ಬೆಂಗಳೂರು [ಜ.24]:  ನಗರದ ರಾಜಾಜಿನಗರ ಕೈಗಾರಿಕಾ ಬಡಾವಣೆಯಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಅಂದಾಜು 10 ಕೋಟಿ ರು. ಮೌಲ್ಯದ ಖಾಲಿ ನಿವೇಶನವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿದೆ.

ರಾಜಾಜಿನಗರ ಕೈಗಾರಿಕಾ ಬಡಾವಣೆಯ ಸಾಣೆಗುರುವನಹಳ್ಳಿ ಗ್ರಾಮದ ಸರ್ವೆ ನಂ.114ರಲ್ಲಿ ವಿದ್ಯುತ್‌ ಹೈಟೆನ್ಷನ್‌ ತಂತಿಯನ್ನು ತೆರವುಗೊಳಿಸಿದ ಬಳಿಕ ಲಭ್ಯವಿದ್ದ ಎಂಟು ಸಾವಿರ ಚದರ ಅಡಿಗಳ ಖಾಲಿ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರು. 

ಬೆಂಗಳೂರು : 40 ಕೋಟಿ ರು. ಮೌಲ್ಯದ ನಿವೇಶನ ತೆರವು...

ಬಿಡಿಎ ಜಾಗೃತ ದಳದ ಪೊಲೀಸ್‌ ಅಧೀಕ್ಷಕ ಡಾ.ಶಿವಕುಮಾರ್‌ ಮತ್ತು ಸಿಬ್ಬಂದಿ ಹಾಗೂ ಎಂಜಿನಿಯರ್‌ ಶಿವಶಂಕರ್‌ ಮತ್ತು ತಂಡ ಜಂಟಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಿದ್ದಾರೆ. ಈ ನಿವೇಶನದ ಒಟ್ಟು ಮೌಲ್ಯ 10 ಕೋಟಿ ರು. ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸರ್ಕಾರದಿಂದ ಬಡವರಿಗೆ ಮನೆ : ಶೀಘ್ರ ಚಾಲನೆ...