ಇಂದು ಸಂಜೆ 5-30 ರಿಂದ ನಾಳೆ ಬೆಳಿಗ್ಗೆ 4:30 ರವರೆಗೂ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಆಗಿರಲಿದೆ. ಇಂದು ರಾತ್ರಿ 8-30 ರಿಂದ ಕುಂಬಳಗೂಡು ಫ್ಲೈಒವರ್ ಬಂದ್ ಮಾಡಲಿರುವ ಪೋಲಿಸರು. 

ಬೆಂಗಳೂರು(ಡಿ.31): ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಮಾಡಲಾಗುವುದು ಅಂತ ಪೋಲಿಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇಂದು(ಶನಿವಾರ) ಸಂಜೆ 5-30 ರಿಂದ ನಾಳೆ(ಭಾನುವಾರ) ಬೆಳಿಗ್ಗೆ 4:30 ರವರೆಗೂ ಬಂದ್ ಆಗಿರಲಿದೆ. 

ಇಂದು ರಾತ್ರಿ 8-30 ರಿಂದ ಕುಂಬಳಗೂಡು ಫ್ಲೈಒವರ್ ಬಂದ್ ಮಾಡಲಿದ್ದಾರೆ ಪೋಲಿಸರು. ಹೊಸ ವರ್ಷಾಚರಣೆ ಸಂಬಂಧ ಹೈವೆಯಲ್ಲಿ ಹೆಚ್ಚು ವಾಹನ ಸಂಚಾರ ಇರುವ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಅಂತ ತಿಳಿದು ಬಂದಿದೆ. ಹೆದ್ದಾರಿಯಲ್ಲಿ ಕುಡಿದು ವಾಹನ ಸಂಚರಿಸುವ ಸಂಖ್ಯೆ ಹೆಚ್ಚಳವಾದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೋಲಿಸ್ ಇಲಾಖೆ ಹೈವೆ ಬಂದ್ ಮಾಡಲಿದ್ದಾರೆ. 

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಹೇಗಿರಲಿದೆ‌ ಟ್ರಾಫಿಕ್ ರೂಲ್ಸ್?

ಹೊಸ ವರ್ಷ ಅದ್ಧೂರಿ ಸ್ವಾಗತಕ್ಕೆ ಬೆಂಗ್ಳೂರು ಸಜ್ಜು..!

ಎರಡು ವರ್ಷಗಳ ಬಳಿಕ ಅತ್ಯಂತ ವಿಜೃಂಭಣೆ, ಮೋಜು ಮಸ್ತಿಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ರಾಜಧಾನಿ ಬೆಂಗಳೂರು ಸಜ್ಜಾಗಿದೆ. ‘ಕ್ಯಾಲೆಂಡರ್‌ ವರ್ಷ 2023’ ಆರಂಭವಾಗುವ ಕ್ಷಣವನ್ನು ಸ್ಮರಣೀಯ ವಾಗಿಸಲು ನಗರದ ಪಬ್‌, ಕ್ಲಬ್‌, ಬಾರ್‌ ಅಂಡ್‌ ರೆಸ್ಟೋರಂಟ್‌ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ಭಿನ್ನ ಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

New Year 2023: ಪಬ್, ಬಾರ್‌ ರೆಸ್ಟೋರೆಂಟ್‌ಗಳಿಗೆ ಮಾರ್ಗಸೂಚಿ

ಕೊರೋನಾ ವೈರಸ್‌ ಕಾಟದಿಂದಾಗಿ 2021 ಹಾಗೂ 2022ರ ಹೊಸವರ್ಷ ಸ್ವಾಗತ ಸಂಭ್ರಮಾಚರಣೆಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಈ ಬಾರಿ ಒಂದಿಷ್ಟುಮುಂಜಾಗ್ರತಾ ಕ್ರಮಗಳೊಂದಿಗೆ ಹೊಸವರ್ಷ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ, ಶನಿವಾರ ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷವನ್ನು ಸ್ವಾಗತಿಸಲು ಜನರು, ತಮ್ಮ ಅಭಿರುಚಿಗೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸ್ನೇಹಿತರು ಹಾಗೂ ಕುಟುಂಬ ಸ್ಥರು, ಮನೆ ಹಾಗೂ ಕಚೇರಿಗಳಲ್ಲಿ ಪಾರ್ಟಿಗಳನ್ನು ಆಯೋಜಿಸಲು ತಯಾರಿ ನಡೆಸಿದ್ದಾರೆ. ನಗರದ ಪ್ರಮುಖ ಕಟ್ಟಡಗಳು, ತಾರಾ ಹೋಟೆಲ್‌ಗಳು, ಮಾಲ್‌ಗಳು, ಪಬ್‌, ಕ್ಲಬ್‌, ಬಾರ್‌ ಮತ್ತು ರೆಸ್ಟೋರಂಟ್‌ಗಳು ಹಾಗೂ ಪ್ರವಾಸಿ ತಾಣಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಈ ದೀಪಗಳು ರಾತ್ರಿ ಹೊತ್ತು ಝಗಮಗಿಸುತ್ತ ನಗರದ ಸೌಂದರ್ಯವನ್ನು ಹೆಚ್ಚಿಸಿವೆ.

ಎರಡು ವರ್ಷದ ಬಳಿಕ ಅವಕಾಶ: 

ಬೆಂಗಳೂರಿನ ಹೊಸ ವರ್ಷ ಆಚರಣೆಯ ಕೇಂದ್ರ ಬಿಂದುವಾದ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಹಾಗೂ ಚರ್ಚ್‌ ಸ್ಟ್ರೀಟ್‌ಗೆ ಸಾರ್ವಜನಿಕರಿಗೆ ಕಳೆದ ವರ್ಷಗಳಲ್ಲಿಯೂ ಡಿ.31 ಮಧ್ಯರಾತ್ರಿ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಈ ಬಾರಿ ಅನುಮತಿ ನೀಡಿದ್ದು, ತಯಾರಿ ಜೋರಾಗಿದೆ. ಈ ರಸ್ತೆಗಳ ಪ್ರತಿ ಅಂಗಡಿಯನ್ನೂ ದೀಪಗಳಿಂದ ಅಲಂಕರಿಸಲಾಗಿದೆ. ಕೊರೋನಾ ಪೂರ್ವದಂತೆಯೇ ಲಕ್ಷಾಂತರ ಮಂದಿ ಈ ರಸ್ತೆಗಳಿಗೆ ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬ್ರಿಗೇಡ್‌ ರಸ್ತೆ, ಎಂ.ಜಿ.ರಸ್ತೆ, ರಿಚ್ಮಂಡ್‌ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಮೂರು ಸಾವಿರ ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದೆ.