Asianet Suvarna News Asianet Suvarna News

Bengaluru Danger: ಬೆಂಗಳೂರಲ್ಲಿವೆ 25 ಪ್ರವಾಹ ಪೀಡಿತ ಪ್ರದೇಶ: ಬಿಬಿಎಂಪಿ ಆಯುಕ್ತ ಮಾಹಿತಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಬಂದಾಗ ಪ್ರವಾಹ ಪರಿಸ್ಥಿತಿ ಉಂಟಾಗುವ 25 ಸೂಕ್ಷ್ಮ ಪ್ರದೇಶಗಳಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ.

Bengaluru have 25 flood affected areas BBMP Commissioner information sat
Author
First Published May 22, 2023, 12:45 PM IST

ಬೆಂಗಳೂರು (ಮೇ 22): ಭಾನುವಾರ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ ಕೆ.ಆರ್.ಸರ್ಕಲ್ ಅಂಡರ್ ಪಾಸ್ ನಲ್ಲಿ ಅವಘಡ ಸಂಭವಿಸಿದೆ. ಆದ್ದರಿಂದ ಬೆಂಗಳೂರಿನ ಎಲ್ಲಾ ಅಂಡರ್ ಪಾಸ್ ಗಳ ಆಡಿಟ್ ನಡೆಸುತ್ತಿದ್ದೇವೆ. ವರದಿ ಬಂದ ನಂತರ ಸಂಚಾರಕ್ಕೆ ಸೂಕ್ತವಿಲ್ಲದಿರುವ ಅಂಡರ್ ಪಾಸ್ ಗಳನ್ನು  ಕ್ಲೋಸ್ ಮಾಡುತ್ತೆವೆ. ಆದರೆ, ಬೆಂಗಳೂರಿನಲ್ಲಿ ಇನ್ನೂ 25 ಸೂಕ್ಷ್ಮ ಪ್ರದೇಶಗಳಿದ್ದು ಅಲ್ಲಿ ಹೆಚ್ಚಿನ ಮಳೆ ಬಂದರೆ ಪ್ರವಾಹ ಪರಿಸ್ಥಿತಿ ಎದುರಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ತುಷಾರ್‌ ಗಿರಿನಾಥ್‌ ಅವರು, ನಿನ್ನೆ ಭಾನುವಾರ ಮಧ್ಯಾಹ್ನ  3.15ರಿಂದ  4 ಗಂಟೆಯೊಳಗೆ 50 ಮಿ.ಮೀ.ಗಿಂತ ಹೆಚ್ಚಿನ ಮಳೆ ಆಗಿದೆ. ಸಂಜೆಯ ವೇಳೆಗೆ ಮಳೆ ನಿಂತುಕೊಂಡಿದ್ದು ಎಲ್ಲವೂ ಕ್ಲಿಯರ್ ಆಗಿದೆ. ಆದರೆ, ಕೆ.ಆರ್. ಸರ್ಕಲ್ ಅಂಡರ್ ಪಾಸ್ ನಲ್ಲಿ ಮಾತ್ರ ಒಂದು ಅವಘಡ ನಡೆದಿದೆ. ಆದ್ದರಿಂದ ನಗರದ ಎಲ್ಲ ಅಂಡರ್ ಪಾಸ್‌ಗಳ ಆಡಿಟ್ ನಡೆಸುತ್ತಿದ್ದೇವೆ. ವರದಿ ಬಂದ ನಂತರ ಸಂಚಾರಕ್ಕೆ ಸೂಕ್ತವಿಲ್ಲದಿರುವ ಅಂಡರ್ ಪಾಸ್ ಗಳನ್ನು  ಕ್ಲೋಸ್ ಮಾಡುತ್ತೆವೆ. ರೈಲ್ವೆ ಅಂಡರ್ ಪಾಸ್ ಗಳು ಸೇರಿದಂತೆ 18 ಕಡೆ ನಾವು ತಕ್ಷದಲ್ಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. 

