Asianet Suvarna News Asianet Suvarna News

Bengaluru: ಮಹಿಳೆಯರಿಗೆ 100 ವಿಶೇಷ ಶೌಚಾಲಯ ನಿರ್ಮಾಣ: ಹಾಲುಣಿಸಲು, ಬಟ್ಟೆ ಬದಲಿಸಲು ಅವಕಾಶ

ನಗರದಲ್ಲಿ 750 ಶೌಚಾಲಯಗಳ ಕೊರತೆ..!
ನೂತನ ಶೌಚಾಲಯಗಳ ನಿರ್ಮಾಣಕ್ಕೆ ಟೆಂಡರ್ ..!
ನಿರ್ಮಲ ಬೆಂಗಳೂರು ಶೌಚಾಲಯಗಳನ್ನ ನಿರ್ಮಾಣಕ್ಕೆ 45 ಕೋಟಿ..!
ಮಹಿಳೆಯರಿಗಾಗಿ 100 SHE ಟಾಯ್ಲೆಟ್  ಕಟ್ಟಲು ನಿರ್ಧಾರಿಸಿದ ಬಿಬಿಎಂಪಿ..!

Bengaluru Construction of 100 special toilets for women Allow to breastfeed change clothes sat
Author
First Published Jan 19, 2023, 9:00 PM IST

ವರದಿ : ನಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಬೆಂಗಳೂರು (ಜ.19): ಸಿಲಿಕಾನ್‌ ಸಿಟಿ ಬೆಂಗಳೂರಿನ ನಿವಾಸಿಗಳಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿಹಿ ಸುದ್ದಿ ಕೊಡಲು ಮುಂದಾಗಿದೆ.  ಮುಂದಿನ ಎರಡು ತಿಂಗಳಲ್ಲಿ ಕೋಟಿ ರೂ. ಹಣವನ್ನು ವೆಚ್ಚ ಮಾಡಿ ಮಹಿಳೆಯರಿಗೆ ಅನುಕೂಲ ಆಗುವಂತೆ ಮಹಿಳಾ ಶೌಚಾಲಯಗಳನ್ನು  ವೆಚ್ಚ ಮಾಡಲಿದೆ. ನಗರದಾದ್ಯಂತ ಮೂಲಭೂತ ಸೌಕರ್ಯದ ಕೊರತೆ ನೀಗಿಸಲು ಯೋಜನೆ ರೂಪಿಸಿದ್ದು, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದೆ.

ಬೆಂಗಳೂರು ಈಗಾಗಲೆ ಕಾಂಕ್ರಿಟ್ ಕಾಡಾಗಿ ಬೆಳೆದು ನಿಂತಿದೆ. ಹೆಜ್ಜೆ ಹೆಜ್ಜೆಗು ಜನ- ವಾಹನಗಳದ್ದೆ ಕಾರುಬಾರು. ಅಪ್ಪಿ ತಪ್ಪಿ ಮೂತ್ರ ವಿಸರ್ಜನೆ ಮಾಡಬೇಕು ಅಂದ್ರೆ ಕಿಲೋಮೀಟರ್ ಗಟ್ಟಲೇ ಜಾಗ ಹುಡುಕಬೇಕು. ಪುರುಷರು ಹೇಗೋ ಅಲ್ಲಿ ಇಲ್ಲಿ ಖಾಲಿ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡಿಬಿಡ್ತಾರೆ. ಆದ್ರೆ ಮಹಿಳೆಯ ಪಾಡು ಮಾತ್ರ ದೇವರೇ ಬಲ್ಲ. ಯಾಕಂದ್ರೆ ಈಗಾಗಲೇ ನಿರ್ಮಾಣವಾಗಿರುವ ಶೌಚಾಲಯಗಳ ಹೆಸರಿಗಷ್ಟೆ ಅನ್ನುವಂತಿವೆ. ಇದಕ್ಕೆಲ್ಲಾ ಬ್ರೇಕ್ ಹಾಕಲು ಸ್ವಚ್ಚ ಭಾರತ್ ಮಷಿನ್ ಅರ್ಬನ್ ಇನಿಶೀಯೇಟಿವ್ 2.0 ಅಡಿಯಲ್ಲಿ ಬಿಬಿಎಂಪಿ 45 ಕೋಟಿ ವೆಚ್ಚದಲ್ಲಿ 350 ಶೌಚಾಲಯಗಳ ನಿರ್ಮಾಣಕ್ಕೆ ಮುಂದಾಗಿದೆ. ಅದರಲ್ಲಿ ಮಹಿಳೆಯರಿಗಾಗಿ 100 ವಿಶೇಷ ಶೌಚಾಲಯಗಳ ನಿರ್ಮಾಣವಾಗಲಿದ್ದು, ಅದಕ್ಕಾಗಿ ಸ್ಥಳ ನಿಗದಿ ಮಾಡಲಾಗಿದೆ.

