ಬೆಂಗಳೂರಿನ ಆಸ್ತಿ ಮಾಲೀಕರಿಗಾಗಿ 'ನನ್ನ ಇ-ಖಾತಾ ನನ್ನ ಹಕ್ಕು' ಅಭಿಯಾನದ ಎರಡನೇ ಹಂತ ಮೇ 23 ರಂದು 52 ಸ್ಥಳಗಳಲ್ಲಿ ನಡೆಯಲಿದೆ. ಈ ಅಭಿಯಾನದಲ್ಲಿ, ಬಿ-ಖಾತಾವನ್ನು ಎ-ಖಾತಾಗೆ ಪರಿವರ್ತಿಸಲು ಸರ್ಕಾರವು ಶುಲ್ಕವನ್ನು ಶೇ.2ಕ್ಕೆ ಇಳಿಸಿದ್ದು, ಇದು 100 ದಿನಗಳವರೆಗೆ ಲಭ್ಯವಿರುತ್ತದೆ.
ಬೆಂಗಳೂರು (ಮೇ 21): ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಬೆಂಗಳೂರಿನಲ್ಲಿ ಆಸ್ತಿ ದಾಖಲೆಗಳ ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ 'ನನ್ನ ಇ-ಖಾತಾ ನನ್ನ ಹಕ್ಕು' ಅಭಿಯಾನದ ಎರಡನೇ ಹಂತ ಮೇ 23ರಂದು ನಡೆಯಲಿದೆ. ನಗರದ 52 ಆಯ್ದ ಸ್ಥಳಗಳಲ್ಲಿ ಈ ವಿಶೇಷ ಶಿಬಿರ ಆಯೋಜಿಸಲಾಗಿದ್ದು, ಸಾರ್ವಜನಿಕರು ತಮ್ಮ ಆಸ್ತಿಯ ಇ-ಖಾತಾವನ್ನು ಸುಲಭವಾಗಿ ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ.

ಹಿಂದಿನ ಅಭಿಯಾನಕ್ಕೆ ಸಿಕ್ಕ ಪ್ರತಿಕ್ರಿಯೆ ಅಪಾರ
ಕಳೆದ ವಾರ ನಡೆದ ಮೊದಲ ಹಂತದ ಅಭಿಯಾನಕ್ಕೆ ನಾಗರಿಕರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಗಿತ್ತು. ಸುಮಾರು 2,939 ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದು, ಅವುಗಳಲ್ಲಿ 1,242 ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಿ ಅಂತಿಮ ಇ-ಖಾತಾ ವಿತರಿಸಲಾಗಿದೆ. ಉಳಿದ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ: ಶುಲ್ಕದಲ್ಲಿ ಭಾರಿ ಕಡಿತ!
ಈ ಅಭಿಯಾನದ ಅತ್ಯಂತ ಪ್ರಮುಖ ಆಕರ್ಷಣೆಯೆಂದರೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆಗೊಳ್ಳುವ ಪ್ರಕ್ರಿಯೆ. ಸರ್ಕಾರವು ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟಿದ್ದ ಶುಲ್ಕವನ್ನು ಕೇವಲ ಶೇ.2ಕ್ಕೆ ಇಳಿಸಿ ಆದೇಶಿಸಿದೆ. ಈ ಸೌಲಭ್ಯವು ಕೇವಲ 100 ದಿನಗಳ ಕಾಲ (15-05-2026 ರಿಂದ 23-08-2026 ರವರೆಗೆ) ಲಭ್ಯವಿರಲಿದ್ದು, ನಗರದ ಸುಮಾರು 7 ಲಕ್ಷ ಆಸ್ತಿ ಮಾಲೀಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಅಭಿಯಾನ ಕೇಂದ್ರಗಳಲ್ಲಿ ಏನೆಲ್ಲಾ ಸಿಗಲಿದೆ?
ಸ್ಥಳದಲ್ಲಿಯೇ ಪರಿಹಾರ: ಇ-ಖಾತಾ ದೋಷಗಳ ತಿದ್ದುಪಡಿ ಮತ್ತು ಹೊಸ ಇ-ಖಾತಾ ವಿತರಣೆ.
