Asianet Suvarna News Asianet Suvarna News

Bengaluru: ಇಂದಿರಾ ಕ್ಯಾಂಟೀನ್‌ ತಿಂಡಿ ಬೆಲೆಯಲ್ಲಿ ದುಪ್ಪಟ್ಟು ಹೆಚ್ಚಳ

ಕಾಂಗ್ರೆಸ್‌ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳಿಗೆ ಚೇತರಿಕೆ ನಿಡಲು ಮುಂದಾಗಿದ್ದು, ಗುಣಮಟ್ಟದ ಆಹಾರ ನೀಡುವ ನಿಟ್ಟಿನಲ್ಲಿ ಬೆಳಗ್ಗಿನ ತಿಂಡಿ ಬೆಲೆಯನ್ನು ದುಪ್ಪಟ್ಟು ಮಾಡಲಾಗುತ್ತಿದೆ.

Bengaluru News Indira Canteen doubles breakfast prices at Bangalore sat
Author
First Published May 24, 2023, 12:45 PM IST

ಬೆಂಗಳೂರು (ಮೇ 24): ಈ ಹಿಂದೆ ಸಿದ್ದರಾಮಯ್ಯ ಅವರು ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೂಕ್ತ ಅನುದಾನ ನೀಡದೇ ಕಳಪೆ ಸ್ಥಿತಿಗೆ ತಲುಪಿದ್ದವು. ಆದರೆ, ಈಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವಾರದೊಳಗೆ ಇಂದಿರಾ ಕ್ಯಾಂಟೀನ್‌ಗಳಿಗೆ ಚೇತರಿಕೆ ನಿಡಲು ಮುಂದಾಗಿದ್ದು, ಗುಣಮಟ್ಟದ ಆಹಾರ ನೀಡುವಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಬೆಳಗ್ಗಿನ ತಿಂಡಿ ಬೆಲೆಯನ್ನು ದುಪ್ಪಟ್ಟು ಮಾಡಲಾಗುತ್ತಿದೆ. ಈ ಹಿಂದೆ ಇಂದಿರಾ ಕ್ಯಾಂಟೀನ್‌ ಬೆಳಗ್ಗಿನ ತಿಂಡಿ ಬೆಲೆ 5 ರೂ. ಇದ್ದು, ಈಗ 10 ರೂ.ಗೆ ಹೆಚ್ಚಳ ಮಾಡಲಾಗುತ್ತಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಶೇಷ ಆಯುಕ್ತ ಜಯರಾಂ ರಾಯ್‌ಪುರ ಅವರು ಮಾತನಾಡಿ, ಇಂದಿರಾ ಕ್ಯಾಂಟೀನ್ ಮರು ಆರಂಭಕ್ಕೆ ಸರ್ಕಾರ ಸೂಚಿಸಿದೆ. ಕೆಲವು ಕಡೆ ಕ್ಯಾಂಟೀನ್‌ನಲ್ಲಿ ಡಿಮಾಂಡ್ ಕಡಿಮೆ ಆಗಿತ್ತು. ಕೆಲವು ಕಡೆ ಉತ್ತೇಜನ ಕಡಿಮೆ ಆಗಿತ್ತು ಅಂತ ಕ್ಲೋಸ್ ಆಗಿತ್ತು. ಇರೋ ಕ್ಯಾಂಟೀನ್‌ಗಳ ಪೈಕಿ 10 ಮೊಬೈಲ್ ಕ್ಯಾಂಟೀನ್ ಕ್ಲೋಸ್ ಆಗಿದೆ. ತಿಂಡಿ ಕ್ವಾಂಟಿಟಿ ಹೆಚ್ಚು ಮಾಡಲು ನಿರ್ಧಾರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ತಿಂಡಿಯ ಬೆಲೆ ಕೂಡ 5 ರಿಂದ 10 ರೂಪಾಯಿಗೆ ಏರಿಕೆ ಮಾಡಲಾಗುತ್ತದೆ ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ನಡೆದ ಅಕ್ರಮಗಳ ತನಿಖೆ ಆರಂಭಿಸಿದ ಕಾಂಗ್ರೆಸ್‌: ಗಂಗಾ ಕಲ್ಯಾಣ ಹಗರಣದ ಕೇಸ್‌ ದಾಖಲು

