ಬೆಂಗಳೂರು [ಆ.01]:  ಬೆಂಗಳೂರು ಮೆಟ್ರೋ ಸೇವೆಯಲ್ಲಿ ಶನಿವಾರ ಹಾಗೂ ಭಾನುವಾರ ಸೇವೆಯಲ್ಲಿ ವ್ಯತ್ಯಯವಾಗಲಿದೆ. ನೇರಳೆ ಮಾರ್ಗವಾದ ಬೈಯಪ್ಪನ ಹಳ್ಳಿಯಿಂದ ಮಹಾತ್ಮ ಗಾಂಧಿ ಮೆಟ್ರೋ ನಿಲ್ದಾಣದವರೆಗೆ  ಮೆಟ್ರೋ ಸೇವೆ ಅಲಭ್ಯವಾಗಲಿದೆ. 

ಆಗಸ್ಟ್ 3ರ ಶನಿವಾರ ಬೆಳಗ್ಗೆ 9 ಗಂಟೆಯಿಂದ ಆ.4ರ ಭಾನುವಾರ ಬೆಳಗ್ಗೆ 11.30ರವರೆಗೆ ಸೇವೆ ಲಭ್ಯವಿರುವುದಿಲ್ಲ ಎಂದು  BMRCL ತಿಳಿಸಿದೆ. ನಿರ್ವಹಣೆ ಕೆಲಸದ ಹಿನ್ನೆಲೆಯಲ್ಲಿ ಮೆಟ್ರೋ ಮಾರ್ಗ ಬಂದ್ ಮಾಡಲಾಗುತ್ತಿದೆ.  

ಮೆಟ್ರೋ ನಿಲ್ದಾಣದಲ್ಲಿ ಮುಕ್ತ ಸರಸ, ಪೋರ್ನ್ ಸೈಟ್‌ಗೆ ವಿಡಿಯೋ ಅಪ್‌ಲೋಡ್!

ಬೈಯಪ್ಪನಹಳ್ಳಿ  ಮೆಟ್ರೋ ನಿಲ್ದಾಣ, ಸ್ವಾಮಿ ‌ವಿವೇಕಾನಂದ ಮೆಟ್ರೋ ನಿಲ್ದಾಣ, ಇಂದಿರಾನಗರ ಮೆಟ್ರೋ ನಿಲ್ದಾಣ, ಹಲಸೂರು ಮೆಟ್ರೋ ನಿಲ್ದಾಣ ಹಾಗೂ ಟ್ರಿನಿಟಿ ನಿಲ್ದಾಣಗಳು ಸಂಪೂರ್ಣ ಬಂದ್ ಆಗಲಿವೆ. 

ಬೆಂಗಳೂರಿನ ಏರ್ ಪೋರ್ಟ್ ಮೆಟ್ರೋ ಮಾರ್ಗ ಬದಲು

ಮಹಾತ್ಮಗಾಂಧಿ ಮೆಟ್ರೋ ನಿಲ್ದಾಣದಿಂದ ಮೈಸೂರು ರಸ್ತೆ ನಿಲ್ದಾಣದವರೆಗೂ ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ.