Asianet Suvarna News Asianet Suvarna News

ಬಿಜೆಪಿ ನಾಯಕರ ಬರ ಅಧ್ಯಯನದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ: ಬರ ನಿರ್ವಹಣೆಗೆ ತೆರಳಲು ಸೂಚನೆ

ರಾಜ್ಯದಲ್ಲಿ ಎಲ್ಲ ಶಾಸಕರು, ಸಚಿವರು ಬರ ನಿರ್ವಹಣೆಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರಗಳಿಗೆ ತೆರಳಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.

Karnataka all MLAs and ministers Take action for Drought management CM Siddaramaiah instruction sat
Author
First Published Nov 4, 2023, 1:15 PM IST

ಬೆಂಗಳೂರು (ನ.04): ರಾಜ್ಯದಲ್ಲಿ ಈಗಾಗಲೇ 216 ತಾಲೂಕುಗಳನ್ನು ಈಗಾಗಲೇ ಬರಪೀಡಿತವೆಂದು ಘೋಷಣೆ ಮಾಡಲಾಗಿದ್ದು, ಶಾಸಕರು ಹಾಗೂ ಸಚಿವರು ತಮ್ಮ ಸಂಬಂಧಪಟ್ಟ ಜಿಲ್ಲೆಗಳಿಗೆ ತೆರಳಿ ಬರ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್‌ ಸೂಚನೆ ನೀಡಿದ್ದಾರೆ.

ರಾಜ್ಯದ 236 ತಾಲೂಕುಗಳ ಪೈಕಿ ಇದುವರೆಗೆ 216 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಬರದ ಹಿನ್ನೆಲೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರು, ಮೇವು, ಕೃಷಿ ಕೈಗಾರಿಕೆಗಳಿಗೆ ನೀರು, ಬೆಳೆಹಾನಿ, ಜನರ ಉದ್ಯೋಗದ ಸ್ಥಿತಿ ಬರ ಪರಿಹಾರ ವಿತರಣೆ ಮುಂತಾದ ಬರ ನಿರ್ವಹಣೆ ಕಾರ್ಯಕ್ರಮಗಳನ್ನು ಕೈಗೊಳ್ಳುವ ಕುರಿತು ಸಚಿವ ಸಂಪುಟ ಸಭೆಗಳಲ್ಲಿ ಚರ್ಚಿಸಲಾಗಿದೆ. ಹಾಗೂ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಹಲವು ಬಾರಿ ನಿರ್ದೇಶನಗಳನ್ನು ನೀಡಲಾಗಿದೆ.

ಕಾಂಗ್ರೆಸ್‌ನವರು ಪಾಪಿಷ್ಟರು ಇದ್ದಾರೆ, ಅವರ ಆಡಳಿತದಲ್ಲಿ ಬರಗಾಲ ಬೀಳ್ತದೆ: ಸಂಸದ ಜಿಗಜಿಣಗಿ

ಆದರಿಂದ, ಜಿಲ್ಲಾ ಉಸ್ತುವಾರಿ ಸಚಿವರುಗಳು ಮುಂದಿನ ಎರಡು ವಾರಗಳಲ್ಲಿ ತಮ್ಮ ಉಸ್ತುವಾರಿ ಜಿಲ್ಲೆಯ ಪ್ರತಿ ತಾಲೂಕುಗಳಿಗೆ ಭೇಟಿ ನೀಡಿ, ಕುಡಿಯುವ ನೀರು, ಮೇವು, ಉದ್ಯೋಗ, ಬೆಳೆಹಾನಿ, ಮುಂತಾದವುಗಳ ಸ್ಥಿತಿಗತಿಗಳ ಕುರಿತು ಪರಿಶೀಲಿಸಿ, ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಮಾಹಿತಿ ಸಂಗ್ರಹಿಸುವುದು ಹಾಗೂ ಸ್ಥಳೀಯ ಶಾಸಕರೊಂದಿಗೆ ಗೋಶಾಲೆ, ಮೇವು ಬ್ಯಾಂಕ್, ಕುಡಿಯುವ ನೀರು, ಉದ್ಯೋಗ ಸೃಷ್ಟಿ ಮುಂತಾದ ಪರಿಹಾರ ಕ್ರಮಗಳ ಬಗ್ಗೆ ಸಮಾಲೋಚಿಸಿ, ಅಗತ್ಯವಿರುವ ಕಡೆ ಭೇಟಿ ನೀಡಿ ಪರಿಶೀಲಿಸುವುದು.

ಬರ ನಿರ್ವಹಣೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಯಾವುದೇ ರೀತಿಯ ವೈಫಲ್ಯಗಳಾಗದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುವುದು. ಬರ ಪರಿಸ್ಥಿತಿಯ ಸಂಪೂರ್ಣ ವಸ್ತುಸ್ಥಿತಿ ಹಾಗೂ ಜಿಲ್ಲೆಗಳಲ್ಲಿ ಕೈಗೂಳ್ಳಲಾದ ಬರ ನಿರ್ವಹಣೆ ಕಾರ್ಯಕ್ರಮಗಳ ಬಗ್ಗೆ ಪ್ರತಿ ತಾಲ್ಲೂಕುಗಳಲ್ಲಿ ಮಾಧ್ಯಮಗಳಿಗೆ ವಿವರಿಸಬೇಕು. ಜೊತೆಗೆ, ನವೆಂಬರ್‌ 15 ಸರ್ಕಾರಕ್ಕೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

ಸರ್ಕಾರದ ಬಗ್ಗೆ ಮಾತನಾಡದಂತೆ ಎಚ್ಚರಿಕೆ ಕೊಟ್ಟ ಸಿಎಂ ಸಿದ್ದರಾಮಯ್ಯ: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆ ವಿಚಾರ  ಚರ್ಚೆ ನಡುವೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್‌ಗೆ ತಮ್ಮ ಪಕ್ಷದ ಸಚಿವರನ್ನು ಕರೆದಿದ್ದರು. ಸಿಎಂ ಕರೆದ ಸಭೆಗೆ ಒಟ್ಟು 17 ಮಂದಿ ಸಚಿವರು ಭಾಗಿಯಾಗಿದ್ದರು. ಡಿಕೆಶಿವಕುಮಾರ್ ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದರು.ಈ ವೇಳೆ ಬಹಿರಂಗ ಹೇಳಿಕೆ ನೀಡಿದ ಸಚಿವರಿಗೆ ಸಭೆಯಲ್ಲಿ ವಾರ್ನಿಂಗ್ ಮಾಡಲಾಗಿದೆ. ಗೊಂದಲ ಹೆಚ್ಚು ಮಾಡುವ ರೀತಿಯಲ್ಲಿ ಯಾವ ಸಚಿವರು ವರ್ತಿಸಬಾರದು. ಮಿತಿ ಮೀರಿದ ಹೇಳಿಕೆಗಳನ್ನು ಸಹಿಸುವುದಿಲ್ಲ. ವ್ಯಕ್ತಿ ಪೂಜೆ ಬದಲು ಪಕ್ಷ ಪೂಜೆ ಮಾಡೋಣ ಎಂದು ಡಿಸಿಎಂ ಡಿಕೆಶಿ ಶಿವಕುಮಾರ್‌ ಖಡಕ್‌ ಎಚ್ಚರಿಕೆ ಕೊಟ್ಟರು. ಇದು  ಸಭೆಯಲ್ಲಿ ಹಾಜರಿದ್ದ ಸಚಿವ ರಾಜಣ್ಣ ಟಾರ್ಗೆಟ್ ಮಾಡಿದಂತಿತ್ತು.

ಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್‌, ಬಹಿರಂಗ ಹೇಳಿಕೆ ನೀಡಿದ ಸಚಿವರಿಗೆ ಖಡಕ್ ವಾರ್ನಿಂಗ್

ಏಕೆಂದರೆ ಎಐಸಿಸಿ ಎಚ್ಚರಿಕೆ ಬಳಿಕವೂ ಸಿಎಂ ಕುರ್ಚಿ ಬಗ್ಗೆ ಮಾತನಾಡಿದ್ದರು. ನಾನು ಯಾರಿಗೂ ಹೆದರಲ್ಲ, ಎಐಸಿಸಿಗೂ ಕೂಡ ಹೆದರುವುದಿಲ್ಲ ಎಂದು ಸಚಿವ ರಾಜಣ್ಣ ಮಾತನಾಡಿದ್ದರು. ಸಿದ್ದರಾಮಯ್ಯ ಬಳಿಕ ಪರಮೇಶ್ವರ್ ಸಿಎಂ ಆಗಲಿ ಎಂದಿದ್ದರು. ಇದು ಪಕ್ಷದ ಇರುಸು ಮುರಿಸಿಗೆ ಕಾರಣವಾಗಿತ್ತು. ಇನ್ನು ಇದೇ ವೇಳೆ ಲೋಕಸಭಾ ಟಾಸ್ಕ್ ಪೂರ್ಣ ಮಾಡಲು ತಯಾರಿ ನಡೆಸಿ, ವಾರದೊಳಗೆ ಲೋಕಸಭಾ ಕ್ಷೇತ್ರ ವಾರು ಸಭೆ ಮಾಡಿ ವರದಿ‌ ಕೊಡಿ ಎಂದು ಹಿರಿಯ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

Follow Us:
Download App:
  • android
  • ios