Asianet Suvarna News Asianet Suvarna News

Bengaluru: ಕನಕಪುರ ರಸ್ತೆಯಲ್ಲಿ 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆ

ಆರ್‌ಬಿಐ ನಿಯಮದಂತೆ ನೋಟು ಚಲಾವಣೆ ಮಾಡಲು ಸಾಧ್ಯವಿಲ್ಲವೆಂದರಿತ ದುಷ್ಕರ್ಮಿಗಳು 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ಬೆಂಗಳೂರಿನ ಕನಕಪುರ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ.

Bengaluru Miscreants threw fake Rs 2000 notes bundles after RBI banned sat
Author
First Published Jul 25, 2023, 5:17 PM IST

ಬೆಂಗಳೂರು (ಜು.25): ಈಗಾಗಲೇ ದೇಶದಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ನಿಂದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸಿದೆ. ಇನ್ನು ನೋಟುಗಳು ಇದ್ದವರು ಬ್ಯಾಂಕ್‌ನಲ್ಲಿ ಬಂದು ಡೆಪಾಸಿಟ್‌ ಮಾಡಿ ಬದಲಿಸಿಕೊಳ್ಳುವಂತೆ ತಿಳಿಸಲಾಗಿದೆ. ಇನ್ನು ನೋಟು ಚಲಾವಣೆ ಮಾಡಲು ಸಾಧ್ಯವಿಲ್ಲವೆಂದರಿತ ದುಷ್ಕರ್ಮಿಗಳು 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ಬೆಂಗಳೂರಿನ ಕನಕಪುರ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ.

ದೇಶದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ವತಿಯಿಂದ 2,000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸಿದೆ. ಬ್ಯಾಂಕ್‌ಗಳಿಂದ ಯಾವುದೇ ಗ್ರಾಹಕರಿಗೆ ಈ ನೋಟುಗಳನ್ನು ನೀಡುವುದಿಲ್ಲ. ಜೊತೆಗೆ, ಯಾವುದೇ ಬ್ಯಾಂಕ್‌ಗಳ ಎಟಿಎಂನಲ್ಲಿಯೂ 2000 ರೂ. ಮುಖಬೆಲೆಯ ನೋಟುಗಳನ್ನು ಹಾಕುತ್ತಿಲ್ಲ. ಆದರೆ, ಗ್ರಾಹಕರಿಂದ ಈ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಪಡೆಯಲಾಗುತ್ತದೆ. ಗ್ರಾಹಕರು ಈ ನೋಟುಗಳನ್ನು ತಂದು ಬ್ಯಾಂಕ್‌ ಖಾತೆಗೆ ಜಮಾ ಮಾಡಬಹುದು ಎಂದು ತಿಳಿಸಿದೆ. ಆದರೆ, ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದ ತೆರಿಗೆ ವಂಚಿತ (ಕಪ್ಪುಹಣ- ಬ್ಲಾಕ್‌ ಮೊನಿ) ಹಣವಿದ್ದರೆ ಅದನ್ನು ಬ್ಯಾಂಕ್‌ಗೆ ಡೆಪಾಸಿಟ್‌ ಮಾಡುವ ಮುನ್ನವೇ ಸೂಕ್ತ ದಾಖಲೆಗಳನ್ನು ಕೊಡಬೇಕಾಗುತ್ತದೆ. ಆದರೆ, ಹೆಚ್ಚಿನ ನೋಟುಗಳಿದ್ದವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉಡುಪಿ ಕಾಲೇಜು ಶೌಚಗೃಹದಲ್ಲಿ ಹಿಂದೂ ಯುವತಿಯರ ವೀಡಿಯೋ ಸೆರೆ: ಪ್ರಶ್ನಿಸಿದವರ ಮೇಲೆ ಪೊಲೀಸ್‌ ವಿಚಾರಣೆ

ನೋಟುಗಳ ಕಂತೆಯ ಹಿಂದೆ ಹಲವು ಅನುಮಾನ: ಕನಕಪುರ ರಸ್ತೆಯಲ್ಲಿ ನೋಟುಗಳ ಕಂತೆಯ ಎರಡು ಬಾಕ್ಸ್‌ಗಳು ಪತ್ತೆ: ಇನ್ನು ಕನಕಪುರ ರಸ್ತೆಯಲ್ಲಿ ಎಸೆಯಲಾಗಿರುವ 2000 ರೂ. ಮುಖಬೆಲೆಯ ಎರಡು ಬಾಕ್ಸ್‌ ಹಾಗೂ ಒಂದು ಸೂಟ್‌ಕೇಸ್‌ನ ಕಂತೆ ಕಂತೆ ನೋಟುಗಳು ನಕಲಿಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಸ್ತೆ ಬದಿಯಲ್ಲಿ ಬೀಸಾಡಿರುವ ಎಲ್ಲ ಎರಡು ಸಾವಿರ ಮುಖಬೆಲೆಯ ನೋಟುಗಳು ಕಲರ್‌ ಜೆರಾಕ್ಸ್ ಮಾಡಿದ ನೋಟುಗಳಾಗುವೆ. ನಕಲಿ ನೋಟುಗಳನ್ನು ಮುದ್ರಣ ಮಾಡಿ ಚಲಾವಣೆಗೆ ತರಲು ದುಷ್ಕರ್ಮಿಗಳು ಹುನ್ನಾರ ನಡೆಸಿದ್ದರು ಎಂಬಂತೆ ಕಂಡುಬರುತ್ತಿದೆ. ಆದರೆ, ಭಾರತೀಯ ರಿಸರ್ವ್‌ ಬ್ಯಾಂಕ್‌  (Reserve Bank of india-RBI)ವತಿಯಿಂದ ಎರಡು ಸಾವಿರ ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಸ್ಥಗಿತಗೊಳಿಸಲಾಗಿದೆ. ಇದರ ಬೆನ್ನಲ್ಲೇ ನೋಟುಗಳನ್ನು ಎಸೆಯಲಾಗಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

Bengaluru : ಫ್ರೀ ಐಸ್‌ ಕ್ರೀಮ್‌ಗಾಗಿ ಭರ್ಜರಿ ಡ್ಯಾನ್ಸ್‌, ನೀವು ಫಿದಾ ಆಗೋದು ಗ್ಯಾರಂಟಿ

ನೋಟುಗಳನ್ನು ವಶಕ್ಕೆ ಪಡೆದ ಪೊಲೀಸರು: ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಪುರ ರಸ್ತೆಯ ಬಳಿ 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ನೋಡಿದ ಸಾರ್ವಜನಿಕರು ಸಂಚಾರಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಕೂಡಲೇ ಸಂಚಾರಿ ಪೊಲೀಸರು ಸ್ಥಳೀಯ ತಲಘಟ್ಟಪುರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ ಪೊಲೀಸರು ಇವು ಕಲರ್‌ ಜೆರಾಕ್ಸ್ ಮಾಡಿದ ನಕಲಿ ನೋಟುಗಳು ಎಂಬುದನ್ನು ಗುರುತಿಸಿದ್ದಾರೆ. ನಂತರ, ಎಸೆದು ಹೋದ ನಕಲಿ ನೋಟುಗಳ ಬಂಡಲ್‌ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಅಲ್ಲಿಗೆ ಜೆರಾಕ್ಸ್ ನೋಟುಗಳು ಅಲ್ಲಿಗೆ ಹೇಗೆ ಬಂದವು ಎಂಬುದರ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. 

Follow Us:
Download App:
  • android
  • ios