ಬೆಂಗಳೂರಿನ ಹಲವೆಡೆ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಬೆಸ್ಕಾಂನಿಂದ ತುರ್ತು ನಿರ್ವಹಣಾ ಕಾರ್ಯ ನಡೆಯಲಿರುವುದರಿಂದ ಈ ವ್ಯತ್ಯಯ ಉಂಟಾಗಲಿದೆ. ಬಾಲಾಜಿ ಲೇಔಟ್, ಮಲ್ಲತ್ತಹಳ್ಳಿ, ಬಸವನಗುಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಪರೀಕ್ಷಾ ಸಮಯದಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಮನವಿ ಮಾಡಿದೆ.
ಬೆಂಗಳೂರಿನಲ್ಲಿ ಹಲವು ಕಡೆ ಭಾನುವಾರ ವಿದ್ಯುತ್ ವ್ಯತ್ಯಯವಾಗಲಿದೆ. ತುರ್ತು ನಿರ್ವಹಣಾ ಕೆಲಸಗಳು ನಡೆಯಲಿರುವುದರಿಂದ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿಕೊಂಡಿದೆ. ಬ್ಯಾಡರಹಳ್ಳಿ 66/11 ಕೆವಿ ಮತ್ತು ಶ್ರೀಗಂಧಕವಲು 66/11 ಕೆವಿ ಸಬ್‌ಸ್ಟೇಷನ್‌ಗಳಲ್ಲಿ ಕೆಪಿಟಿಸಿಎಲ್‌ನಿಂದ ನಿಗದಿತ ನಿರ್ವಹಣಾ ಕಾರ್ಯಗಳು ನಡೆಯಲಿವೆ ಎಂದು ಬೆಸ್ಕಾಂ ಘೋಷಿಸಿರುವುದರಿಂದ , ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳು:
ಬಾಲಾಜಿ ಲೇಔಟ್, ಭವಾನಿ ಲೇಔಟ್, ಗೊಲ್ಲರಹಟ್ಟಿ, ರತ್ನಾನಗರ, ಮಾಡರ್ನ್ ಲೇಔಟ್, ಡಿ ಗ್ರೂಪ್ ಲೇಔಟ್, ಹೇರೋಹಳ್ಳಿ, ತುಂಗಾನಗರ, ಕೇಪೇಗೌಡ ನಗರ, ಪೊಲೀಸ್ ಕ್ವಾರ್ಟರ್ಸ್, ಬೈರವೇಶ್ವರನಗರ ಇಂಡಸ್ಟ್ರಿಯಲ್ ಎಸ್ಟೇಟ್, ಹೊಸಹಳ್ಳಿ, ಚಿಕ್ಕ ಗೊಲ್ಲರಹಟ್ಟಿ, ಅಣ್ಚಟ್ಟನಗರ ಪಣಣನಗರ, ಕಲ್ಲಹಳ್ಳಿ, ಕಲ್ಲಹಳ್ಳಿ, ಪಣಣಕಟ್ಟೆ, ಪಣಣಕಟ್ಟೆ, ಪಣಣಕಟ್ಟೆ, ಪಾನ್‌ಟಿಸಿನಗರ, ರತ್ನನಗರ, ಡಿ. ನಡೆಕೇರಪ್ಪ ಇಂಡಸ್ಟ್ರಿಯಲ್ ಎಸ್ಟೇಟ್, ಮಹದೇಶ್ವರನಗರ, ಮಾರುತಿ ನಗರ, ನಾಗರಹೊಳೆ ನಗರ, ಮುನೇಶ್ವರ ನಗರ, ಸಂಜೀವ್ ನಗರ, ಅನ್ನಪೂರ್ಣೇಶ್ವರಿ ನಗರ, ಹೆಲ್ತ್ ಲೇಔಟ್, ಸುಂಕದಕಟ್ಟೆ ಕೈಗಾರಿಕಾ ಪ್ರದೇಶ, ಚಂದನ ಬಡಾವಣೆ, ಕೆಬ್ಬಹಳ್ಳ, ರಾಜೀವ್ ಗಾಂಧಿನಗರ, ಚನ್ನಪ್ಪ ಲೇಔಟ್, ಸ್ವಿನಿವಾಸನಗರ, ಶಂಕರಪ್ಪ ಲೇಔಟ್, ಸ್ವಿನಿವಾಸನಗರ, ಪೈಪ್‌ಲೈನ್ ರಸ್ತೆ ಹೆಗ್ಗನಹಳ್ಳಿ ಮುಖ್ಯರಸ್ತೆ, ಎನ್‌ಜಿಇಎಫ್ ಲೇಔಟ್, ಎಂಪಿಎಂ ಲೇಔಟ್, ಸರ್ ಎಂವಿ 9ನೇ ಬ್ಲಾಕ್, ಮಲ್ಲತ್ತಹಳ್ಳಿ, ಕೆಂಗುಂಟೆ, ಉಳ್ಳಾಲ ಮುಖ್ಯರಸ್ತೆ, ಲಕ್ಷ್ಮೀ ಆಸ್ಪತ್ರೆ, ಚನ್ನಿಗಪ್ಪ ಕೈಗಾರಿಕಾ ಪ್ರದೇಶ, ಕವಿತಾ ಆಸ್ಪತ್ರೆ, ವೊಕ್ಕಲಿಗರ ಸಂಘದ ಆಸ್ಪತ್ರೆ, ಅನ್ನಪೂರ್ಣೇಶ್ವರಿ ನಗರ, ಆರ್ಕಿಡ್ ಶಾಲೆ, ಕೊಟ್ಟಿಗೆಪಾಳ್ಯ, ಸುಮನಹಳ್ಳಿ, ಸಜ್ಜೆಪಾಳ್ಯ, ಸುಂಕದಕಟ್ಟೆ ಮುಖ್ಯರಸ್ತೆ, ಹೊಯ್ಸಳ ನಗರ, ಮೋಹನ್ ಥಿಯೇಟರ್, ಶಿವ ಫಾರ್ಮ್, ಮಾರುತಿ ನಗರ, ಹನುಮಂತ ನಗರ, ಗವಿಪುರಂ, ಬಸಪ್ಪ ಲೇಔಟ್, ಶ್ರೀನಗರ, ಜೊಲ್ಲೆಗೌಡ ಟೆಂಪಲ್ ರಸ್ತೆ, ಕೆಂಪೇಗೌಡನಗರ, ತೆಪ್ಪೋನ್ ಟೆಂಪಲ್ ರಸ್ತೆ. ಎಕ್ಸ್‌ಚೇಂಜ್, ಗಿರಿನಗರ 2ನೇ ಹಂತ, ವಿದ್ಯಾಪೀಠ, ಸಿಟಿ ಬೆಡ್, ತ್ಯಾಗರಾಜನಗರ, ಬಿಎಸ್‌ಕೆ 1ನೇ ಹಂತ, ಎನ್‌ಆರ್ ಕಾಲೋನಿ, ಹೊಸಕೇರಹಳ್ಳಿ, ನಾಗೇಂದ್ರ ಬ್ಲಾಕ್, ಮುನೇಶ್ವರ ಬ್ಲಾಕ್, ಆವಲಹಳ್ಳಿ, ಕೆಆರ್ ಆಸ್ಪತ್ರೆ ರಸ್ತೆ, ಬಿಡಿಎ ಲೇಔಟ್, ಪಿಇಎಸ್ ಕಾಲೇಜು, ಎನ್‌ಟಿವೈ ಲೇಔಟ್, ಕೆಆರ್ ಇಂಡಸ್ಟ್ರಿಯಲ್ ಲೇಔಟ್, ಕೆಆರ್ ಇಂಡಸ್ಟ್ರಿಯಲ್ ಲೇಔಟ್, ಕೆಆರ್ ಇಂಡಸ್ಟ್ರಿಯಲ್ ಲೇಔಟ್, ಕಾನ್ಪುರಾಕ ಲೇಔಟ್ ರಸ್ತೆ, ಬಸವನಗುಡಿ, ಶಾಸ್ತ್ರಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಅಲ್ಯೂಮಿನಿಯಂ ಏಣಿಗೆ ಮೂರು ವರ್ಷಗಳಲ್ಲಿ 17 ಕಾರ್ಮಿಕರು ಸಾವು: ಕೊಡಗು ಚೆಸ್ಕಾಂ ಕಾರ್ಯಪಾಲಕ ಹೇಳಿದ್ದೇನು?
ವಿದ್ಯಾರ್ಥಿಗಳಿಗೆ ಸಂಕಟ ತಂದಿಡುತ್ತಿರುವ ವಿದ್ಯುತ್!
ರಾಜ್ಯದಲ್ಲಿ ಪರೀಕ್ಷೆ ಟೈಮಲ್ಲಿ ಕರೆಂಟ್ ಕಣ್ಣಾಮುಚ್ಚಲೆ ಆಡುತ್ತಿದೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬೆಸ್ಕಾಂ ಕ್ರಮ ಕೈಕೊಳ್ಳಬೇಕು. ಪರೀಕ್ಷೆ ವೇಳೆ ಸರಾಗವಾಗಿ ವಿದ್ಯುತ್ ನೀಡುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಬೆಸ್ಕಾಂ ಎಂ ಡಿ ಶಿವಶಂಕರ ಸೂಚನೆ ನೀಡಿದ್ದಾರೆ.
ಬೇಸಿಗೆ ಮುನ್ನವೇ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳವಾಗಿದೆ. ಹೀಗಾಗಿ ಆಗಾಗ ಬೆಂಗಳೂರು ಸೇರಿ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಕಟ್ ಹೆಚ್ಚುತ್ತಿದೆ. ಸಂಜೆ 6 ರಿಂದ ಬೆಳಗ್ಗೆ 6 ಗಂಟೆಯವರೆಗೆ ವಿದ್ಯುತ್ ಕಟ್ ಆಗದಂತೆ ಕ್ರಮ ವಹಿಸಿ. ಅನಾವಶ್ಯಕವಾಗಿ ಪವರ್ ಕಟ್ ಮಾಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.
ಮುಂದಿನ ತಿಂಗಳು 1 ರಿಂದ ಎಸ್ಎಸ್ಎಲ್ಸಿ- ಪಿಯುಸಿ ಪರೀಕ್ಷೆ ಆರಂಭವಾಗುತ್ತಿದ್ದು, ಶೈಕ್ಷಣಿಕ ವರ್ಷದ ಪರೀಕ್ಷೆಗಳು ಮುಗಿಯುವರೆಗೆ ಸಮಸ್ಯೆ ಆಗದಂತೆ ವಿದ್ಯುತ್ ಸರಬರಾಜು ಮಾಡಿ ಎಂದು ಸೂಚನೆ ನೀಡಲಾಗಿದೆ.
ಕೈ ಕೊಟ್ಟ ಕರೆಂಟ್, ಬಳ್ಳಾರಿಯ ಬಿಮ್ಸ್‌ನಲ್ಲಿ ಮೊಬೈಲ್ ಟಾರ್ಚ್‌ನಲ್ಲಿ ರೋಗಿಗೆ ಚಿಕಿತ್ಸೆ!
ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯಾಗುತ್ತೆ. ರಾತ್ರಿ ವೇಳೆ ಸಿಂಗಲ್ ಫೇಸ್ ಕೃಷಿ ಪಂಪ್ ಸೆಟ್ ಗೆ ಬಳಸಬೇಡಿ ಎಂದು ರೈತರಿಗೆ ಮನವಿ ಮಾಡಲಾಗಿದೆ. ಆದ್ರೂ ನಗರದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣಮುಚ್ಚಾಲೆ ಆಡುತ್ತಿದೆ. ಹೀಗಾಗಿ ವಿದ್ಯುತ್ ಸಮಸ್ಯೆ ಆಗದಂತೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ.
