ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬನ ಪ್ರೀತಿಯ ಬಲೆಗೆ ಬಿದ್ದ 22 ವರ್ಷದ ಯುವತಿ ಭವಾನಿ, ಇಬ್ಬರೂ ಒಟ್ಟಿಗೆ ಸಾಯುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ವಿಷ ಕುಡಿಯುವ ನಾಟಕವಾಡಿದ ಪ್ರಿಯಕರ ಬದುಕುಳಿದಿದ್ದು, ಯುವತಿ ಮಾತ್ರ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. 

ಬೆಂಗಳೂರು: ಪ್ರೀತಿ ಎನ್ನುವುದು ಎಷ್ಟು ಸುಂದರವೋ, ಅಷ್ಟೇ ಅಪಾಯಕಾರಿ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಆಟೋ ಚಾಲಕನೊಬ್ಬನ ಪ್ರೇಮಪಾಶಕ್ಕೆ ಬಿದ್ದ 22 ವರ್ಷದ ಯುವತಿ ಭವಾನಿ, ಹೆತ್ತವರ ಭಯಕ್ಕೆ ಹಾಗೂ ಪ್ರಿಯಕರನ ಮಾತು ನಂಬಿ ಸಾವಿಗೆ ಶರಣಾಗಿದ್ದಾಳೆ. ದುರಂತವೆಂದರೆ ಇಬ್ಬರೂ ಸಾಯೋಣ ಎಂದು ವಿಷ ಕುಡಿದಿದ್ದರೂ, ಯುವತಿ ಸಾವನ್ನಪ್ಪಿದ್ದಾಳೆ. ಆದರೆ ನಾನು ವಿಷ ಕುಡಿಯುತ್ತೇನೆಂದು ಬಾಯಿ ಮೇಲೆ ವಿಷ ಹಾಕಿಕೊಂಡು ನಾಟಕವಾಡಿದ ಆಟೋ ಅಂಕಲ್ ಪ್ರಿಯಕರ ಮಾತ್ರ ಸಾವಿನಿಂದ ಪಾರಾಗಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾರು ಈ ಭವಾನಿ?:

ಮಾಗಡಿ ಮೂಲದ ಭವಾನಿ ಎರಡು ವರ್ಷಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದಳು. ಮೊಬೈಲ್ ಅಂಗಡಿಯೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಈಕೆ, ಸ್ವತಂತ್ರವಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಮಗಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದ ಹೆತ್ತವರು ಇತ್ತೀಚೆಗಷ್ಟೇ ಆಕೆಗೆ ಮದುವೆ ನಿಶ್ಚಯಿಸುವ ಬಗ್ಗೆ ಮಾತನಾಡಿದ್ದರು. ಭವಾನಿ ಕೂಡ ಅದಕ್ಕೆ ಒಪ್ಪಿಗೆ ನೀಡಿ ಬೆಂಗಳೂರಿಗೆ ಮರಳಿದ್ದಳು. ಆದರೆ, ಮರಳಿದ ಎರಡೇ ದಿನಕ್ಕೆ ಆಕೆ ಹೆಣವಾಗಿ ಪತ್ತೆಯಾಗಿದ್ದಾಳೆ.

ಆಟೋ ಚಾಲಕನೊಂದಿಗೆ ಲವ್ ಸ್ಟೋರಿ:

