತ್ತಮುತ್ತಲಿನ ಇನ್ನೂ ಕೆಲವು ಪ್ರದೇಶಗಳು, ವಿದ್ಯುತ್ ವ್ಯತ್ಯಯದಿಂದ ಮನೆ, ವ್ಯಾಪಾರ ಮತ್ತು ಕೈಗಾರಿಕಾ ಚಟುವಟಿಕೆಗಳು ಪರಿಣಾಮಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ, ನಾಗರಿಕರು ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಂತೆ ಬೆಸ್ಕಾಂ ಮನವಿ ಮಾಡಿದೆ.

ವಿದ್ಯುತ್ ಕುಂದು–ಕೊರತೆಗಳಿಗಾಗಿ ಸಹಾಯವಾಣಿ ವಿವರಗಳು

ವಿದ್ಯುತ್ ಸಂಬಂಧಿತ ಯಾವುದೇ ಅಸಮಾಧಾನಗಳ ಪರಿಹಾರಕ್ಕಾಗಿ ನಾಗರಿಕರು ಹಾಗೂ ರೈತರು ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆ ಮಾಡುವಂತೆ ಸೂಚಿಸಲಾಗಿದೆ. 1912 ಲಭ್ಯವಿಲ್ಲದಿದ್ದರೆ WhatsApp ಮೂಲಕ ದೂರು ಸಲ್ಲಿಸಬಹುದು. ಒಂದು ವೇಳೆ 1912 ಸಂಖ್ಯೆ ತೊಡಕು ಕಂಡಲ್ಲಿ, ಸಾರ್ವಜನಿಕರು ತಮ್ಮ ಜಿಲ್ಲೆಯ WhatsApp ಸಹಾಯವಾಣಿ ಸಂಖ್ಯೆಗೆ ದೂರು ಕಳುಹಿಸಬಹುದು. ಬೆಸ್ಕಾಂನ 8 ಜಿಲ್ಲೆಗಳಿಗೂ ಪ್ರತ್ಯೇಕ WhatsApp ದೂರು ಸಂಖ್ಯೆಗಳನ್ನು ಒದಗಿಸಲಾಗಿದೆ.

WhatsApp ಸಹಾಯವಾಣಿ ಸಂಖ್ಯೆಗಳ ಪಟ್ಟಿ

ಬೆಂಗಳೂರು ನಗರ ಜಿಲ್ಲೆ

ದಕ್ಷಿಣ ವೃತ್ತ: 8277884011

ಪಶ್ಚಿಮ ವೃತ್ತ: 8277884012

ಪೂರ್ವ ವೃತ್ತ: 8277884013

ಉತ್ತರ ವೃತ್ತ: 8277884014

ಇತರೆ ಜಿಲ್ಲೆಗಳು

ಕೋಲಾರ: 8277884015

ಚಿಕ್ಕಬಳ್ಳಾಪುರ: 8277884016

ಬೆಂಗಳೂರು ಗ್ರಾಮಾಂತರ: 8277884017

ರಾಮನಗರ: 8277884018

ತುಮಕೂರು: 8277884019

ಚಿತ್ರದುರ್ಗ: 8277884020

ದಾವಣಗೆರೆ: 8277884021

ದೂರುಗಳ ತ್ವರಿತ ಪರಿಹಾರಕ್ಕೆ BESCOM ಭರವಸೆ

ಸಹಾಯವಾಣಿ 1912 ಅಥವಾ WhatsApp ಮೂಲಕ ದೂರು ಸಲ್ಲಿಸಿದ ಕೂಡಲೇ, ಗ್ರಾಹಕ ಸೇವಾ ಪ್ರತಿನಿಧಿಗಳು ಸಂಬಂಧಿಸಿದ ಉಪವಿಭಾಗಗಳಿಗೆ ಮಾಹಿತಿ ರವಾನಿಸಿ, ದೂರುಗಳಿಗೆ ತ್ವರಿತ ಪರಿಹಾರ ಒದಗಿಸಲಾಗುವುದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ನವೀಕರಣ ಕಾಮಗಾರಿಗಳಿಂದ ಉಂಟಾಗುವ ತೊಂದರೆಗಾಗಿ ವಿಷಾದ ವ್ಯಕ್ತಪಡಿಸಿರುವ ಬೆಸ್ಕಾಂ, ಸಾರ್ವಜನಿಕರಿಗೆ ಸಹಕರಿಸುವಂತೆ ವಿನಂತಿಸಿದೆ.