Bengaluru: ಡ್ರೈವರ್‌ ಮಾತನ್ನ ಉಡಾಫೆ ಮಾಡಿದ ಕುಟುಂಬ: ಮಗಳನ್ನು ನೀರಲ್ಲಿ ಮುಳುಗಿಸಿ ಕಣ್ಣೀರು

ಬೆಂಗಳೂರಿನ ಕೆ.ಆರ್. ಸರ್ಕಲ್‌ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಆಂಧ್ರಪ್ರದೇಶ ಮೂಲದ ಇನ್ಫೋಸಿಸ್‌ ಉದ್ಯೋಗಿ ಯುವತಿ ಸಾವನ್ನಪ್ಪಿದ್ದಾಳೆ.

Bengaluru news woman dies car submerged in flooded underpass at bengaluru sat

ಬೆಂಗಳೂರು (ಮೇ 21): ಬೆಂಗಳೂರಿನಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಕೆ.ಆರ್. ಸರ್ಕಲ್‌ ಬಳಿಯ ಅಂಡರ್‌ಪಾಸ್‌ನಲ್ಲಿ ನಿಂತುಕೊಂಡಿದ್ದ ನೀರಿನಲ್ಲಿ ಕಾರು ಮುಳುಗಿ ಇನ್ಫೋಸಿಸ್ ಟೆಕ್ಕಿ ಮಹಿಳೆ ಸಾವನ್ನಪ್ಪಿದ ದುರ್ಘಟನೆ ಬಗ್ಗೆ ಸತ್ಯಾಂಶ ಹೊರಬಂದಿದೆ. ಚಾಲಕ ಕಾರು ಮುಂದೆ ಹೋಗೊಲ್ಲ ಇಳಿಯುವಂತೆ ಸೂಚಿಸಿದರೂ ಇಳಿಯದೇ ಗಾಡಿ ಮುಂದಕ್ಕೆ ಹೋಗುವಂತೆ ಹೇಳಿದ್ದಾರೆ. ಆದರೆ, ನೀರಿನಲ್ಲಿ ಇಂಜಿನ್‌ ಆಫ್‌ ಆಗಿದ್ದು, ನೀರಿನಲ್ಲಿ ಮುಳುಗಿ ಯುವತಿ ಸಾವನ್ನಪ್ಪಿದ್ದಾಳೆ.

ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾನುರೇಖಾಳನ್ನು ನೋಡಲು ಅವರ ಕುಟುಂಬ ಸದಸ್ಯರು ಬೆಂಗಳೂರಿಗೆ ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದರು. ಇಂದು ಭಾನುವಾರ ರಜಾ ದಿನವಾದ್ದರಿಂದ ಕಬ್ಬನ್‌ಪಾರ್ಕ್‌ ನೋಡಲು ಕುಟುಂಬದ 6 ಜನ ಸದಸ್ಯರು ಹಾಗೂ ಡ್ರೈವರ್‌ ಸೇರಿ ಏಳು ಮಂದಿ ಕಾರಿನಲ್ಲಿ ಅಂಡರ್‌ಪಾಸ್‌ ದಾಟಿಕೊಂಡು ಹೋಗುತ್ತಿದ್ದರು. ಆದರೆ, ಅಂಡರ್‌ಪಾಸ್‌ನ ಬಳಿ ಬ್ಯಾರಿಕೇಡ್‌ ಹಾಕಿದ್ದು, ನೀರು ತುಂಬಾ ಹೆಚ್ಚಾಗಿದೆ. ಕಾರು ಮುಂದಕ್ಕೆ ಹೋಗುವುದಿಲ್ಲ ಇಳಿಯಿರಿ ಎಂದು ಸೂಚನೆ ನೀಡಿದ್ದಾರೆ. ಆದರೆ, ಡ್ರೈವರ್‌ ಮಾತನ್ನು ಉಡಾಫೆ ಮಾಡಿದ ಕುಟುಂಬ ಕಾರನ್ನು ಮುಂದಕ್ಕೆ ಹೋಗುವಂತೆ ಹೇಳಿದ್ದಾರೆ.