ಸಹಾಯ ಕೇಂದ್ರಗಳು: ತಾಂತ್ರಿಕ ಸಿಬ್ಬಂದಿಯಿಂದ ಮಾರ್ಗದರ್ಶನ ಮತ್ತು ತರಬೇತಿ.
ತ್ವರಿತ ಸೇವೆ: ಕಂಪ್ಯೂಟರ್, ಸ್ಕ್ಯಾನರ್ ಮತ್ತು ಹೈ-ಸ್ಪೀಡ್ ಇಂಟರ್ನೆಟ್ ಸೌಲಭ್ಯದೊಂದಿಗೆ ವೇಗದ ಕೆಲಸ.
ಅಹವಾಲು ಸಲ್ಲಿಕೆ: ದೀರ್ಘಕಾಲದಿಂದ ಬಾಕಿ ಇರುವ ಅರ್ಜಿಗಳ ವಿಲೇವಾರಿ.
ಎಸ್ಎಂಎಸ್ ಮಾಹಿತಿ: ಇ-ಖಾತಾ ಸಿದ್ಧವಾದ ಕೂಡಲೇ ನಾಗರಿಕರಿಗೆ ಫೋನ್ ಮೂಲಕ ಮಾಹಿತಿ.
ಬೆಂಗಳೂರು ಪೂರ್ವ ನಗರ ಪಾಲಿಕೆ:
1. ಮಾರತಹಳ್ಳಿ: ನ್ಯೂ ಹಾರಿಜಾನ್ ಕಾಲೇಜು, ಬೆಳ್ಳಂದೂರು, ಕಾಡುಬೀಸನಹಳ್ಳಿ.
2. ವೈಟ್ ಫೀಲ್ಡ್: ಸರ್ಕಾರಿ ಶಾಲೆ, ರಾಮಗೊಂಡನಹಳ್ಳಿ
3. ಹೂಡಿ: ಸರ್ಕಾರಿ ಪ್ರೌಢಶಾಲೆ, ಗರುಡಾಚಾರ್ಪಾಳ್ಯ, ಆರ್ಎಚ್ಬಿ ಕಾಲೋನಿ
4. ಕೆ.ಆರ್.ಪುರಂ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಜಿ.ಎಫ್.ಜಿ.ಸಿ.),ಓಲ್ಡ್ಮದ್ರಾಸ್ ರಸೆ
5. ಹೆಚ್.ಎ.ಎಲ್ ಏರ್ಪೋರ್ಟ್ ವಿಭಾಗ: ಎಸ್.ಸಿ.ಟಿ ಪಾಲಿಟೆಕ್ನಿಕ್, ಕಗ್ಗದಾಸಪುರ ಮುಖ್ಯ ರಸ್ತೆ.
6. ಹೊರಮಾವು: ಲೋಟಸ್ ಕನ್ವೆನ್ಷನ್ ಹಾಲ್, 5ನೇ ಕ್ರಾಸ್ ರಸ್ತೆ, ರಾಘವೇಂದ್ರ ವೃತ್ತದ ಸಮೀಪ, ಮುನೇಶ್ವರ ನಗರ,
ಬೆಂಗಳೂರು ಕೇಂದ್ರ ನಗರ ಪಾಲಿಕೆ:
1. ಸಿ.ವಿ.ರಾಮನ್ ನಗರ: ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ (ಕೆಪಿಎಸ್), 9ನೇ ಎ ಮುಖ್ಯ ರಸ್ತೆ, ಎಲ್ಐಸಿ ಕಾಲೋನಿ
2. ಜೀವನ್ ಭೀಮಾ ನಗರ: ಜೀವನ್ ಭೀಮಾ ನಗರ, ತಮಿಳು ಸರ್ಕಾರಿ ಶಾಲೆ.