ತನಿಖೆಯ ವೇಳೆ ಪೊಲೀಸರಿಗೆ ಈಕೆಯ ನಿಗೂಢ ಸಾವಿನ ಹಿಂದಿನ ಕಥೆ ಬಯಲಾಗಿದೆ. ಭವಾನಿಗೆ ಆಟೋ ಚಾಲಕನೊಬ್ಬನ ಪರಿಚಯವಾಗಿ ಅದು ಪ್ರೀತಿಯಾಗಿ ಬದಲಾಗಿತ್ತು. ಆದರೆ ಆ ವ್ಯಕ್ತಿಗೆ ಈಗಾಗಲೇ ಮದುವೆಯಾಗಿದೆ ಎಂಬ ಸುಳಿವಿಲ್ಲದೇ ಇಬ್ಬರೂ ಲಿವಿಂಗ್ ಟುಗೆದರ್ ರೀತಿಯಲ್ಲಿ ಒಟ್ಟಿಗೆ ಇದ್ದರು. ಇನ್ನು ಆಟೋ ಡ್ರೈವರ್ ಮಾತ್ರ ತಾನೇ ಮದುವೆಯಾಗುವ ಹುಡುಗಿ ಎಂದು ಹೇಳಿಕೊಂಡು ಆಗಾಗ ಮನೆಗೆ ಬಂದು ಹೋಗುತ್ತಿದ್ದನು. ಆದರೆ, ಕೆಲವು ದಿನಗಳು ಕಳೆದಂತೆ ಈತನಿಗಾಗಲೇ ಮದುವೆಯಾಗಿ ಒಂದು ಮಗನೂ ಇದ್ದ ಎಂಬ ಸತ್ಯ ಭವಾನಿಗೆ ತಿಳಿದಿದೆ. ಆಗ ಯುವತಿ ಈಗಾಗಲೇ ಮದುವೆಯಾದ ಪ್ರಿಯಕರನೊಂದಿಗೆ 2ನೇ ಮದುವೆಗೆ ಮನೆಯಲ್ಲಿ ಒಪ್ಪುವುದಿಲ್ಲ ಎಂಬ ಭಯ ಆಕೆಗೆ ಕಾಡತೊಡಗಿತ್ತು.

ಹೀಗಾಗಿ, ಮನೆಯವರು ತೋರಿಸಿದ ಹುಡುಗನನ್ನು ಮದುವೆ ಮಾಡಿಕೊಳ್ಳುವುದಕ್ಕೆ ಒಪ್ಪಿಗೆಯನ್ನೂ ಕೊಟ್ಟಿದ್ದಳು. ಆದರೆ, ಇಲ್ಲಿ ಮದುವೆಯಾಗಿರುವ ಆಟೋ ಅಂಕಲ್‌ನನ್ನು ಬಿಟ್ಟಿರಲಾಗದೇ ಆತನೊಂದಿಗೆ ಮದುವೆಯಾಗಿ ಹೆತ್ತವರಿಗೆ ಮುಖ ತೋರಿಸಲಾಗದ ಸಂಕಟದಿಂದ ಪರದಾಡುತ್ತಿದ್ದಳು. ಆಗ, ಭವಾನಿ ವಾಸವಿದ್ದ ಮನೆಗೆ ಬಂದ ಆಟೋ ಡ್ರೈವರ್ ನಾವಿಬ್ಬರೂ ಒಟ್ಟಾಗಿ ಸಾಯೋಣ ಎಂದು ಆಕೆಯನ್ನು ಒಪ್ಪಿಸಿದ್ದಾನೆ. ನಂತರ, ವಿಷ ಸೇವನೆ ಮಾಡಿ ಸಾಯುವುದಕ್ಕೆ ತೀರ್ಮಾನಿಸಿದ್ದಾರೆ.

ಸಾಯುವ ಮುನ್ನ ನಡೆದಿದ್ದೇನು?:

ಮನೆಯಲ್ಲಿ ಇಬ್ಬರೂ ವಿಷ ಕುಡಿದಿದ್ದಾರೆ. ಈ ವೇಳೆ ಪ್ರಿಯಕರ ತಾನು ಸ್ವಲ್ಪ ವಿಷ ಕುಡಿದು, ಉಳಿದದ್ದನ್ನು ಬಾವಿ ಮೇಲೆ ಚೆಲ್ಲಿಕೊಂಡಿದ್ದಾನೆ. ಕೊನೆಗೆ ತನಗೆ ಹೆಂಡತಿ-ಮಕ್ಕಳಿರುವ ಬಗ್ಗೆ ತಿಳಿದು ತಾನು ಸಾಯಬಾರದು ಎಂದು, ಆದರೆ ಯುವತಿ ಸಾಯಬೇಕೆಂದು ಆಕೆಯ ಕತ್ತು ಹಿಸುಕಿದ್ದಾನೆ ಎನ್ನಲಾಗಿದೆ. ಪರಿಣಾಮವಾಗಿ ಭವಾನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆದರೆ ವಿಷ ಕುಡಿದಂತೆ ನಾಟಕವಾಡಿದ್ದ ಪ್ರಿಯಕರ ಮಾತ್ರ ಸಾವಿನಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.