ಪಶ್ಚಿಮ ಬಂಗಾಳ ಮೂಲದ, ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದರು. 22 ದಿನಗಳ ಸತತ ಮತ್ತು ಸವಾಲಿನ ಹುಡುಕಾಟದ ನಂತರ, ಗೋವಿಂದಪುರ ಪೊಲೀಸರು ಅವರನ್ನು ಪತ್ತೆಹಚ್ಚಿ, ಮಗನೊಂದಿಗೆ ಪುನಃ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು (ಮಾ.25): ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಉದ್ಯೋಗವನ್ನು ಅರಸಿಕೊಂಡು ಬಂದ ವ್ಯಕ್ತಿಯೊಬ್ಬರು ತನ್ನೊಂದಿಗೆ ಕುಟುಂಬವನ್ನೂ ಕರೆತಂದು ಇಲ್ಲಿ ವಾಸವಾಗಿದ್ದರು. ಆದರೆ, ಅವರ ತಂದೆಗೆ ಇತ್ತೀಚೆಗೆ ಅನಾರೋಗ್ಯ ಕಾಣಿಸಿಕೊಂಡು ಬುದ್ಧಿಮಾಂದ್ಯಗೊಂಡಿದ್ದರು. ಆದರೆ, ಅವರು ಮನೆಯಿಂದ ಹೊರಹೋಗಿ ವಿಳಾಸ ತಿಳಿಯದೇ ತಪ್ಪಿಸಿಕೊಂಡಿದ್ದು, ಗೋವಿಂದಪುರ ಠಾಣೆ ಪೊಲೀಸರು 22 ದಿನಗಳ ನಿರಂತರ ಹುಡುಕಾಟದ ಬಳಿಕ ಬುದ್ಧಿಮಾಂಧ್ಯ ವೃದ್ಧನನ್ನು ಪುನಃ ಮನೆಗೆ ಸೇರಿಸಿದ್ದಾರೆ.

Add Asianetnews Kannada as a Preferred SourcegooglePreferred

ಹೌದು, ಕಳೆದ 22 ದಿನದಿಂದ ನಾಪತ್ತೆಯಾಗಿದ್ದ ಬುದ್ದಿ ಮಾಂದ್ಯರಾಗಿದ್ದ ಅಪ್ಪನನ್ನು ಬೆಂಗಳೂರಿನ ಗೋವಿಂದಪುರ ಪೊಲೀಸರು ಹುಡುಕಿಕೊಟ್ಟಿದ್ದಾರೆ. ಕಳೆದ 22 ದಿನದಿಂದ ವೃದ್ದ ತಂದೆ ಗೌತಮ್ ಗಂಗೂಲಿ ನಾಪತ್ತೆಯಾಗಿದ್ದರು. ಪಶ್ಚಿಮ ಬಂಗಾಳ ಮೂಲದ ಕುಟುಂಬ ಬೆಂಗಳೂರಿನ ಗೋವಿಂದ ಪುರದಲ್ಲಿ ವಾಸವಾಗಿತ್ತು. ತಂದೆ ನಾಪತ್ತೆಯಾಗಿದ್ದ ಬಗ್ಗೆ ಅವರ ಪುತ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರ ದೂರಿನ ಅನ್ವಯ ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲು ಮಾಡಿಕೊಂಡು, ನಗರದ ಎಲ್ಲಾ ಭಾಗದಲ್ಲಿ ಹುಡುಕಾಟ ನಡೆಸಿದ್ದರು.

ಪೊಲೀಸರಿಗಿದ್ದ ದೊಡ್ಡ ಸವಾಲುಗಳು

ಆದರೆ, ಪೊಲೀಸರಿಗೆ ವೃದ್ಧನ ಹುಡುಕಾಟವೇ ಭಾರೀ ಸವಾಲಾಗಿತ್ತು. ಏಕೆಂದರೆ ವೃದ್ಧ ಗೌತಮ್ ಗಂಗೂಲಿ ನಾಪತ್ತೆಯಾದಾಗ ಅವರ ವ್ಯಕ್ತಿ ಬಳಿ ಯಾವುದೇ ಮೊಬೈಲ್ ಫೋನ್ ಇರಲಿಲ್ಲ. ಅವರಿಗೆ ಕನ್ನಡ ಭಾಷೆಯೂ ಬರುತ್ತಿರಲಿಲ್ಲ. ಇನ್ನು ಅವರು ಬುದ್ದಿ ಮಾಂದ್ಯರಾಗಿದ್ದ ಕಾರಣ ಮಾಹಿತಿಯೇ ಸಿಕ್ಕಿರಲಿಲ್ಲ. ಎಲ್ಲಾ ಪೊಲೀಸ್ ಠಾಣೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ ಹಾಕಿ ಪೊಲೀಸರು ಬೀದಿಬೀದಿ ಹುಡುಕಿದ್ದರು. ಕನ್ನಡದ ಗೋದಿಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ರೀತಿಯಲ್ಲಿ ತಂದೆ ಮಗನ ಹುಡುಕಾಟ ನಡೆಸಿದ್ದರು, ಗೊಂವಿದಪುರ ಪೊಲೀಸರು ಕೊನೆಗೂ ನಾಪತ್ತೆಯಾದ ತಂದೆಯನ್ನು ಹುಡುಕಿ ಮಗನ ಬಳಿ ಸೇರಿಸಿದ್ದಾರೆ.