Bengaluru - ಪೊಲೀಸ್ ಸಹಾಯವಾಣಿ 112 ರಲ್ಲಿ ತಾಂತ್ರಿಕ ಸಮಸ್ಯೆ: ನಿರ್ವಹಣಾ ವೇಳೆ ಬದಲಿ ಸಂಖ್ಯೆಗೆ ಕರೆ ಮಾಡಿ
ಬೆಂಗಳೂರಿನ ನಿವಾಸಿಗಳು ಯಾವುದೇ ಅಪರಾಧ ಸಂಬಂಧಿತ ವಿಚಾರಗಳಿಗೆ ಪೊಲೀಸರನ್ನು ಸಂಪರ್ಕಿಸಲು ಬಳಸುತ್ತಿದ್ದ 112 ಸಹಾಯವಾಣಿ ಸಂಖ್ಯೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ.
ಬೆಂಗಳೂರು (ಜೂ.04): ರಾಜ್ಯ ರಾಜಧಾನಿ ಬೆಂಗಳೂರಿನ ನಿವಾಸಿಗಳು ಯಾವುದೇ ಅಪರಾಧ ಸಂಬಂಧಿತ ವಿಚಾರಗಳಿಗೆ ಪೊಲೀಸರನ್ನು ಸಂಪರ್ಕ ಮಾಡಲು ಬಳಸುತ್ತಿದ್ದ 112 ಸಹಾಯವಾಣಿ ಸಂಖ್ಯೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬದಲಿ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ.
ಬೆಂಗಳೂರು ಪೊಲೀಸ್ ಇಲಾಖೆಯ 112 ಸಂಖ್ಯೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಟೆಕ್ನಿಕಲ್ ತೊಂದರೆಯಿಂದಾಗಿ 112 ಸ್ಥಗಿತವಾಗಿದೆ. ಈ ಬಗ್ಗೆ ಟ್ವಿಟರ್ ಮೂಲಕ ಬೆಂಗಳೂರು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಟೆಕ್ನಿಕಲ್ ತೊಂದರೆಯಾಗಿ 112 ಗೆ ಕರೆಗಳು ಬರುತ್ತಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಪರ್ಯಾಯ ನಂಬರ್ ಬಳಸುವಂತೆ ಸೂಚನೆ ನೀಡಲಾಗಿದೆ. 112 ಬದಲಿಗೆ 080-22943000 ಬಳಸುವಂತೆ ಸೂಚನೆ ನೀಡಿದ್ದಾರೆ. ಯಾವುದೇ ಅಪರಾಧ ಸಂಬಂಧಿತ ವಿಚಾರಗಳಿಗೆ ಪರ್ಯಾಯ ನಂಬರ್ ಬಳಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.
ಹ್ಯಾಕ್ ಆಗಿಲ್ಲವೆಂದು ಸ್ಪಷ್ಟೀಕರಣ ಕೊಟ್ಟ ಪೊಲೀಸ್ ಇಲಾಖೆ: ಬೆಂಗಳೂರು ಪೊಲೀಸ್ ಇಲಾಖೆಯ 112 ಸಂಖ್ಯೆ ಹ್ಯಾಕ್ ಆಗಿದೆಯಾ ಎಂಬ ಅನುಮಾನವೂ ಕಾಡುತ್ತಿತ್ತು. ಆದರೆ, ತಾಂತ್ರಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಸಹಾಯವಾಣಿ ಸಂಖ್ಯೆಗೆ ಕರೆಗಳು ಬರುತ್ತಿರಲಿಲ್ಲವೆಂದು ಅದನ್ನು ದುರಸ್ತಿ ಮಾಡಲಾಗುತ್ತಿದೆ. ಆದರೆ, ಪೊಲೀಸ್ ಇಲಾಖೆಯ ಸಹಾಯವಾಣಿಯನ್ನು ಯಾರೊಬ್ಬರೂ ಹ್ಯಾಕ್ ಮಾಡಿಲ್ಲಎಂದು ಸ್ಪಷ್ಟೀಕರಣವನ್ನು ನೀಡಿದೆ. ಸದ್ಯಕ್ಕೆ ಈ ಸಹಾಯವಾಣಿ ಸಂಖ್ಯೆಯು ನಿರ್ವಹಣೆಯಲ್ಲಿದ್ದು, ತುರ್ತು ಸಂದರ್ಭಗಳಿಗೆ 080-22943000 ದೂರವಾಣಿ ಸಂಖ್ಯೆಗೆ ಕರೆ ಮಾಡುವಂತೆ ಬೆಂಗಳೂರು ಪೊಲೀಸ್ ಇಲಾಖೆಯು ಮಾಹಿತಿ ನೀಡಿದೆ.