Bengaluru ಮಹಾರಾಣಿ ಕಾಲೇಜು ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳಿಗೆ ಗುದ್ದಿದ ಕಾರು: ಗಾಯಾಳುಗಳು ಆಸ್ಪತ್ರೆಗೆ ದಾಖಲು
ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರೇ ಓವರ್ ಸ್ಟೀಡ್ ಆಗಿ ಕಾರು ಚಾಲನೆ ಮಾಡಿದ್ದು, ಇಬ್ಬರು ವಿದ್ಯಾರ್ಥಿಗಳು ಹಾಗೂ ಒಬ್ಬರು ಪ್ರಾಧ್ಯಾಪಕರಿಗೆ ಗಂಭೀರ ಗಾಯವಾಗಿದೆ.

ಬೆಂಗಳೂರು (ಅ.07): ರಾಜ್ಯ ರಾಜಧಾನಿ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರೇ ಓವರ್ ಸ್ಟೀಡ್ ಆಗಿ ಕಾರು ಚಾಲನೆ ಮಾಡಿದ್ದು, ಇಬ್ಬರು ವಿದ್ಯಾರ್ಥಿಗಳು ಹಾಗೂ ಒಬ್ಬರು ಪ್ರಾಧ್ಯಾಪಕರಿಗೆ ಗಂಭೀರ ಗಾಯವಾಗಿದೆ.
ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ಶನಿವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಮ್ಯೂಸಿಕ್ ಟೀಚರ್ ಜ್ಯೋತಿ ಅವರಿಗೂ ಗಾಯವಾಗಿದೆ. ಬಿಕಾಂ ವಿದ್ಯಾರ್ಥಿನಿ ಅಶ್ವಿನಿ ಹಾಗೂ ಮತ್ತೊಬ್ಬ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿದೆ. ಈ ಪೈಕಿ ಅಶ್ವಿನಿ ಎಂಬ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿದ್ದು, ಹತ್ತಿರದ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಕಾರು ಗುದ್ದಿದ ಸ್ಥಳದಲ್ಲಿ ತೀವ್ರ ರಕ್ತಸ್ರಾವ ಉಂಟಾಗಿದ್ದು, ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಹಣಕ್ಕಾಗಿ ನೀಟ್ ತಯಾರಿಯಲ್ಲಿದ್ದ ವಿದ್ಯಾರ್ಥಿ ಅಪಹರಿಸಿ ಕೊಲೆ, ಶವ ಸೂಟ್‌ಕೇಸ್‌ನಲ್ಲಿಟ್ಟ ಹೋಟೆಲ್ ಮಾಲೀಕ!
ಇನ್ನು ಅಪಘಾತ ಮಾಡಿದ ವ್ಯಕ್ತಿಯನ್ನು ಹೆಚ್. ನಾಗರಾಜ್ ಇಂಗ್ಲೀಷ್ ಪ್ರೊಫೆಸರ್ ಎಂದು ಗುರುತಿಸಲಾಗಿದೆ. ಕಾಲೇಜು ಕ್ಯಾಂಪಸ್ ಆವರಣದಲ್ಲೇ ಓವರ್ ಸ್ಪೀಡ್ ನಲ್ಲಿ ಚಾಲನೆ ಮಾಡಿದ್ದರಿಂದ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಇನ್ನು ಕಾಲೇಜು ಆವರಣದಲ್ಲಿ ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಡೆದುಕೊಂಡು ಹೋಗುತ್ತಾರೆ. ಇಲ್ಲಿ ತೀವ್ರ ನಿಧಾನಗತಿಯಲ್ಲಿ ವಾಹನ ಚಾಲನೆ ಮಾಡಬೇಕು. ಆದರೆ, ಪ್ರೊಫೆಸರ್ ನಾಗರಾಜು ಅತಿ ವೇಗದಿಂದ ಚಾಲನೆ ಮಾಡಿದ್ದು, ಮುಂದೆ ಹೋಗುತ್ತಿದ್ದ ವಿದ್ಯಾರ್ಥಿನಿಗಳಿಗೆ ಡಿಕ್ಕಿ ಹೊಡೆದಿದೆ. ನಂತರ, ಮುಂದೆ ನಿಧಾನವಾಗಿ ಹೋಗುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಆ ಕಾರು ಮರಕ್ಕೆ ಹೋಗಿ ಡಿಕ್ಕಿ ಹೊಡೆದು ಜಖಂ ಆಗಿದೆ.
ಪಾರ್ಕಿಂಗ್ ಮಾಡುವಾಗ ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ ಪ್ರೊಫೆಸರ್: ಶನಿವಾರ ಬೆಳಗ್ಗೆ 9:45 ರಲ್ಲಿ ವೆಹಿಕಲ್ ಯೂ ಟರ್ನ್ ಮಾಡಿ ಪಾರ್ಕ್ ಮಾಡುವಾಗ ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ್ದಾರೆ. ಇನ್ನೊಂದು ವೆಹಿಕಲ್ ಗೆ ಡ್ಯಾಮೇಜ್ ಆಗಿದೆ. ಅಶ್ವಿನಿ ಹಾಗೂ ನಂದುಪ್ರಿಯಾ ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯವಾಗಿದೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉತ್ತರ ಸಂಚಾರಿ ಡಿಸಿಪಿ ಸಚಿನ್ ಘೋರ್ಪಡೇ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರರಿಗೆ ಗುಡ್ ನ್ಯೂಸ್ ಕೊಟ್ಟ ಪಾಲಿಕೆ: ಆದರೆ ಶಾಸಕ ಮುನಿರತ್ನಗೆ ಶಾಕ್!
