ಬೆಂಗಳೂರಿನ ಮುಸ್ಲಿಂ ಏರಿಯಾದಲ್ಲಿ 2 ದಿನ ನಿಷೇಧಾಜ್ಞೆ ಜಾರಿ: ಪೊಲೀಸ್‌ ಕಮಿಷನರ್ ದಯಾನಂದ್‌ ಆದೇಶ

ಸಿಲಿಕಾನ್‌ ಸಿಟಿ ಬೆಂಗಳೂರಿನ ಪುಲಿಕೇಶ ನಗರದಲ್ಲಿ  ಶನಿವಾರ ಬೆಳಗ್ಗೆಯಿಂದ ಭಾನುವಾರ ಸಂಜೆ 5 ಗಂಟೆವರೆಗೆ ನಿಷೇಧಾಜ್ಞೆಯನ್ನು ಜಾರೊಳಿಸಿ ಆದೇಶಿಸಲಾಗಿದೆ.

Bengaluru Police Commissioner Dayanand imposed two day curfew in Muslim area Pulikeshi Nagar sat

ಬೆಂಗಳೂರು (ನ.04): ರಾಜ್ಯದಲ್ಲಿ ಹಿಂದೂಗಳ ಗಣೇಶ ಹಬ್ಬ ಹಾಗೂ ಮುಸ್ಲಿಂ ಸಮುದಾಯದ ಈದ್‌ ಮಿಲಾದ್‌ ಹಬ್ಬದ ವೇಳೆ ಕೋಲಾರ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಧಾರ್ಮಿಕ ಗಲಭೆಗಳು ನಡೆದಿದ್ದವು. ಹೀಗಾಗಿ, ಬೆಂಗಳೂರಿನಲ್ಲಿ ನಡೆಯುತ್ತಿರುವ ದಸರಾ ಹಬ್ಬದ ಪಲ್ಲಕ್ಕಿ ಉತ್ಸವದಲ್ಲಿ ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿ ಕೋಮು ಗಲಭೆ ಉಂಟಾಗುವ ಮುನ್ಸೂಚನೆಯನ್ನು ಅರಿತ ಪೊಲೀಸ್‌ ಇಲಾಖೆಯು 144 ಸೆಕ್ಷನ್‌ (ನಿಷೇಧಾಜ್ಷೆ) ಜಾರಿಗೊಳಿಸಿ ಆದೇಶಿಸಿದೆ.

ಪುಲಿಕೇಶಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಗುಂಟಾದಲ್ಲಿ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 6 ಗಂಟೆಯಿಂದ ನಾಳೆ ಸಂಜೆ 5 ಗಂಟೆವರೆಗೆ ಪುಲಿಕೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು (144 ಸೆಕ್ಷನ್) ಜಾರಿಗೊಳಿಸಿ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ ಆದೇಶ ಹೊರಡಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಸಂಜೆ 5 ಗಂಟೆಯವರೆಗೆ 144 ಸೆಕ್ಷನ್ ಜಾರಿಯಲ್ಲಿ ಇರಲಿದೆ. ಈ ವೇಳೆ ದಸರಾ ಹಬ್ಬದ ಪ್ರಯಕ್ತ ಪಲ್ಲಕ್ಕಿ ಉತ್ಸವಗಳು ನಡೆಯುತ್ತವೆ. ಇದಕ್ಕೆ ಈ ವೇಳೆ ಸಾವಿರಾರು ಜನರು‌ ಪಲ್ಲಕ್ಕಿ ಉತ್ಸವ ನೋಡಲು ಬರುತ್ತಾರೆ. ಆದ್ದರಿಂದ ಗಲಭೆಗಳನ್ನು ತಡೆಯಲು ನನಿಷೇಧಾಜ್ಞೆ ಹೇರಲಾಗಿದೆ.

ಬೆಳ್ತಂಗಡಿ ಗಂಡನ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯನ್ನು ಬಾವಿಗೆ ಹಾಕಿ ಕೊಲೆಗೈದ ಕಿತಾ'ಪತಿ'

ಇನ್ನು ಪುಲಿಕೇಶಿ ನಗರದಲ್ಲಿ ದಸರಾ ಹಬ್ಬದ ಪಲ್ಲಕ್ಕಿ ಉತ್ಸವದ ವೇಳೆ ಕೆಲವು ಕಿಡಿಗೇಡಿಗಳು ಮದ್ಯ ಸೇವನೆ ಮಾಡಿ ಅಮಲಿನಲಿ ದುಷ್ಕೃತ್ಯ ಎಸೆಗುವ ಸಾಧ್ಯತೆಯಿದೆ ಎಂಬ ದೂರದೃಷ್ಟಿಯಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ನಿಷೇಧಾಜ್ಞೆ ವೇಳೆಯಲ್ಲಿ ‌ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಇನ್ನು ದಸರಾ ಪಲ್ಲಕ್ಕಿ ಉತ್ಸವ ಪೂರ್ಣಗೊಳ್ಳುವವರೆಗೂ ಪುಲಿಕೇಶಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ, ಅನ್ಯ ಕೋಮಿನ ಜನರು ಗುಂಪು ಗೂಡುವುದನ್ನು ನಿಷೇಧಿಸಲಾಗಿದೆ.

