ಬೆಂಗಳೂರಿನಲ್ಲಿ 14,000 ಕಿ.ಮೀ ರಸ್ತೆಗಳಿದ್ದರೂ, ಪಾದಚಾರಿ ಮಾರ್ಗಗಳ ಕೊರತೆ ತೀವ್ರವಾಗಿದೆ. ಟೆಂಡರ್‌ಶ್ಯೂರ್ ರಸ್ತೆಗಳು ಮಾತ್ರ ಉತ್ತಮವಾಗಿದ್ದು, ಉಳಿದ ರಸ್ತೆಗಳಲ್ಲಿ ಪಾದಚಾರಿಗಳಿಗೆ ಸ್ಥಳವಿಲ್ಲದಂತಾಗಿದೆ. ಹೊಸ ಯೋಜನೆಗಳಲ್ಲೂ ಪಾದಚಾರಿ ಮಾರ್ಗಗಳಿಗೆ ಸೂಕ್ತ ಗಮನ ನೀಡುತ್ತಿಲ್ಲ ಎಂಬುದು ಆತಂಕಕಾರಿ.
ಬೆಂಗಳೂರು: ದೇಶದ ನವ ಉದ್ಯಮದ ನಗರ ಎಂದೇ ಗುರುತಿಸಿಕೊಂಡಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುನಿಕಾರ್ನ್‌ಗಳಿಗಿಂತ ಪಾದಚಾರಿ ಮಾರ್ಗಗಳು ಅಪರೂಪವಾಗಿದೆ! ಕಿರಿದಾದ ರಸ್ತೆ, ಗಲ್ಲಿ ರಸ್ತೆ, ಮುಖ್ಯ ರಸ್ತೆ ಹಾಗೂ ಟೆಂಡರ್‌ಶ್ಯೂರ್ ರಸ್ತೆ ಹೀಗೆ ಹಲವು ರಸ್ತೆಗಳೂ ಸೇರಿದಂತೆ ನಗರದಲ್ಲಿ 14,000 ಕಿ.ಮೀ ಉದ್ದದ ರಸ್ತೆ ಜಾಲವಿದೆ. ಆದರೆ ಈ ಅಪಾರ ರಸ್ತೆ ಜಾಲದಲ್ಲಿ ಎಲ್ಲಿಯೂ ಪಾದಚಾರಿಗಳಿಗೆ ಸ್ಥಳವೇ ಇಲ್ಲದಂತಾಗಿದೆ.
ಪಾದಚಾರಿ ಮಾರ್ಗಗಳ ಕೊರತೆ
ಉದಾಹರಣೆಗೆ, ನಗರದಲ್ಲಿ 1,671 ಕಿ.ಮೀ ಉದ್ದದ ಹೆಚ್ಚು ಸಂಚಾರ ಇರುವ ಆರ್ಟಿರಿಯಲ್ ರಸ್ತೆ ಹಾಗೂ ಕಡಿಮೆ ಸಂಚಾರದ ಆರ್ಟಿರಿಯಲ್ ರಸ್ತೆಗಳಿದ್ದು, ಪಾದಚಾರಿ ಮಾರ್ಗ ಕೇವಲ 2.9 ಕಿ.ಮೀ ಮಾತ್ರ ಇದೆ! ಅಂದರೆ ಪ್ರತಿ 100 ಮೀಟರ್ ರಸ್ತೆಗೆ ಕೇವಲ 17 ಸೆಂ.ಮೀ ಪಾದಚಾರಿ ಮಾರ್ಗ. ಅಂದರೆ ಒಂದು ಪೆನ್ಸಿಲ್‌ನಷ್ಟು!