3. ಶಾಂತಿನಗರ: ಶಾಂತಿನಗರ ಸರ್ಕಾರಿ ಮಾದರಿ ಪ್ರಾಥಮಿಕ ತಮಿಳು ಬಾಲಕಿಯರ ಶಾಲೆ, ಶಾಂತಿನಗರ ಮುಖ್ಯ ರಸ್ತೆ, ಲಾಂಗ್ಫೋರ್ಡ್ ಟೌನ್.
4. ದೊಮ್ಮಲೂರು: ಡಾ|| ಶ್ರೀ. ಶ್ರೀ. ಶ್ರೀ. ಶಿವಕುಮಾರ ಸ್ವಾಮೀಜಿ ಬಯಲು ರಂಗಮAಟಪ, 1ನೇ ಮಹಡಿ, ಇಂಡಿಕ್ಯೂಬ್ ಪಾರ್ಕ್, ಹೆಚ್.ಎ.ಎಲ್ ಹಳೆ ವಿಮಾನ ನಿಲ್ದಾಣ ರಸ್ತೆ, ದೋಮ್ಲೂರು 1ನೇ ಹಂತ.
5. ಗಾAಧಿನಗರ: ಗುಂಡೂರಾವ್ ಮೈದಾನ, ಸಿರೂರ್ ಪಾರ್ಕ್ ರಸ್ತೆ, ಮಲ್ಲೇಶ್ವರಂ.
6. ಚಿಕ್ಕಪೇಟೆ: ಪಾಲಿಕೆ ಬಾಲಕಿಯರ ಪಿಯು ಕಾಲೇಜು, 1ನೇ ಕ್ರಾಸ್, ಮಾಗಡಿ ಮುಖ್ಯ ರಸ್ತೆ, ಆರೋಗ್ಯ ಸೌಧ ಸಮೀಪ.
7. ಕೆಂಪೇಗೌಡ ನಗರ: ನ್ಯಾಷನಲ್ ಹೈ ಸ್ಕೂಲ್, ಕೆ.ಆರ್ ರಸ್ತೆ, ಬಸವನಗುಡಿ.
8. ಹೊಂಬೇಗೌಡನಗರ: ರಾಣಿ ಸರಳಾ ದೇವಿ ವಿದ್ಯಾ ಸಂಸ್ಥೆ, ನಂ.281, 7ನೇ ಕ್ರಾಸ್ ರಸ್ತೆ, 1ನೇ ಬ್ಲಾಕ್, ಜಯನಗರ.
9. ಶಿವಾಜಿನಗರ: ಪಾಲಿಕೆ ಬಾಲಕಿಯರ ಪಿಯು ಕಾಲೇಜು, ಡಿಸ್ಪೆನ್ಸರಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಹಿಂಭಾಗ.
10. ವಸಂತನಗರ: ಸರ್ದಾರ್ ಪಟೇಲ್ ಭವನ, ನಂ.16, ತಿಮ್ಮಯ್ಯ ರಸ್ತೆ, ಕ್ವೀನ್ಸ್ ರಸ್ತೆ.
11. ಚಾಮರಾಜಪೇಟೆ: ಪಾಲಿಕೆ ಪಿಯು ಕಾಲೇಜು, 2ನೇ ಮುಖ್ಯ ರಸ್ತೆ, 6ನೇ ಕ್ರಾಸ್.
12. ಜೆ.ಜೆ.ಆರ್ ನಗರ: ಪಾಲಿಕೆ ಬಾಲಕಿಯರ ಪಿಯು ಕಾಲೇಜು, ಪಾದರಾಯನಪುರ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ:
1. ಮಲ್ಲೇಶ್ವರಂ ಮತ್ತು ಮತ್ತಿಕೆರೆ: ಮಲ್ಲೇಶ್ವರಂ ವಿಭಾಗ ಕಂದಾಯಾಧಿಕಾರಿಗಳ ಕಚೇರಿ ಸಭಾಂಗಣ, ಪಾಲಿಕೆ ಕಟ್ಟಡ, 5ನೇ ಮುಖ್ಯ ರಸ್ತೆ, 5ನೇ ಕ್ರಾಸ್ ರಸ್ತೆ, ಎಂ.ಕೆ.ಕೆ ರಸ್ತೆ.
