ಬೆಂಗಳೂರಿನಲ್ಲಿ ಮತ್ತೊಂದು ಆಟೋ ಕಿರಿಕ್; ಸಾಯಿಸಿಬಿಡ್ತೀನಿ ಎಂದ ಚಾಲಕ, ಬೆದರಿದ ಪ್ರಯಾಣಿಕ!

ಬೆಂಗಳೂರಿನಲ್ಲಿ ಆಟೋ ಚಾಲಕ ಮತ್ತು ಪ್ರಯಾಣಿಕರ ನಡುವೆ ಡ್ರಾಪ್ ಲೊಕೇಶನ್ ಮತ್ತು ಹಣದ ವಿಚಾರದಲ್ಲಿ ಜಗಳ ನಡೆದಿದೆ. ಚಾಲಕನು ಪ್ರಯಾಣಿಕರ ಮೇಲೆ ಹಲ್ಲೆಗೆ ಮುಂದಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Bengaluru Auto driver and passenger argument for money sat

ಬೆಂಗಳೂರು (ಜ.09): ಸಿಲಿಕಾನ್ ಸಿಟಿ ಬೆಂಗಳೂರು ಆಗಿಂದಾಗ್ಗೆ ನಗರದ ಆಟೋ ಚಾಲಕರ ನಡವಳಿಕೆಯಿಂದ ದೇಶ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತದೆ. ಕೆಲವೊಮ್ಮೆ ಆಟೋ ಚಾಲಕರು ಕೆಟ್ಟದಾಗಿ ವರ್ತಿಸಿರುವುದು ಕಂಡುಬಂದರೆ, ಇನ್ನು ಕೆಲವು ಬಾರಿ ದೇಶದ ಎಲ್ಲ ಆಟೋ ಚಾಲಕರಿಗೆ ಮಾದರಿ ಎಂಬಂತೆ ನಡೆದುಕೊಂಡಿರುತ್ತಾದೆ. ಆದರೆ, ಬಹುತೇಕ ಪ್ರಕರಣಗಳಲ್ಲಿ ಆಟೋ ಚಾಲಕರು ಕಿರಿಕ್ ಮಾಡಿಕೊಂಡ ಘಟನೆಯ ಹಿನ್ನೆಲೆಯಲ್ಲಿಯೇ ಸುದ್ದಿಯಾಗಿದ್ದಾರೆ.

ಅದೇ ರೀತಿ ಬೆಂಗಳೂರಲ್ಲಿ ಮತ್ತೊಂದು ಆಟೋ  ಕಿರಿಕ್ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಪ್ರಯಾಣಿಕರ ಜೊತೆ ಆಟೋ ಡ್ರೈವರ್ ಕೈ-ಕೈ ಮಿಲಾಯಿಸಲು ಮುಂದಾಗಿದ್ದಾನೆ. ಜೊತೆಗೆ, ನಿನ್ನನ್ನು ಸಾಯಿಸ್ತೀನಿ ಅಂತಾನೂ ಬೆದರಿಕೆ ಮಾತನಾಡಿರುವ ವಿಡಿಯೋ ಸೆರೆಯಾಗಿದೆ. ಇಲ್ಲಿ ಪ್ರಯಾಣಿಕರನ್ನು ಡ್ರಾಪ್ ಮಾಡಿದ ನಂತರ ಡ್ರೈವರ್ ಮತ್ತು ಪ್ರಯಾಣಿಕರ ನಡುವೆ ಜಗಳ ಶುರುವಾಗಿದ್ದು, ಈ ವೇಳೆ ಆಟೋ ಚಾಲಕ ಪ್ರಯಾಣಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಜಗಳ ಪರಸ್ಪರ ಹೊಡೆದಾಡುವ ಹಂತಕ್ಕೆ ಹೋಗಿದ್ದು, ಬೇರೊಬ್ಬ ವ್ಯಕ್ತಿಯ ಮದ್ಯಪ್ರವೇಶದಿಂದ ನಿಂತಿದೆ.

ಅಷ್ಟಕ್ಕೂ ಘಟನೆ ಏನಿದು?
ಡ್ರಾಪ್ ಲೋಕೆಷನ್ ವಿಚಾರದಲ್ಲಿ ಕಿರಿಕ್ ಆರಂಭವಾಗಿದೆ. ಡ್ರಾಪ್ ಪಾಯಿಂಟ್ ಅಪಾರ್ಟ್ಮೆಂಟ್ ಗೇಟ್ ಬಳಿ ಹಾಕಲಾಗಿತ್ತಂತೆ. ಆದರೆ, ಮಾರ್ಗಮಧ್ಯೆ ಪ್ರಯಾಣಿಕರು ಗೇಟ್ ಒಳಗೆ ಬಿಡುವಂತೆ ಕೇಳಿದರಂತೆ. ಅದಕ್ಕೆ ಹೆಚ್ಚುವರಿ ಹಣ ನೀಡುವುದಾಗಿಯೂ ಹೇಳಿದ್ದರಂತೆ. ಆದರೆ, ಡ್ರಾಪ್ ಪಾಯಿಂಟ್ ಗಿಂತ ಒಳಗೆ ಕರೆದುಕೊಂಡು ಬಂದ್ಮೇಲೆ ಹಣ ಕಮ್ಮಿ ಕೊಟ್ಟಿದ್ದಾರೆ ಎಂದು ಚಾಲಕನ ಆರೋಪ ಮಾಡಿದ್ದಾರೆ. ಈ ವಿಚಾರದಲ್ಲಿ ಪ್ರಯಾಣಿಕ ಮತ್ತು ಚಾಲಕನ ನಡುವೆ ಕಿರಿಕ್ ಆರಂಭವಾಗಿದ್ದು, ತಾಳ್ಮೆ ಕಳೆದುಕೊಂಡ ಡ್ರೈವರ್ ಕೆಟ್ಟಪದಗಳಿಂದ ನಿಂದಿಸಿದ್ದಾನೆ. ಹಲ್ಲೆ ಮಾಡುವುದಕ್ಕೂ ಮುಂದಾಗಿದ್ದಾನೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ನಿಖರ ಮಾಹಿತಿ ಇಲ್ಲ.

ಇದನ್ನೂ ಓದಿ: ಬೆಂಗಳೂರು ಆಟೋ ಅವಾಂತರ: ತಪ್ಪಾದ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ಚಲಿಸುವ ಆಟೋದಿಂದ ಜಿಗಿದ ಮಹಿಳೆ!

ಈ ಕುರಿತ ವಿಡಿಯೋವನ್ನು @karnatakaportf ಎಂಬ ಎಕ್ಸ್ ಖಾತೆದಾರರು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಬೆಂಗಳೂರಿನ ಒಂದು ಕುಟುಂಬ ಮತ್ತು ಆಟೋ ಚಾಲಕನ ನಡುವೆ ತೀವ್ರ ವಾಗ್ವಾದ ನಡೆಯಿತು. ಆಟೋ ಚಾಲಕನ ಪ್ರಕಾರ, ಪ್ರಯಾಣಿಕನು ಆರಂಭದಲ್ಲಿ ಡ್ರಾಪ್-ಆಫ್ ಸ್ಥಳವು ಮುಖ್ಯ ದ್ವಾರದವರೆಗೆ ಮಾತ್ರ ಎಂದು ಹೇಳಿದಾಗ ವಿವಾದ ಪ್ರಾರಂಭವಾಯಿತು. ಆದಾಗ್ಯೂ, ಪ್ರಯಾಣದ ಸಮಯದಲ್ಲಿ, ಪ್ರಯಾಣಿಕನು ಚಾಲಕನನ್ನು ಮುಂದೆ ಹೋಗಿ ಬೇರೆ ಸ್ಥಳದಲ್ಲಿ ಡ್ರಾಪ್ ಮಾಡುವಂತೆ ವಿನಂತಿಸಿದನು, ವಿಸ್ತೃತ ಸೇವೆಗೆ ಹೆಚ್ಚುವರಿ ಮೊತ್ತವನ್ನು ಪಾವತಿಸಲು ಮುಂದಾಗಿದ್ದನು.

ಆಟೋ ಚಾಲಕನು ಪ್ರಯಾಣಿಕರ ಕೋರಿಕೆಗೆ ಒಪ್ಪಿಕೊಂಡು ವಿನಂತಿಸಿದ ಸ್ಥಳದಲ್ಲಿ ಅವರನ್ನು ಡ್ರಾಪ್ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ಆದಾಗ್ಯೂ, ಗಮ್ಯಸ್ಥಾನವನ್ನು ತಲುಪಿದ ನಂತರ, ಪ್ರಯಾಣಿಕನು ತಿರಸ್ಕಾರದ ಮನೋಭಾವವನ್ನು ತೋರಿಸಲು ಪ್ರಾರಂಭಿಸಿದನು ಮತ್ತು ಅವರು ಮೊದಲು ಬದ್ಧರಾಗಿದ್ದ ಹೆಚ್ಚುವರಿ ಮೊತ್ತವನ್ನು ಪಾವತಿಸಲು ನಿರಾಕರಿಸಿದನು. ಒಪ್ಪಂದವನ್ನು ಗೌರವಿಸಲು ಈ ನಿರಾಕರಣೆಯು ಆಟೋ ಚಾಲಕನನ್ನು ನಿರಾಶೆ ಮತ್ತು ಕೋಪಕ್ಕೆ ದೂಡಿದೆ, ಇದು ಎರಡೂ ಪಕ್ಷಗಳ ನಡುವೆ ಬಿಸಿಯಾದ ವಾಗ್ವಾದಕ್ಕೆ ಕಾರಣವಾಗಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮಹಿಳೆ ಡಬಲ್ ಆಟೋ ಬುಕಿಂಗ್; ಪ್ರಶ್ನೆ ಮಾಡಿದ ಆಟೋ ಡ್ರೈವರ್‌ಗೆ ಮೇಲೆ ಹಲ್ಲೆ ಯತ್ನ!

Latest Videos
Follow Us:
Download App:
  • android
  • ios