ಪ್ರತಿ ವಾರ್ಡ್‌ಗೊಂದರಂತೆ ಕ್ಯಾಂಟೀನ್‌ ಆರಂಭ: ಒಂದು ತಿಂಗಳಲ್ಲಿ 243 ಕಡೆ ಇಂದಿರಾ ಕ್ಯಾಂಟೀನ್‌ ಆರಂಭ: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 243 ವಾರ್ಡ್‌ಗಳನ್ನು ರಚನೆ ಮಾಡಲಾಗಿದ್ದು, ವಾರ್ಡ್‌ಗೊಂದರಂತೆ ಒಟ್ಟು 243 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭ ಮಾಡಲಾಗುವುದು. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. ಯಾವ ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ಇಲ್ಲವೋ ಅಲ್ಲೆಲ್ಲ ಕ್ಯಾಂಟೀನ್‌ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ, ಕ್ಯಾಂಟೀನ್‌ಗಳ ಅಡಿಗೆ ಮನೆಯಲ್ಲಿನ ಸಾಮಗ್ರಿಗಳು ದುರಸ್ತಿಗೆ ಬಂದಿವೆ. ಅವುಗಳನ್ನು ಬದಲಿಸಲು ಕೂಡ ಕ್ರಮ ಕೈಗೊಳ್ಳಲಾಗಿದ್ದು, ಟೆಂಡರ್‌ ಕರೆದು ಬದಲಾವಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈಗಿನ ತಿಂಡಿಯ ಬೆಲೆಯ ಕ್ವಾಂಟಿಟಿ ಹೆಚ್ಚಳ: ಪ್ರಸ್ತುತ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಗ್ಗೆ ನೀಡುತ್ತಿರುವ ತಿಂಡಿಯ ಕ್ವಾಂಟಿಟಿ ತೀವ್ರ ಕಡಿಮೆಯಿದೆ. ಈ ಹಿನ್ನೆಲೆಯಲ್ಲಿ ಕ್ವಾಲಿಟಿ ಮತ್ತು ಕ್ವಾಂಟಿಟಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಬೆಲೆಯಲ್ಲಿ ಹೆಚ್ಚಳ ಮಾಡಲು ಮುಂದಾಗಿದ್ದೇವೆ. ಆದರೆ, ರಾತ್ರಿ ಊಟಕ್ಕೆ ಬೇಡಿಕೆ ಕಡಿಮೆ ಇದ್ದು, ಅದರ ಬೆಲೆಯಲ್ಲಿ ಯಾವುದೇ ಏರಿಕೆ ಮಾಡದೇ ಹಾಗೆಯೇ ಮುಂದುವರೆಸಲಾಗುವುದು ಎಂದು ತಿಳಿಸಿದರು.

ಮತದಾರರು ಹಾದಿ-ಬೀದೀಲಿ ಹೋಗೋರು ಯಾವಾಗಾದ್ರು? ಡಿಕೆಶಿಗೆ ಕುಮಾರಸ್ವಾಮಿ ತರಾಟೆ

ಬಿಬಿಎಂಪಿಯಲ್ಲಿ ಇಂದಿರಾ ಕ್ಯಾಂಟೀನ್ ಅಕ್ರಮ: ಇಂದಿರಾ ಕ್ಯಾಂಟೀನ್‌ನಲ್ಲಿ ನೀಡುವ ಊಟ ಹಾಗೂ ತಿಂಡಿಗಳ ಮಾಹಿತಿಯಲ್ಲಿ ಸುಳ್ಳು ಲೆಕ್ಕ ನೀಡಿ ಹಣವನ್ನು ಲೂಟಿ ಮಾಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಅಕ್ರಮ ಎಸಗಿದೆ ಎಂಬ ಆರೋಪ ಕೇಳಿಬಂದಿದೆ ಎಂದು ಪತ್ರಕರ್ತರು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು, ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 120-130 ಇಂದಿರಾ ಕ್ಯಾಂಟೀನ್‌ಗಳು ಸುಸ್ಥಿತಿಯಲ್ಲಿವೆ. ಅಲ್ಲಿ ಅಕ್ರಮ ಆಗಿರೋದಕ್ಕಿಂತ ಹಣ ಪಾವತಿಯಾಗಿಲ್ಲ ಅನ್ನೋ ದೂರು ಕೇಳಿಬಂದಿದೆ. ಮಾರ್ಷಲ್ಸ್‌ ನೀಡೋ ಆಧಾರದ ಮೇಲೆ ಮೊತ್ತ ಪಾವತಿ ಮಾಡಿದ್ದೇವೆ. 2-3 ವರ್ಷಗಳಿಂದ ಯಾವುದೇ ತೊಂದರೆ ಇಲ್ಲ. ಇನ್ನು ಗುತ್ತಿಗೆದಾರರಿಗೆ ಹಳೆಯ ಪೇಮಂಟ್‌ ಶೀಘ್ರ ಪಾವತಸಲಾಗುತ್ತದೆ ಎಂದು ಹೇಳಿದರು.

Follow Us:
Download App:
  • android
  • ios