ಟೆಂಡರ್‌ಶ್ಯೂರ್ ರಸ್ತೆಗಳು ಮಾತ್ರ ಉತ್ತಮವಾಗಿದೆ. ಪಾದಚಾರಿಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಟೆಂಡರ್‌ಶ್ಯೂರ್ ರಸ್ತೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಒಟ್ಟು 13.4 ಕಿ.ಮೀ ಮಾತ್ರವಿದೆ. ಆದರೆ ಉಳಿದ ರಸ್ತೆಗಳ ಸ್ಥಿತಿಗತಿಗಳ ಬಗ್ಗೆ ಪಾದಚಾರಿ ಮಾರ್ಗಗಳ ಬಗ್ಗೆ, ಬಿಬಿಎಂಪಿ ಡೇಟಾ ಇಲ್ಲವೆಂದು ಸ್ಪಷ್ಟಪಡಿಸಿದೆ.
ಹಿರೇಬಾಗೆವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, 700 ರಸ್ತೆಗಳ ಮೇಲಿನ ಅಧ್ಯಯನವು ಪಾದಚಾರಿ ಮೂಲಸೌಕರ್ಯದ ಅವ್ಯವಸ್ಥೆಯನ್ನು ಬಹಿರಂಗಪಡಿಸಿದೆ. ಪೂರ್ವ ವಲಯದಲ್ಲಿ 318 ಕಿ.ಮೀ ರಸ್ತೆಗಳಲ್ಲಿ 1.2 ಕಿ.ಮೀ ಪಾದಚಾರಿ ಮಾರ್ಗವಿದ್ದರೆ, ದಕ್ಷಿಣ ವಲಯದಲ್ಲಿ 231 ಕಿ.ಮೀ ರಸ್ತೆಗೆ ಕೇವಲ 227 ಮೀಟರ್ ಮಾರ್ಗವಿದೆ.
ಭವಿಷ್ಯದ ಯೋಜನೆಗಳ ಬಗ್ಗೆ ಆತಂಕ
ಹೊಸ 272 ಕಿ.ಮೀ ರಸ್ತೆಗಳ ಯೋಜನೆ ಇದೆ. ಆದರೆ ಪಾದಚಾರಿ ಮಾರ್ಗದ ಯೋಜನೆ ಕೇವಲ 594 ಮೀ. ಮಾತ್ರ! “ಹಣ ಎಲ್ಲಿಗೆ ಹೋಗುತ್ತಿದೆ?” ಎಂದು ನಮ್ಮ ಬೆಂಗಳೂರು ಫೌಂಡೇಶನ್‌ನ ವಿನೋದ್ ಜಾಕೋಬ್ ಪ್ರಶ್ನಿಸುತ್ತಿದ್ದಾರೆ. ಎಲ್ಲಿ ಪಾದಚಾರಿ ಮಾರ್ಗಗಳಿಲ್ಲ ಎಂಬ ಮಾಹಿತಿ ಇಲ್ಲ. ಹಣದ ಕೊರತೆಯಿಂದ ನಿರ್ಮಾಣ ಮಾಡಲಾಗುತ್ತಿಲ್ಲ." ಬಿಬಿಎಂಪಿ ಅಧಿಕಾರಿಗಳು ಸಹ ಒಪ್ಪಿಕೊಂಡಿದ್ದಾರೆ.
ವಿದೇಶದ ನಗರಗಳಿಂದ ಪಾಠ ಕಲಿಯಬೇಕಿದೆ ಬೆಂಗಳೂರು
ನ್ಯೂಯಾರ್ಕ್: ಕನಿಷ್ಠ 1.5 ಮೀ. ಅಗಲದ ಪಾದಚಾರಿ ಮಾರ್ಗಗಳು, ವಿಶೇಷಾಂಗ ಚೇತನರಿಗೆ ಅನುಕೂಲ.
ಬಾರ್ಸಿಲೋನಾ: 2.4 ಮೀ ರಿಂದ 10 ಮೀವರೆಗೆ ಪಾದಚಾರಿ ಮಾರ್ಗ.
ಟೋಕಿಯೊ: ಉತ್ತಮ ಪ್ಲಾನಿಂಗ್ ಮತ್ತು ಸಾರಿಗೆ ಸಂಯೋಜನೆ.
ಕೋಪನ್‌ಹೆಗನ್: 1960ರಿಂದಲೇ ಪಾದಚಾರಿ ಮತ್ತು ಸೈಕಲ್ ಮಾರ್ಗಗಳ ಮೇಲಿನ ಗಮನ.