ಬೆಂಗಳೂರು (ಅ.07): ಎರಡನೇ ಕಂತಿನ 73.07 ಕೋಟಿ ರೂಪಾಯಿ ಬಿಡುಗಡೆಗೆ ಬಿಬಿಎಂಪಿ ಅನುಮೋದನೆ ನೀಡಿದ್ದು, ಈ ಮೂಲಕ ಬಿಬಿಎಂಪಿ ಗುತ್ತಿಗೆದಾರರಿಗೆ ಗುಡ್ ನ್ಯೂಸ್ ಕೊಟ್ಟಿದೆ. 2021ರ ಅಕ್ಟೋಬರ್ ತಿಂಗಳ ಕಾಮಗಾರಿ ಬಿಲ್ ಅನ್ನು ಪಾಲಿಕೆ ಬಿಡುಗಡೆ ಮಾಡಿದ್ದು, ಈ ಅವಧಿಯಲ್ಲಿ ಆಗಿರುವ ಕಾಮಗಾರಿಗಳ ಪೈಕಿ SIT ತನಿಖೆಗೆ ಒಳಪಟ್ಟಿರುವ ಕಾಮಗಾರಿಗಳ ಬಿಲ್ ಗೆ ತಡೆಯನ್ನು ನೀಡಿದೆ. ಇದರ ಹೊರತಾಗಿ ಬಿಬಿಎಂಪಿ ಉಳಿದೆಲ್ಲಾ ಬಿಲ್ ಕ್ಲಿಯರ್ ಮಾಡಿದೆ. ವಲಯವಾರು ಬಾಕಿ ಮೊತ್ತ ಹಂಚಿಕೆ ಮಾಡಿ ಅನುಮೋದಿಸಿರುವ ಪಾಲಿಕೆ ಹಂತ ಹಂತವಾಗಿ ಗುತ್ತಿಗೆದಾರರ ಬಿಲ್ ಅನ್ನು ಕ್ಲಿಯರ್ ಮಾಡುತ್ತಿದೆ.
ರಾಜಾರಾಜೇಶ್ವನಗರ ವಿಭಾಗ ವ್ಯಾಪ್ತಿಯ 160,129,73,37,16,17,38,42,69 ವಾರ್ಡ್‌ನ ಕೆಲವೊಂದು ಕಾಮಗಾರಿಗಳಿಗೆ ಸಾರ್ವಜನಿಕ ದೂರು ಬಂದ ಕಾರಣ, ಪಾಲಿಕೆ ಯಾವುದೇ ಬಿಲ್ಲು ಪಾಸ್ ಮಾಡಿಲ್ಲ ಹೀಗಾಗಿ ಶಾಸಕ ಮುನಿರತ್ನಗೆ ಸರ್ಕಾರ ಶಾಕ್ ಕೊಟ್ಟಿದೆ. 9 ಷರತ್ತುಗಳೊಂದಿಗೆ ಬಿಬಿಎಂಪಿ ಬಿಲ್ ನೀಡಿದ್ದು, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ 9 ವಾರ್ಡ್‌ಗಳಿಗೆ ಮಾತ್ರ ಬಿಲ್ ಭಾಗ್ಯವಿಲ್ಲ. ಬಿಲ್ ಬಿಡುಗಡೆಯಲ್ಲೂ ಮುಂದುವರೆಯಿತಾ ಶಾಸಕ ಮುನಿರತ್ನ - ಡಿಕೆಶಿ ಬ್ರದರ್ಸ್ ಜಿದ್ದಾಜಿದ್ದಿ. ಬಿಜೆಪಿ - ಜೆಡಿಎಸ್ ಮೈತ್ರಿ ಓಡಾಟದ ಮುಚಂಚೂಣಿಯಲ್ಲಿ ಕಾಣಿಸಿಕೊಂಡಿರುವ ಮುನಿರತ್ನ. ಬಿಬಿಎಂಪಿ 9 ವಲಯಗಳಿಗೆ 78 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಬಿಬಿಎಂಪಿಯು ಜೇಷ್ಠತೆ ಆಧಾರದಲ್ಲಿ ಒಟ್ಟು ಬಿಲ್ ನ ಶೇ. 75 ರಷ್ಟು ಬಿಲ್ ಬಿಡುಗಡೆಗೆ ಆದೇಶ ಮಾಡಿದೆ. ದೂರುಗಳು ಮತ್ತು ಎಸ್ ಐಟಿ ತನಿಖೆ ಹೆಸರಲ್ಲಿ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಲ್ ಗಳಿಗೆ ಬ್ರೇಕ್ ಹಾಕಲಾಗಿದೆ.