ಕಾಮಗಾರಿ ನಡೆಸಿ ಎರಡು ದಿನಕ್ಕೆ ಕುಸಿದ ರಸ್ತೆ: ಬಿಬಿಎಂಪಿ ವಿರುದ್ಧ ಸ್ಥಳೀಯರ ಆಕ್ರೋಶ

 750 ಶೌಚಾಲಯಗಳ ಕೊರತೆ:  ಬಿಬಿಎಂಪಿ ಅಧಿಕಾರಿಗಳು ಮಾಹಿತಿಯ ಪ್ರಕಾರ ನಗರದಲ್ಲಿ ಸದ್ಯ 450 ಸುಲಭ ಶೌಚಾಲಯಗಳು ಇದ್ದು, ಇನ್ನು 750 ಶೌಚಾಲಯಗಳ ಕೊರತೆಯಿದೆ. ಇದನ್ನ ನೀಗಿಸಲು ಬಿಬಿಎಂಪಿ 46 ಲೊಕೆಷನ್ ಗಳಲ್ಲಿ ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಹೈಟೆಕ್ ಮಾದರಿಯ ಶೌಚಾಲಯಗಳು ಸಿದ್ದಗೊಳ್ಳಲಿವೆ. ಅಲ್ಲದೆ ನಗರದ ವಿವಿಧ ಕಡೆ 160 ಅಲ್ಟ್ರಾ ಮಾಡ್ರನ್‌ ಮಾದರಿಯ ಶೌಚಾಲಯಗಳು ನಿರ್ಮಾಣವಾಗಲಿದೆ. ಜೊತೆಗೆ ಮಹಿಳೆಯರಿಗಾಗಿ 100 SHE ಟಾಯ್ಲೆಟ್  ನಿರ್ಮಿಸಿಲು ಯೋಜನೆ ರೂಪಿಸಿದ್ದು, ಇದು ಹಲವು ವಿಶೇಷತೆ ಹೊಂದಿದೆ. 

ತಾಯಿ ಹಾಲುಣಿಸಲೂ ವ್ಯವಸ್ಥೆ: ಬಿಬಿಎಂಪಿ ವತಿಯಿಂದ ಮಹಿಳೆಯರಿಗೆಂದೇ ನಿರ್ಮಿಸಲಾಗುತ್ತಿರುವ ಮಹಿಳಾ ಶೌಚಾಲಯದಲ್ಲಿ ಕೇವಲ ಮೂತ್ರ ವಿಸರ್ಜನೆಗೆ ಅಷ್ಟೇ ಅಲ್ಲಾ, ಮಕ್ಕಳಿಗೆ ಹಾಲುಣಿಸಲು, ಮಹಿಳೆಯರಿಗೆ ಬಟ್ಟೆ ಬದಲಿಸಲು ಕೂಡ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ. ಇದು ನಿಜಕ್ಕೂ ಮಹಿಳೆಯರಿಗೆ ಉಪಯೋಗವಾಗಲಿದೆ ಅಂತಾ ಅಧಿಕಾರಿಗಳು ಹೇಳುತ್ತಿದ್ದಾರೆ.

BBMP Recruitment 2023: ಬರೋಬ್ಬರಿ 3673 ಪೌರ ಕಾರ್ಮಿಕ ಭರ್ತಿಗೆ ಅರ್ಜಿ ಆಹ್ವಾನ

350 ನೂತನ ಶೌಚಾಲಯಗಳು: ಈಗಾಗಲೇ ಈ ಯೋಜನೆಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು ಎರಡು ತಿಂಗಳಲ್ಲಿ ಮುಗಿಯಲಿದೆ. ಟೆಂಡರ್ ಮುಗಿದ 9 ತಿಂಗಳಲ್ಲಿ 350 ನೂತನ ಶೌಚಾಲಯಗಳು ಸಿದ್ದಗೊಳ್ಳಲಿವೆ. ಅದರ ನಿರ್ವಾಹಣೆಯನ್ನು ಕೂಡ ನಿರ್ಮಾಣ ಮಾಡುವ ಏಜೆನ್ಸಿಗೆ ನೀಡಲಾಗುವುದು. ಇದು 2024ರ ಒಳಗೆ ಬೆಂಗಳೂರಿಗರ ಉಪಯೋಗಕ್ಕೆ ಸಿಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ಭರವಸೆ ಭರವಸೆಯಾಗಿಯೇ ಉಳಿಯದೆ ಅದಷ್ಟು ಬೇಗ ಸಾರ್ವಜನಿಕರ ಉಪಯೋಗಕ್ಕೆ ಸಿಗಲಿ ಅನ್ನೊದು ಎಲ್ಲರ ಆಶಯವಾಗಿದೆ.

Follow Us:
Download App:
  • android
  • ios