2. ರಾಜಾಜಿನಗರ ಮತ್ತು ಶ್ರೀರಾಮಮಂದಿರ: ರಾಜಾಜಿನಗರ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, 1ನೇ ಮಹಡಿ, ಸರ್ ಎಂ. ವಿಶ್ವೇಶ್ವರಯ್ಯ ಸಂಕೀರ್ಣ, 2ನೇ ಬ್ಲಾಕ್.
3. ಬಸವನಗುಡಿ ಮತ್ತು ಗಿರಿನಗರ: ಬಸವನಗುಡಿ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, #19, ನೆಲ ಮಹಡಿ, ತ್ಯಾಗರಾಜನಗರ, ಚೆನ್ನಮ್ಮನಕೆರೆ ಅಚ್ಚುಕಟ್ಟು(ಸಿಟಿ ಬೆಡ್ ಪ್ರದೇಶ).
4. ಗೋವಿಂದರಾಜನಗರ ಮತ್ತು ಚಂದ್ರ ಲೇಔಟ್: ಬಿಬಿಎಂಪಿ ವಾರ್ಡ್ ಕಚೇರಿ, ವಾರ್ಡ್ ಸಂಖ್ಯೆ–105, ಪಾಲಿಕೆ ಸೌಧ, 17ನೇ ಕ್ರಾಸ್, ಅಗ್ರಹಾರ ದಾಸರಹಳ್ಳಿ,
5. ವಿಜಯನಗರ ಮತ್ತು ಗಾಳಿ ಆಂಜನೇಯ ದೇವಸ್ಥಾನ: ಕಂದಾಯ ಅಧಿಕಾರಿಗಳ ಕಚೇರಿ, ವಿಜಯನಗರ ವಿಭಾಗ, 1ನೇ ಮಹಡಿ, ಈಜುಕೊಳ ಕಟ್ಟಡ, 9ನೇ ಕ್ರಾಸ್, ಹಂಪಿನಗರ, ವಿಜಯನಗರ 2ನೇ ಹಂತ,
6. ಪದ್ಮನಾಭನಗರ ಮತ್ತು ಬನಶಂಕರಿ: ಪದ್ಮನಾಭನಗರ ಶಾಸಕರ ಕಚೇರಿ, ಸಂಖ್ಯೆ 3, 9ನೇ ಮುಖ್ಯರಸ್ತೆ, ವಿಹಾರ ಕೇಂದ್ರ ಸಮೀಪ, ಸಿದ್ದಣ್ಣ ಲೇಔಟ್, ಬನಶಂಕರಿ 2ನೇ ಹಂತ.
7. ಆರ್.ಆರ್.ನಗರ, ಲಗ್ಗೆರೆ ಮತ್ತು ಲಕ್ಷ್ಮೀದೇವಿನಗರ: ಜಂಟಿ ಆಯುಕ್ತರ ಕಚೇರಿ, ಬೆಂಗಳೂರು ಪಶ್ಚಿಮ ನಗರ ನಿಗಮ ವಲಯ–1, 18ನೇ ಕ್ರಾಸ್, ಐಡಿಯಲ್ ಹೋಮ್ಸ್,
8. ಕೆಂಗೇರಿ ಮತ್ತು ಹೇರೋಹಳ್ಳಿ: ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್, ಕೊಮ್ಮಘಟ್ಟ ರಸ್ತೆ, 18, 3ನೇ ಮುಖ್ಯರಸ್ತೆ, ಅಂಚೆ ಕಚೇರಿ ಹಿಂಭಾಗ, ಕೆಂಗೇರಿ ಸ್ಯಾಟಲೈಟ್ ಟೌನ್.
9. ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ಹೆಗ್ಗನಹಳ್ಳಿ: ಹೆಗ್ಗನಹಳ್ಳಿ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, 4ನೇ ಕ್ರಾಸ್, ಎಚ್ಎಂಟಿ ಲೇಔಟ್, ಓಂ ಟಿಂಬರ್ಸ್ ರಸ್ತೆ, ನೀರಿನ ಟ್ಯಾಂಕ್ ಸಮೀಪ, ನಾಗಸಂದ್ರ ಪೋಸ್ಟ್.