Bengaluru: ಡ್ರೈವರ್‌ ಮಾತನ್ನ ಉಡಾಫೆ ಮಾಡಿದ ಕುಟುಂಬ: ಮಗಳನ್ನು ನೀರಲ್ಲಿ ಮುಳುಗಿಸಿ ಕಣ್ಣೀರು

ಮತ್ತೊಂದೆಡೆ ಮಹಾಲಕ್ಷ್ಮಿ ಲೇಔಟ್ ನಲ್ಲಿ ರಾಜಕಾಲುವೆ ಕೆಲಸ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅವಘಡ ಸಂಭವಿಸಿದ್ದು, 20 ಮನೆಗಳಿಗೆ ನೀರು ನುಗ್ಗಿದೆ. ಇನ್ನು ಕೆ.ಆರ್.ಸರ್ಕಲ್‌ ಹಾಗು ಇತರೆ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತುಕೊಳ್ಳಲು ಕಾರಣವೂ ಇದೆ. ಬಿರುಗಾಳಿ ಮಿಶ್ರಿತ, ಆಲಿಕಲ್ಲು ಮಳೆಯಾಗಿದ್ದರಿಂದ ಮರದ ಎಲೆಗಳು ಉದುರಿವೆ. ಈ ವೇಳೆ 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಿದ್ದು, ನೀರಿನೊಂದು ಹರಿದು ಅಂಡರ್‌ಪಾಸ್‌ಗೆ ಸೇರಿಕೊಂಡಿವೆ. ಈ ವೇಳೆ ನೀರು ಹರಿಯುವ ಜಾಗದಲ್ಲಿ ಎಲೆಗಳು ಸೇರಿಕೊಂಡು ನೀರು ಹೋಗಲಾಗದೇ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದೇ ರೀತಿ ಕೆ.ಆರ್. ಸರ್ಕಲ್‌ ಅಂಡರ್‌ಪಾಸ್‌ನಲ್ಲಿಯೂ ದುರಂತ ಸಂಭವಿಸಿದೆ ಎಂದು ತಿಳಿಸಿದರು. 

25 ಸೂಕ್ಷ್ಮ ಪ್ರದೇಶಗಳಲ್ಲಿ ಪ್ರವಾಹ ಕಟ್ಟಿಟ್ಟ ಬುತ್ತಿ: ಅಂಡರ್ ಪಾಸ್ ನಲ್ಲಿ ನಡೆದ ಮಳೆ ಅನಾಹುತಕ್ಕೆ ಎರಡು ತರಹದ ಕಾರಣಗಳಿವೆ. ಮಳೆ ನೀರಿನಿಂದ ಸುತ್ತಮುತ್ತಲಿನ ಪ್ರದೇಶದಿಂದ ಬರುವಂತಹ ನೀರು ಹೆಚ್ಚಾಗಿದೆ. ಆದ್ದರಿಂದ ಅಂಡರ್ ಪಾಸ್ ಗಳು ತುಂಬುವ ಪರಿಸ್ಥಿತಿ ಎದುರಾಗಿದೆ. ಪೊಲೀಸ್ ಇಲಾಖೆಯಿಂದ ನೀಡಿದ್ದ ಸೂಕ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ದುರಸ್ತಿ ಕಾರ್ಯ ಮಾಡಲಾಗಿದೆ. ಒಟ್ಟು 115 ಕಡೆ ದುರಸ್ತಿ ಕಾರ್ಯ ನಡೆದಿದ್ದು ಅಲ್ಲಿ ಯಾವುದೆ ಸಮಸ್ಯೆ ಇಲ್ಲ. ಆದರೆ, ಇನ್ನೂ 25 ಕಡೆ ಸೂಕ್ಷ್ಮ ಪ್ರದೇಶಗಳನ್ನು ಕ್ಲಿಯರ್ ಮಾಡಬೇಕಿದೆ ಅಲ್ಲಿ ಕೆಲಸ ನಡೆಯುತ್ತಿದೆ. ನಾವು ನಿರಂತರವಾಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೀವೆ ಎಂದು ಹೇಳಿದರು. 

ಚಿಕ್ಕಮಗಳೂರಿನ ಭದ್ರಾ ಜಲಾಶಯ ಕಾಲುವೆ ನೀರಿನಲ್ಲಿ ಮುಳುಗಿ ಮೂವರ ಸಾವು

607 ಒತ್ತುವರಿ ಕೇಸ್‌ ಕೋರ್ಟ್‌ನಲ್ಲಿವೆ: ಬೆಂಗಳೂರಿನಲ್ಲಿ ರಾಜಕಾಲುವೆ ಕೆಲಸಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ. ನಾವು ನಿರಂತರವಾಗಿ ಕೆಲಸ ನಡೆಸಿದ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ಮಳೆಯಾದರೂ ನಗರದಲ್ಲಿ ಈ ಹಿಂದೆ ನಡೆಯುತ್ತಿದ್ದಷ್ಟು ಹೆಚ್ಚು ಕಡೆ ಅವಘಡಗಳು ನಡೆದಿಲ್ಲ. ಮತ್ತೊಂದೆಡೆ ಬಿಬಿಎಂಪಿ ವ್ಯಾಪ್ತಿಯಲ್ಲಿ 607 ಸ್ಥಳಗಳಲ್ಲಿ ರಾಜಕಾಲುವೆ ಒತ್ತುವರಿ ಆಗಿರುವ ಕುರಿತು ನ್ಯಾಯಾಲಯಗಳಲ್ಲಿ ಕೇಸ್‌ ನಡೆಯುತ್ತಿವೆ. ಹೀಗಾಗಿ, ಅಲ್ಲಿ ತೆರವು ಕಾರ್ಯಾಚರಣೆಗೆ ವಿಳಂಬವಾಗಿದೆ. ಉಳಿದ 500 ಕಡೆ ಕಾಲುವೆ ಒತ್ತುವರಿಯನ್ನು ತೆರವು ಮಾಡಲಾಗುತ್ತದೆ. ಮಹಾದೇವಪುರ ವಲಯದಲ್ಲಿ ಈಗಾಗಲೇ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

Follow Us:
Download App:
  • android
  • ios