ಬೆಂಗಳೂರು/ಯಾದಗಿರಿ (ನ.04): ರಾಜ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ಬೆಳಕಿಗೆ ಬಂದು ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇದೇ ಮೊದಲ ಬಾರಿಗೆ ಪರೀಕ್ಷಾ ಕೇಂದ್ರಗಳ ಪರಿವೀಕ್ಷಕರಿಗೆ ಬಾಡಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ. ಲೆಕ್ಕ ಸಹಾಯಕರು ಹಾಗೂ ಸಹಕಾರ ಸಂಘಗಳ ನಿರೀಕ್ಷಕರ ಹುದ್ದೆಗಳ ನೇಮಕಾತಿಗಾಗಿ ನ.೪ ಮತ್ತು ೫ರಂದು ಕೆಪಿಎಸ್‌ಸಿ ರಾಜ್ಯಾದ್ಯಂತ ಪರೀಕ್ಷೆಗಳನ್ನು ನಡೆಸುತ್ತಿದೆ. ರಾಜ್ಯದ 23 ಜಿಲ್ಲಾ ಕೇಂದ್ರಗಳ 207 ಪರೀಕ್ಷಾ ಉಪಕೇಂದ್ರಗಳಲ್ಲಿ ನಡೆಸಲಾಗುವ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಪರೀಕ್ಷಾ ಕೇಂದ್ರಗಳ ಪರಿವೀಕ್ಷಕರಿಗೆ ಬಾಡಿ ಕ್ಯಾಮೆರಾ ಅಳವಡಿಸಿ ೭೮ ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳ ಪರೀಕ್ಷಾ ಚಟುವಟಿಕೆ ಮೇಲೆ ಹದ್ದಿನ ಕಣ್ಣಿಡಲು ಸಿದ್ಧತೆ ಮಾಡಿಕೊಂಡಿದೆ.

ಬಿಜೆಪಿ ನಾಯಕರ ಬರ ಅಧ್ಯಯನದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ: ಬರ ನಿರ್ವಹಣೆಗೆ ತೆರಳಲು ಸೂಚನೆ

ಪೊಲೀಸ್ ಸಬ್ ಇನ್ಸ್‌ಪೆಕ್ಟರ್(ಪಿಎಸ್‌ಐ) ಮತ್ತು ಕೆಇಎ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ಬೆಳಕಿಗೆ ಬಂದಿದ್ದು, ಪರೀಕ್ಷಾ ಪ್ರಾಧಿಕಾರಗಳಿಗೆ ಸಾಕಷ್ಟು ಮುಜುಗರವನ್ನು ತಂದೊಡ್ಡಿದೆ. ಹೀಗಾಗಿ ಪರೀಕ್ಷೆಯಲ್ಲಿ ಪಾರದರ್ಶಕತೆ, ದಕ್ಷತೆ, ನ್ಯಾಯ ಹಾಗೂ ಗೌಪ್ಯತೆ ಕಾಪಾಡಿಕೊಂಡು ನಿಷ್ಪಕ್ಷಪಾತವಾಗಿ ಪರೀಕ್ಷೆ ನಡೆಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.ನ.೪ ಮತ್ತು ೫ರಂದು ನಡೆಯುವ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ಆಧುನಿಕ ಉಪಕರಣಗಳು, ಮೊಬೈಲ್, ಬ್ಲೂಟೂತ್, ಕ್ಯಾಲ್ಕ್ಯೂಲೇಟರ್, ವೈರ್‌ಲೆಸ್ ಸೆಟ್, ಪೇಪರ್, ಬುಕ್ಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಎಲ್ಲಾ ಪರೀಕ್ಷಾ ಉಪ ಕೇಂದ್ರಗಳಲ್ಲಿ ಪರೀಕ್ಷಾ ಚಟುವಟಿಕೆಗಳ ಕುರಿತು ಪ್ರತ್ಯೇಕವಾಗಿ ವಿಡಿಯೋ ಚಿತ್ರೀಕರಣ ಮಾಡಲು ನಿರ್ಧರಿಸಲಾಗಿದೆ.

Latest Videos
Follow Us:
Download App:
  • android
  • ios