10. ಮಹಾಲಕ್ಷ್ಮೀ ಲೇಔಟ್ ಮತ್ತು ನಾಗಪುರ: ಮಹಾಲಕ್ಷ್ಮೀಪುರ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, ಪಾಲಿಕೆ ಸಂಕೀರ್ಣ, ಸಂಖ್ಯೆ 1221, 12ನೇ ಮುಖ್ಯರಸ್ತೆ, 11ನೇ ಕ್ರಾಸ್ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, 2ನೇ ಹಂತ, ನಾಗಪುರ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ:
1. ಅಂಜನಾಪುರ: ಬುದ್ಧ ಭವನ, ಜೆಪಿ ನಗರ 8ನೇ ಹಂತ, ರಾಘವ ನಗರ, ಐಎಂಜಿ ಅಪಾರ್ಟ್ಮೆಂಟ್ಸ್ ಸಮೀಪ.
2. ಬೇಗೂರು: ವಿದ್ಯಾ ವಿಕಾಸ್ ಸರ್ಕಾರಿ ಪ್ರೌಢಶಾಲೆ, ವಿಶ್ವಪ್ರಿಯಾ ನಗರ, ಬೇಗೂರು.
3. ಜಯನಗರ: ಎಇಇ (ಜೆ.ಪಿ. ನಗರ) ಬಿಬಿಎಂಪಿ ಕಚೇರಿ 615, 21ನೇ ಮುಖ್ಯ ರಸ್ತೆ, 10ನೇ ಕ್ರಾಸ್ ರಸ್ತೆ, 2ನೇ ಹಂತ, ಜೆ.ಪಿ. ನಗರ,
4. ಜೆಪಿ ನಗರ: ಎಇಇ (ಜೆ.ಪಿ. ನಗರ) ಬಿಬಿಎಂಪಿ ಕಚೇರಿ 615, 21ನೇ ಮುಖ್ಯ ರಸ್ತೆ, 10ನೇ ಕ್ರಾಸ್ ರಸ್ತೆ, 2ನೇ ಹಂತ, ಜೆ.ಪಿ. ನಗರ,
5. ಉತ್ತರಹಳ್ಳಿ: ಕರ್ನಾಟಕ ಪಬ್ಲಿಕ್ ಸ್ಕೂಲ್, ಉತ್ತರಹಳ್ಳಿ ಬಸ್ ನಿಲ್ದಾಣದ ಹಿಂಭಾಗ, ಉತ್ತರಹಳ್ಳಿ.
6. ಯಲಚೇನಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚುಂಚಘಟ್ಟ, 14ನೇ ಮುಖ್ಯರಸ್ತೆ, ಆರ್ಬಿಐ ಲೇಔಟ್, ಜೆಪಿ ನಗರ 7ನೇ ಹಂತ.