Bengaluru Rain:ಮಹಾಮಳೆಗೆ ಸಿಲುಕಿ ಯುವತಿ ಸಾವು: ಪ್ರವಾಸಕ್ಕೆ ಬಂದವಳು ದುರಂತ ಅಂತ್ಯ

ಕಾರಿನ ಇಂಜಿನ್‌ ಆಫ್‌ ಆಗಿ ಡೋರ್‌ ಲಾಕ್: ಕಾರನ್ನು ಬಾಡಿಗೆ ಮಾಡಿಕೊಂಡ ಬಂದವರೇ ಕಾರನ್ನು ಓಡಿಸುವಂತೆ ಹೇಳಿದ್ದರಿಂದ ಡ್ರೈವರ್‌ ಕಾರನ್ನು ನೀರಿನಲ್ಲಿ ಇಳಿಸಿದ್ದಾನೆ. ಆಗ ಕಾರಿನ ಇಂಜಿನ್‌ ಆಫ್‌ ಆಗಿದ್ದು, ಕಾರಿನ ಡೋರ್‌ಗಳು ಲಾಕ್‌ ಆಗಿವೆ. ನೀರು ಬಾಗಿಲ ಎತ್ತರಕ್ಕೂ ತುಂಬಿಕೊಳ್ಳುತ್ತಾ ಬಂದಿದೆ. ಆದರೆ ಡ್ರೈವರ್‌ ಕಾರಿನ ಕಿಟಕಿಯನ್ನು ಸ್ವಲ್ಪ ತೆರೆದುಕೊಂಡಿದ್ದರಿಂದ ಕೈ ಹೊರಗೆ ಹಾಕಿ ಡೋರ್‌ ತೆಗರೆದುಕೊಂಡು ಹೊರಗೆ ಬಂದಿದ್ದಾರೆ. ನಂತರ ಒಬ್ಬೊಬ್ಬರನ್ನೇ ಕಾರಿನಿಂದ ಹೊರಗೆ ಎಳೆದುಕೊಂಡು ರಕ್ಷಣೆ ಮಾಡಲು ಮುಂದಾಗಿದ್ದಾನೆ. ನಂತರ ಸ್ಥಳೀಯರು ಕೂಡ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಹಿಂದಿನ ಸೀಟಿನಲ್ಲಿದ್ದ ಭಾನುರೇಖಾ ನೀರು ಕುಡಿದಿದ್ದಳು:  ಆಂಧ್ರಪ್ರದೇಶದ ವಿಜಯವಾಡದಿಂದ ಬಂದಿದ್ದ ಕಾರಿನಲ್ಲಿ ಒಂದೇ ಕುಟುಂಬದ ಸಮಿತಾ 13, ಸೋಹಿತಾ 15, ಸಂಭ್ರಾಜ್ಯಂ 65, ಭಾನುರೇಖಾ 22 ಸ್ವರೂಪ 47, ಸಂದೀಪ್‌ 35 ಹಾಗೂ ಡ್ರೈವರ್‌ ಹರೀಶ್‌ ಕಾರಿನಲ್ಲಿದ್ದರು. ಆದರೆ, ಹಿಂದಿನಿ ಸೀಟಿನಲ್ಲಿ ಕುಳಿತಿದ್ದ ಭಾನುರೇಖಾ ಅವರನ್ನು ರಕ್ಷಣೆ ಮಾಡುವಷ್ಟರಲ್ಲಾಗಲೇ ನೀರನ್ನು ಕುಡಿದು ಉಸಿರಾಟ ಸಮಸ್ಯೆಯಿಂದ ಜ್ಞಾನ ಕಳೆದುಕೊಂಡಿದ್ದಳು. ನಂತರ ಅಗ್ನಿಶಾಮಕ ಸಿಬ್ಬಂದಿ ಬಂದು ಒಬ್ಬೊಬ್ಬರನ್ನೇ ರಕ್ಷಣೆ ಮಾಡಿದ್ದಾರೆ. ನಂತರ ಎಲ್ಲರನ್ನೂ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆಸ್ಪತ್ರೆಗ ಬಂದ ಕೂಡಲೇ ಭಾನುರೇಖಾಳನ್ನ ಆಸ್ಪತ್ರೆ ವೈದ್ಯರು ಪರೀಕ್ಷೆ ಮಾಡಿದ್ದು, ಈ ವೇಳೆ ಮೃತ ಆಗಿರೋದು ಗೊತ್ತಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಹಲಸೂರು ಗೇಟ್‌ ಠಾಣೆಯಲ್ಲಿ ಪ್ರಕರಣ: ಮೃತ ಭಾನುರೇಖಾಳ ಸಂಬಂಧಿ ಸಂದೀಪ್‌ ಅವರು ನೀಡಿದ ದೂರಿನ ಅನ್ವಯ ಹಲಸೂರು ಗೇಟ್‌ನಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ. ಸದ್ಯ ಎಫ್ಐಆರ್ ದಾಖಲು ಮಾಡಿಕೊಂಡಿರುವ ಪೊಲೀಸರು ಪೂರ್ಣ ಪ್ರಮಾಣದ ಮಾಹಿತಿಯನ್ನು ಕಲೆಹಾಕಲಿದ್ದಾರೆ. ಮತ್ತೊಂದು ಕಡೆ ಆಸ್ಪತ್ರೆಯಲ್ಲಿ ಇನ್ಫೋಸಿಸ್‌ ಉದ್ಯೋಗಿ ಮೃತ ಭಾನುರೇಖಾ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಮೃತದೇಹವನ್ನು ಆಂಧ್ರಪ್ರದೇಶಕ್ಕೆ ತೆಗೆದುಕೊಂಡು ಹೋಗುವುದಾಗಿ ಕುಟುಂಬ ಸದಸ್ಯರು ಹೇಳಿದ್ದಾರೆ ಎಂದು ತಿಳಿದಿಬಂದಿದೆ.

Karnataka Rain: ರಾಜ್ಯಾದ್ಯಂತ ಮಹಾಮಳೆಗೆ ಒಂದೇ ದಿನ 3 ಬಲಿ: ಒಬೊಬ್ಬರದ್ದೂ ದುರಂತ ಸಾವು

ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಧನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಭೇಟಿನೀಡಿ ಬೆಂಗಳೂರಿನ ಕೆ.ಆರ್.ವೃತ್ತದ ಅಂಡರ್ ಪಾಸ್ ಬಳಿ ಮಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ 23 ವರ್ಷದ ಭಾನುರೇಖಾ ಅವರ ಕುಟುಂಬದವರನ್ನು ಭೇಟಿಮಾಡಿ ಸಾಂತ್ವನ ಹೇಳಿದರು. ಇದೇ ವೇಳೆ ದುರ್ಘಟನೆಯಲ್ಲಿ ಸಾವನ್ನಪ್ಪಿದ ಯುವತಿಯ ಕುಟುಂಬಕ್ಕೆ ರೂ. 5 ಲಕ್ಷ ಪರಿಹಾರ ಹಾಗೂ ಅಸ್ವಸ್ಥಗೊಂಡಿರುವ ಎಲ್ಲರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದರು.

Latest Videos
Follow Us:
Download App:
  • android
  • ios