Bengaluru ಪಬ್, ಹುಕ್ಕಾ ಬಾರ್‌ಗಳಲ್ಲಿ ಸಿಕ್ಕಿಬಿದ್ದ ಅಪ್ರಾಪ್ತರು! ನಿಮ್ಮ ಮಕ್ಕಳಿದ್ದಾರಾ ನೋಡಿ...
ಮಾದಕ ಲೋಕದ ಪ್ರವೇಶ ದ್ವಾರವೆಂದೇ ಹೇಳಲಾಗುವ ಪಬ್, ಬಾರ್ ಹಾಗೂ ಹುಕ್ಕಾಬಾರ್‌ಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಹುಕ್ಕಾಬಾರ್ ಸೇವಿಸುತ್ತಿದ್ದು, ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು (ಸೆ.09): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾದಕ ಲೋಕದ ಪ್ರವೇಶ ದ್ವಾರವೆಂದೇ ಹೇಳಲಾಗುವ ಪಬ್, ಬಾರ್ ಹಾಗೂ ಹುಕ್ಕಾಬಾರ್‌ಗಳಲ್ಲಿ ಹಾಡ ಹಗಲೇ ಅಪ್ರಾಪ್ತ ವಯಸ್ಸಿನ ಮಕ್ಕಳು ಹುಕ್ಕಾಬಾರ್ ಸೇವಿಸುತ್ತಿದ್ದು, ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ ನಿಮ್ಮ ಮಕ್ಕಳು ಕೂಡ ಇದ್ದಾರೆಯೇ ಎಂಬುದನ್ನು ಒಮ್ಮೆ ನೋಡಿಬಿಡಿ.
ರಾಜ್ಯದ ರಾಜಧಾನಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿದೆ. ಇದರೊಂದಿಗೆ ಅಂತಾರಾಷ್ಟ್ರೀಯವಾಗಿ ಅನೇಕ ಮಾಫಿಯಾಗಳೂ ಕೂಡ ಬೆಂಗಳೂರಿನಲ್ಲಿ ನೆಲೆ ಕಮಡುಕೊಳ್ಳುತ್ತಿದ್ದು, ಯುವಜನರನ್ನು ಟಾರ್ಗೆಟ್ ಮಾಡುತ್ತಿವೆ. ಅದರಲ್ಲಿಯೂ ಮಾದಕ ಲೋಕವನ್ನೇ ಸೃಷ್ಟಿ ಮಾಡುತ್ತಿದ್ದು, ಪೊಲೀಸರು ಭರ್ಜರಿ ಭೇಟೆಯಾಗುವ ಮೂಲಕ ನಿಯಂತ್ರಣಕ್ಕೆ ತರುತ್ತಿದೆ. ಆದರೂ, ಮಾದಕ ಲೋಕದ ದ್ವಾರ ಬಾಗಿಲೆಂದೇ ಹೇಳಲಾಗುವ ಪಬ್, ಬಾರ್, ಹುಕ್ಕಾ ಬಾರ್ ಗಳಲ್ಲಿ ಅಪ್ರಾಪ್ತರು ಕಾಣಿಸಿಕೊಳ್ಳುತ್ತಿದ್ದಾರೆ. ಅಪ್ರಾಪ್ತರಿಗೆ ಪಬ್, ಬಾರ್‌ಗಳಿಗೆ ನಿಷೇಧವಿದ್ದರೂ ನಕಲಿ ಐಡಿ ಕಾರ್ಡ್ ತೋರಿಸಿ ಮಕ್ಕಳು ಒಳಗೆ ಹೋಗಿ ದಾರಿ ತಪ್ಪುತ್ತಿದ್ದಾರೆ.
ನಾಲ್ಕು ವರ್ಷದಲ್ಲಿ 2,529 ಸರ್ಕಾರಿ ಶಾಲೆಗಳನ್ನು ಮುಚ್ಚಿ, 2,949 ಖಾಸಗಿ ಶಾಲೆಗಳಿಗೆ ಅನುಮತಿ ಕೊಟ್ಟ ಸರ್ಕಾರ
ಬೆಂಗಳುರಿನ ಸಿಸಿಬಿ ದಾಳಿ ವೇಳೆ ತಾವು ಮಾಜಿ ಸಚಿವರು ಹಾಗೂ ಹಾಲಿ ಶಾಸಕರ ಮಕ್ಕಳು, ಸಂಬಂಧಿಕರು ಎಂದು ಅಪ್ರಾಪ್ತ ಯುವಕ- ಯುವತಿಯರು ಹೆಸರೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಶುಕ್ರವಾರ ಸಂಜೆ ಹಾಗೂ ರಾತ್ರಿ ವೇಳೆ ಬೆಂಗಳೂರಿನ ಎಲ್ಲಾ ಪಬ್ ಬಾರ್ ಹುಕ್ಕಾ ಬಾರ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಅಂದರೆ, ಕೋರಮಂಗಲ, ಇಂದಿರಾನಗರ, ಎಚ್ ಎಸ್ ಆರ್ ಲೇಔಟ್ , ಬಾಣಸವಾಡಿ, ಹೆಣ್ಣೂರು ಸೇರಿದಂತೆ ಎಲ್ಲಾ ಕಡೆ ಸಿಸಿಬಿಯಿಂದ ದಾಳಿ ಮಾಡಲಾಗಿತ್ತು. ಈ ವೇಳೆ 20ಕ್ಕೂ ಹೆಚ್ಚು ಅಪ್ರಾಪ್ತರು ಮದ್ಯಸೇವನೆ ನಶೆಯಲ್ಲಿ ತೇಲಾಡ್ತಿರೋದು ಪತ್ತೆಯಾಗಿದೆ.