7. ಪದ್ಮನಾಭನಗರ: ವಾರ್ಡ್ 182ರ ವಾರ್ಡ್ ಕಚೇರಿ, ಸಿ.ಜೆ. ವೆಂಕಟದಾಸ ರಸ್ತೆ, 15ಎ ಬಸ್ ನಿಲ್ದಾಣದ ಸಮೀಪ, ಲಕ್ಷ್ಮೀಕಾಂತ ಉದ್ಯಾನದ ಎದುರು, ಪದ್ಮನಾಭನಗರ,
8. ಬೊಮ್ಮನಹಳ್ಳಿ: ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಹೊಂಗಸAದ್ರ ಬಸ್ ನಿಲ್ದಾಣದ ಸಮೀಪ, ಬೇಗೂರು ಮುಖ್ಯ ರಸ್ತೆ, ಹೊಂಗಸAದ್ರ,
9. ಅರಕೆರೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿಡಿಎ “80” ಅಡಿ ರಸ್ತೆ, ನಂಜಪ್ಪ ಲೇಔಟ್, ಅರಕೆರೆ,
10. ಎಚ್ಎಸ್ಆರ್ ಲೇಔಟ್: ಲಾರೆನ್ಸ್ ಹೈ ಸ್ಕೂಲ್ (ಐಸಿಎಸ್ಇ), 9ನೇ ಮುಖ್ಯ ರಸ್ತೆ, ಸೆಕ್ಟರ್–6, ಎಚ್ಎಸ್ಆರ್ ಲೇಔಟ್,
11. ಕೋರಮಂಗಲ: ಸಾರ್ವಜನಿಕ ಗ್ರಂಥಾಲಯ, 2ನೇ ಕ್ರಾಸ್, 17ನೇ ಬಿ ಮುಖ್ಯ ರಸ್ತೆ, 5ನೇ ಬ್ಲಾಕ್, ಕೋರಮಂಗಲ,
12. ಬಿಟಿಎಂ ಲೇಔಟ್: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾವರೆಕೆರೆ, ಬಿಟಿಎಂ 1ನೇ ಹಂತ,
ಬೆಂಗಳೂರು ಉತ್ತರ ನಗರ ಪಾಲಿಕೆ:
1. ಬ್ಯಾಟರಾಯನಪುರ ಹಾಗೂ ಕೊಡಿಗೆಹಳ್ಳಿ: ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ, ಸಂ. 2152/7, 9ನೇ ಮುಖ್ಯ ರಸ್ತೆ, ಡಿ ಬ್ಲಾಕ್, ಸಹಕಾರನಗರ
2. ವಿದ್ಯಾರಣ್ಯಪುರ: ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ, ವಿದ್ಯಾರಣ್ಯಪುರ ಉಪವಿಭಾಗ, ಬಿಎಂಟಿಸಿ ಬಸ್ ನಿಲ್ದಾಣದ ಸಮೀಪ, 6ನೇ ಬ್ಲಾಕ್, ಎಚ್ಎಂಟಿ ಲೇಔಟ್,
3. ಪುಲಿಕೇಶಿನಗರ: ಬಿಬಿಎಂಪಿ ವಿಭಾಗೀಯ ಕಚೇರಿ – ಕೆ.ಜಿ. ಹಳ್ಳಿ ಉಪವಿಭಾಗ, ನೆಲ ಮಹಡಿ, ಕ್ವೀನ್ಸ್ ರಸ್ತೆ, ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿ,
4. ಕೆ.ಜಿ. ಹಳ್ಳಿ: ಬಿಬಿಎಂಪಿ ವಿಭಾಗೀಯ ಕಚೇರಿ – ಪುಲಕೇಶಿನಗರ ಉಪವಿಭಾಗ, 2ನೇ ಮಹಡಿ, ಕ್ವೀನ್ಸ್ ರಸ್ತೆ, ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿ
5. ಮಾರುತಿಸೇವಾನಗರ: ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ, ಮಾರುತಿ ಸೇವಾನಗರ ಉಪವಿಭಾಗ, 3ನೇ ಮಹಡಿ, ನಿಗಮ ಕಟ್ಟಡ, ಎಂ.ಎಂ. ರಸ್ತೆ, ಕಾಕ್ಸ್ ಟೌನ್
6. ಎಚ್.ಬಿ.ಆರ್. ಲೇಔಟ್: ಸಂ.16, 1ನೇ ಮಹಡಿ, ಬಿಡಿಎ ಕಾಂಪ್ಲೆಕ್ಸ್, ಬಿಬಿಎಂಪಿ ಕಚೇರಿ, ಎಚ್ಬಿಆರ್ ಲೇಔಟ್, 2ನೇ ಬ್ಲಾಕ್, ಬೆಸ್ಕಾಂ ಕಚೇರಿಯ ಎದುರು
7. ದಾಸರಹಳ್ಳಿ: ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ, ದಾಸರಹಳ್ಳಿ ಉಪವಿಭಾಗ, 1ನೇ ಮುಖ್ಯ ರಸ್ತೆ, 4ನೇ ಕ್ರಾಸ್, ಜೈನ ದೇವಸ್ಥಾನದ ಸಮೀಪ, ಟಿ. ದಾಸರಹಳ್ಳಿ,
8. ಯಶವಂತಪುರ: ಬಿಬಿಎಂಪಿ ಕಚೇರಿ, ಟ್ಯಾಂಕ್ ಬಂಡ್ ರಸ್ತೆ, ಜೆ.ಪಿ. ಪಾರ್ಕ್ ಗೇಟ್ ಸಮೀಪ, ಗೋಕುಲ ಅಂಚೆ, ಮೋಹನ್ ಕುಮಾರ್ ನಗರ, ಮತ್ತಿಕೆರೆ
9. ಶೆಟ್ಟಿಹಳ್ಳಿ : ಬೆಂಗಳೂರು ಒನ್, ಶೆಟ್ಟಿಹಳ್ಳಿ, ಜಾಲಹಳ್ಳಿ ಪಶ್ಚಿಮ,
10. ಹೆಬ್ಬಾಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ಬಾಳ.
11. ಜೆ.ಸಿ.ನಗರ: ಸರ್ಕಾರಿ ಕಚೇರಿಗಳ ಸಂಕೀರ್ಣ, ಇಂದಿರಾ ಕ್ಯಾಂಟೀನ್ ಸಮೀಪ, ನೃಪತುಂಗ ಲೇಔಟ್, ಆರ್.ಟಿ. ನಗರ,
12. ಯಲಹಂಕ ನ್ಯೂ ಟೌನ್ / ಯಲಹಂಕ ಓಲ್ಡ್ ಟೌನ್: ಮಿನಿ ವಿಧಾನಸೌಧ, 3ನೇ ಮಹಡಿ, ಎನ್ಇಎಸ್ ಸಮೀಪ, ಸುಗ್ಗಪ್ಪ ಲೇಔಟ್, ಯಲಹಂಕ.
ಜಿಬಿಎ ವ್ಯಾಪ್ತಿಯಲ್ಲಿ 23-05-2026 ರಂದು ನಡೆಯುವ ನನ್ನ ಖಾತಾ ನನ್ನ ಹಕ್ಕು ಅಭಿಯಾನ(e-Khatha Open House) 52 ಸ್ಥಳಗಳ ವಿವರಕ್ಕೆ ಇಲ್ಲಿರುವ ಲಿಂಕ್‌ನಲ್ಲಿರವ ಮಾಹಿತಿ ಆಧರಿಸಿ ಲೊಕೇಷನ್ ಲಿಂಕ್ ಪಡೆಯಬಹುದು. ಲಿಂಕ್ ಇಲ್ಲಿದೆ.. https://tinyurl.com/ymv5t5ey
ಪ್ರತಿ ಶನಿವಾರ ಅಭಿಯಾನ:
ನಾಗರಿಕ ಸೇವಾ ಸೌಲಭ್ಯ ಹಾಗೂ ಅಹವಾಲು ನಿವಾರಣೆಯನ್ನು ಮತ್ತಷ್ಟು ಬಲಪಡಿಸಲು 100 ದಿನಗಳ ಕಾಲ ಪ್ರತಿ ಶನಿವಾರ “ನನ್ನ ಇ-ಖಾತಾ ನನ್ನ ಹಕ್ಕು” ಅಭಿಯಾನ ನಡೆಯಲಿದೆ. ನಾಗರಿಕರು ತಮ್ಮ ಆಸ್ತಿ ದಾಖಲೆಗಳು, ಗುರುತಿನ ಚೀಟಿ ಹಾಗೂ ಸಂಬಂಧಿತ ದಾಖಲೆಗಳೊಂದಿಗೆ ಸಮೀಪದ ಅಭಿಯಾನ ಕೇಂದ್ರಗಳಿಗೆ ಭೇಟಿ ನೀಡಿ ಇ-ಖಾತಾ ಸೇವೆಗಳನ್ನು ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮಾಧ್ಯಮ ಪ್ರಕಟಣೆಯ ಪ್ರತಿ, ಸ್ಥಳಗಳ ಲಿಂಕ್, ಕ್ಯೂ-ಆರ್ ಕೋಡ್ ಲಗತ್ತಿಸಲಾಗಿದೆ.