ಸಿಂಗಾಪುರ: ಮೆಟ್ರೋ ನಿಲ್ದಾಣಗಳವರೆಗೂ ಪಾದಚಾರಿ ಮಾರ್ಗ.
ಮೆಕ್ಸಿಕೋ ಸಿಟಿ: ಸುರಕ್ಷತೆಯೊಂದಿಗೆ ‘ಯುದ್ಧತಂತ್ರ ನಗರೀಕರಣ’.
ಸುರಕ್ಷತಾ ಬಿಕ್ಕಟ್ಟು:
ಭಾರತೀಯ ನಗರಗಳಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪಾದಚಾರಿಗಳು, ಸೈಕ್ಲಿಸ್ಟ್‌ಗಳು ಮತ್ತು ದ್ವಿಚಕ್ರ ವಾಹನ ಸವಾರರು ಭಾಗಿಯಾಗಿದ್ದಾರೆ ಎಂದು ಐಐಟಿ ದೆಹಲಿ 2016 ರಲ್ಲಿ ವರದಿ ಮಾಡಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ 2021 ರಲ್ಲಿ ಮಾತ್ರ 15,000 ಪಾದಚಾರಿ ಸಾವುಗಳನ್ನು ಬಹಿರಂಗಪಡಿಸಿದೆ. ಬೆಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 1,000ರಷ್ಟು ಜನ ಪಾದಚಾರಿ ಸಾವಿಗೀಡಾದರು. 2022ರಲ್ಲಿ 247, 2023ರಲ್ಲಿ 292, 2024ರಲ್ಲಿ 246 ಮತ್ತು 2025ರಲ್ಲಿ ಈಗಾಗಲೇ 71 ಪಾದಚಾರಿ ಸಾವುಗಳು ವರದಿಯಾಗಿದೆ. ಚೆನ್ನೈ ಮತ್ತು ಪುಣೆಯಲ್ಲಿ ಸುಧಾರಿತ ಪಾದಚಾರಿ ಮಾರ್ಗಗಳಲ್ಲಿ ಹೂಡಿಕೆ ಮಾಡುವುದರಿಂದ ಪಾದಚಾರಿಗಳ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ.
ಪಾದಚಾರಿ ಮಾರ್ಗಗಳ ಅಗತ್ಯ:
- ವಾಹನಗಳಿಗಿಂತ ದೂರವಿರುವ ಸುರಕ್ಷಿತ ನಡಿಗೆ.
- ಸಾರ್ವಜನಿಕ ಸಾರಿಗೆ ಸಂಪರ್ಕ ಸುಲಭ.
- ಮಾಲಿನ್ಯ ಕಡಿಮೆ, ಆರೋಗ್ಯ ಹೆಚ್ಚಳ.
- ಬಡವರು, ವೃದ್ಧರು ಮತ್ತು ವಿದ್ಯಾರ್ಥಿಗಳಿಗಾಗಿ ಅತ್ಯಗತ್ಯ ಮೂಲಸೌಕರ್ಯ.
- ಸಾರ್ವಜನಿಕರ ಅಭಿಪ್ರಾಯ
ಸಾರ್ವಜನಿಕರ ಅಭಿಪ್ರಾಯ
40 ವರ್ಷಗಳಿಂದ ಜಯನಗರದ ನಿವಾಸಿಯಾಗಿರು 70ರ ಹರೆಯದ ಮಾಲತಿ ಸತೀಶ್, "ಜಯನಗರ ಬಿಡಿಎ ಕಾಂಪ್ಲೆಕ್ಸ್‌ಗೆ ತರಕಾರಿ ತರಲು ನಡೆದುಕೊಂಡು ಹೋಗೋದನ್ನು ಇಷ್ಟಪಡುವೆ, ಆದರೆ ಇಲ್ಲಿ ಪಾದಚಾರಿ ಮಾರ್ಗವೇ ಇಲ್ಲ" ಎನ್ನುತ್ತಾರೆ. ಅನೀಶ್ ರೆಡ್ಡಿ ಕೂಡ, ಹೊಸ ರಸ್ತೆಗಳಲ್ಲಿ ಪಾದಚಾರಿಗಳಿಗೆ ಮೂಲಭೂತ ಸೌಲಭ್ಯಗಳಿಲ್ಲವೆಂದು ಕಳವಳ ವ್ಯಕ್ತಪಡಿಸುತ್ತಾರೆ.