ಬಾಣಸವಾಡಿಯ ಪಬ್ ಒಂದರಲ್ಲಿ ಅಪ್ರಾಪ್ತ ಯುವತಿಯರು ಮದ್ಯ ಸೇವಿಸಿರೋದು ಪತ್ತೆಯಾಗಿದೆ. ನಾವು ಎಂಎಲ್‌ಎ ಕಡೆಯವರು ಎಂದು ಅಪ್ರಾಪ್ತ ಯುವತಿಯರು ಪೊಲೀಸರ ಮೇಲೆಯೇ ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ಅಲ್ಲಿದ್ದ ಕೆಲವರು ಕೂಡ ಪೊಲೀಸರೇನು ಸಾಚಾಗಳಾ ಎಂದು ರೇಗುತ್ತಾ ಆಕ್ರೋಶ ವ್ಯಕ್ತಪಡಿಸಿ ಅವರನ್ನು ಬಿಟ್ಟು ಕಳಿಸುವಂತೆ ವಾಗ್ವಾದ ಮಾಡಿದ್ದಾರೆ. ಜೊತೆಗೆ, ಇನ್ನು ಕೆಲವು ಅಪ್ರಾಪ್ತ ಯುವಕ- ಯುವತಿಯರು ತಾವು ಸೀರಿಯಲ್ ಆರ್ಟಿಸ್ಟ್‌ಗಳು ಎಂದು ಪೊಲೀಸರ ವಿರುದ್ಧ ವಾಗ್ವಾದ ಮಾಡಿದ್ದಾರೆ. ಪೊಲೀಸರ ಮೇಲೆಯೇ ವಾಗ್ವಾದ ಮಾಡಿಕೊಂಡು ಅಲ್ಲಿಂದ ಹೋಗಿದ್ದಾರೆ.
ಮಂಗಳೂರು ಬೆಡಗಿ ಆಶಿಕಾ ಪಡುಕೋಣೆ ಹಾಟ್ ಲುಕ್ ನೋಡಿ: ಇವಳೇನಾ ಸೀರೆಯುಡುವ 'ತ್ರಿನಯನಿ'
ಇನ್ನು ಅಪ್ರಾಪ್ತರನ್ನು ಪಬ್, ಬಾರ್ ಹಾಗೂ ಹುಕ್ಕಾ ಬಾರ್‌ಗಳಿಗೆ ಪ್ರವೇಶ ಕೊಟ್ಟಿದ್ದಲ್ಲೇ ಮದ್ಯ (ಎಣ್ಣೆ) ಸಪ್ಲೈ ಮಾಡಿದ್ದಕ್ಕಾಗಿ ಪಬ್ ಹಾಗೂ ಬಾರ್‌ಗಳ ಮಾಲೀಕರ ಮೇಲೆ ಪೊಲೀಸರು ಕೇಸ್ ಹಾಕಿದ್ದಾರೆ. ಇತ್ತೀಚೆಗೆ ಶಾಲಾ ಕಾಲೇಜು ಮುಖ್ಯಸ್ಥರು ಕೂಡ ಮಕ್ಕಳು ಶಾಲೆ-ಕಾಲೇಜಿಗೆ ಬಾರದೇ ಪಬ್- ಬಾರ್‌ಗಳಲ್ಲಿ ಗಲಾಟೆ ಮಾಡಿಕೊಂಡು ಕಾಲೇಜಿಗೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಗೆ ಮನವಿ ಪತ್ರ ಕೊಟ್ಟಿದ್ದರು. ಇದಕ್ಕೆ ಸಂಬಂಧಿಸಿದಂತೆ ದಾಳಿ ಮಾಡಿದಾಗ ಕಾಲೇಜುಗಳ ಮುಖ್ಯಸ್ಥರ ಆರೋಪ ನಿಜವೆಂದು ಕಂಡುಬಂದಿದೆ.