ಬೆಂಗಳೂರು(ಫೆ.17): ಸಂಬಂಧಿಕರು ಸತ್ತರೆ ಅಂತಿಮ ಸಂಸ್ಕಾರವನ್ನು ಖರ್ಚು ಎಂದು ನೋಡುವವರ ಮಧ್ಯೆ ಅನಾಥ ಮೃತದೇಹದ ಅಂತಿಮ ಸಂಸ್ಕಾರವನ್ನು ನೆರವೇರಿಸುವ ಮೂಲಕ ಬೆಂಗಳೂರಿನ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರಿನಲ್ಲಿ ಮಾನವೀಯತೆ ಮೇರೆದ ಪೊಲೀಸರು ವಾರಸುದಾರರಿಲ್ಲದ ಅಪರಿಚಿತ ಮೃತದೇಹದ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಂದ ಅಂತ್ಯ ಸಂಸ್ಕಾರ ನಡೆದಿದ್ದು, ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಮೃತಪಟ್ಟಿದ್ದರು.

'ಹಾಡುತ್ತಾ, ಕುಣಿಯುತ್ತಾ ಇದ್ದವರು ಕ್ಷಣದಲ್ಲೇ ಹೆಣವಾದ್ರು..'!

ಆದರೆ ಈ ಬಗ್ಗೆ ಸೂಚನೆ ಕೊಟ್ಟರೂ ಯಾರು ವಾರಸುದಾರರು ಅಥವಾ ಸಂಬಂಧಿಕರು ಬಂದಿರಲಿಲ್ಲ. ಹೀಗಾಗಿ ಪೊಲೀಸರಿಂದಲೇ ಅಂತ್ಯ ಸಂಸ್ಕಾರ ನಡೆದಿದೆ. ಸಂಬಂಧಿಕರು ಮಾಡಬೇಕಾದ ಅಂತಿಮ ವಿಧಿ ವಿಧಾನಗಳನ್ನು ಪೊಲೀಸರು ನೆರವೇರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಕೆಲಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.