ಪೂರ್ವ ವಲಯದಲ್ಲಿ ಇಂದಿರಾನಗರ, ಸಿವಿ ರಾಮನ್ ನಗರದಲ್ಲಿ ಉತ್ತಮ ಪಾದಚಾರಿ ಮಾರ್ಗಗಳಿದ್ದರೂ, ಕೆಆರ್ ಪುರ, ಟಿಸಿ ಪಾಳ್ಯ ಹಾಗೂ ಹಳೆ ಮದ್ರಾಸ್ ರಸ್ತೆಯಲ್ಲಿ ಪಾದಚಾರಿ ಮಾರ್ಗವೇ ಇಲ್ಲ ಎಂದು ನಿವಾಸಿಗಳು ಹೇಳುತ್ತಾರೆ.
ಪಾದಾಚಾರಿ ಮಾರ್ಗಗಳು ಐಷಾರಾಮಿ ಅಲ್ಲ. ಅವು ಅನಿವಾರ್ಯ. ಬೆಂಗಳೂರು ವಾಹನ ಮುಕ್ತ ನಗರವಾಗಬೇಕಾದರೆ, ಪಾದಚಾರಿಗಳಿಗೆ ಜಾಗ ನೀಡಬೇಕು. ಸ್ವರ್ಣಾ ವೆಂಕಟರಾಮನ್, ಇಂದಿರಾನಗರ
ಅನಿಲಕುಮಾರ್ ಜೆ, ಜಾಲಹಳ್ಳಿ: ಪಾದಚಾರಿ ಮಾರ್ಗಗಳು ಅಪಾಯಗಳಿಂದ ತುಂಬಿವೆ. ಮುರಿದ ಚಪ್ಪಡಿ ಕಲ್ಲುಗಳು, ವಾಹನಗಳು ನಿಲ್ಲಿಸಿರುವುದು, ಕೇಬಲ್‌ಗಳು ನೇತಾಡುತ್ತಿವೆ, ತ್ಯಾಜ್ಯಗಳಿಂದ ತುಂಬಿದೆ.
ದಿವ್ಯ ಕಿರಣ್ ಜೀವನ್, ಸಂವಹನ ತಜ್ಞೆ: ನಿಜವಾದ ಪ್ರಗತಿ ಎಕ್ಸ್‌ಪ್ರೆಸ್‌ವೇಗಳಲ್ಲಿ ಅಲ್ಲ. ಪಾದಚಾರಿ ಮಾರ್ಗಗಳಲ್ಲಿ ಇದೆ. ಮಕ್ಕಳು, ವೃದ್ಧರು, ಅಂಗವಿಕಲರು ಸುರಕ್ಷಿತವಾಗಿ ನಡೆದುಕೊಳ್ಳಲು ಸಾಧ್ಯವಾಗಬೇಕು.
ಕೆ.ಎನ್. ರಂಗನಾಥ್, ಉತ್ಪನ್ನ ಸಲಹೆಗಾರ: ಮಲ್ಲೇಶ್ವರಂನಲ್ಲಿ ನಡೆಯಲು ತುಂಬಾ ಅಡಚಣೆಗಳಿವೆ. 75 ವರ್ಷದ ನೆರೆಹೊರೆಯವರಿಗೆ ಮಾರುಕಟ್ಟೆ ಅಥವಾ ಸುರಕ್ಷತೆಯ ನಡುವೆ ಆಯ್ಕೆ ಮಾಡಬೇಕಾಗಿದೆ – ಇದು ದುರಾದೃಷ್ಟ
