Asianet Suvarna News Asianet Suvarna News

Bengaluru : ಕಾಲೇಜಿನ ಶೌಚಾಲಯದೊಳಗೆ ನುಗ್ಗಿ ವಿದ್ಯಾರ್ಥಿನಿ ಕೈ ಎಳೆದ ಕಾಮುಕ

ಬೆಂಗಳೂರಿನ ಜಯನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಕಾಮುಕನೊಬ್ಬ ವಿದ್ಯಾರ್ಥಿನಿಯರ ಶೌಚಾಲಯದೊಳಗೆ ನುಗ್ಗಿ, ನಂತರ ಶೌಚಗೃಹಕ್ಕೆ ಆಗಮಿಸಿದ ವಿದ್ಯಾರ್ಥಿನಿಯೊಬ್ಬಳನ್ನು ಕೈ ಹಿಡಿದು ಎಳೆದಿರುವ ಘಟನೆ ನಡೆದಿದೆ.

Bengaluru An amorous man entered the college toilet and pulled the hand of the student sat
Author
First Published Jan 11, 2023, 5:52 PM IST

ಬೆಂಗಳೂರು (ಜ.11): ಕಾಲೇಜಿನಲ್ಲಿ ಓದುವ ವಿದ್ಯಾರ್ಥಿನಿಯರೇ ಎಚ್ಚರವಾಗಿರಿ. ನಿಮ್ಮ ಶೌಚಾಲಯಗಳಲ್ಲಿಯೂ ಆತಂಕ ಕಾದಿರುತ್ತದೆ . ಬೆಂಗಳೂರಿನ ಜಯನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಕಾಮುಕನೊಬ್ಬ ವಿದ್ಯಾರ್ಥಿನಿಯರ ಶೌಚಾಲಯದೊಳಗೆ ನುಗ್ಗಿ, ನಂತರ ಶೌಚಗೃಹಕ್ಕೆ ಆಗಮಿಸಿದ ವಿದ್ಯಾರ್ಥಿನಿಯೊಬ್ಬಳನ್ನು ಕೈ ಹಿಡಿದು ಎಳೆದಿರುವ ಘಟನೆ ನಡೆದಿದೆ.

ದೇಶದಲ್ಲಿ ಕಾಮುಕರ ಅಟ್ಟಹಾಸಕ್ಕೆ ಮಿತಿಯೇ ಇಲ್ಲದಂತಾಗಿದೆ. ಮನೆ, ತೋಟ, ಹೊಲ, ಗದ್ದೆ, ರಸ್ತೆಗಳಲ್ಲಿ ಕಾಮುಕರು ಮಹಿಳೆಯರು, ಯುವತಿಯರು ಇತ್ತೀಚೆಗೆ ಮಕ್ಕಳಿಗೂ ಲೈಂಗಿಕ ಕಿರುಕುಳ ನೀಡುವ ಪ್ರಕರಣಗಳು ನಡೆಯುತ್ತಿವೆ. ಆದರೆ, ಬೆಂಗಳೂರಿನಲ್ಲಿ ನಡೆದಿರುವ ಘಟನೆ ಮಾತ್ರ ನಾಚಿಕೆ ಹುಟ್ಟಿಸುವಂತಿದೆ. ಸರಸ್ವತಿಯ ದೇಗುಲ, ವಿದ್ಯಾದೇಗುಲ ಎಂದು ಕರೆಯುವ ಕಾಲೇಜಿನಲ್ಲಿಯೇ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ. ವಿದ್ಯಾರ್ಥಿನಿಯರ ಶೌಚಗೃಹಕ್ಕೆ ಹೋಗಿ ಅಲ್ಲಿ ತನ್ನ ಕಾಮತೃಷೆ ತೀರಿಸಕೊಳ್ಳಲು ವಿದ್ಯಾರ್ಥಿನಿಯೊಬ್ಬಳನ್ನು ಕೈ ಹಿಡಿದು ಎಳೆದಿರುವ ಘಟನೆ ನಡೆದಿದೆ.

ಬಸ್ಸಲ್ಲಿ ಯುವತಿ ಎದುರು ಹಸ್ತಮೈಥುನ ಮಾಡಿಕೊಂಡ ಕಾಮುಕ: ಸಿಕ್ಕಿಬಿದ್ದ ಬಳಿಕ ಅಳುತ್ತಾ ನಾಟಕವಾಡ್ದ..!

ಬೆಳಗ್ಗೆಯೇ ಕಾಲೇಜು ಒಳಹೊಕ್ಕ ಕಾಮುಕ: ನಿನ್ನೆ ಬೆಳಗ್ಗೆ (ಮಂಗಳವಾರ) ಜಯನಗರ ವಿಜಯಾ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಮುನ್ನ ರಕ್ಷಣಾ ಸಿಬ್ಬಂದಿ ಬೆಳಗ್ಗೆ ಕಾಲೇಜಿನ ಗೇಟು ತೆರೆದಿದ್ದಾರೆ. ಗೇಟ್‌ ತೆರೆದ ತಕ್ಷಣವೇ ಬೆಳಗ್ಗೆ 8 ಗಂಟೆಗೆ ಕಾಮುಕ ಕಾಲೇಜಿನ ಒಳಗೆ ಹೋಗಿ ನಾಲ್ಕನೇ ಮಹಡಿಯಲ್ಲಿದ್ದ ವಿದ್ಯಾರ್ಥಿನಿಯರ ಶೌಚಾಲಯದೊಳಗೆ ಅವಿತು ಕುಳಿತುಕೊಂಡಿದ್ದಾನೆ. ನಂತರ ವಿದ್ಯಾರ್ಥಿನಿಯೊಬ್ಬಳು ಟಾಯ್ಲೆಟ್‌ಗೆಂದು ಬಂದ ನಂತರ ಡೋರ್‌ ಲಾಕ್‌ ಮಾಡಿದ್ದಾನೆ. ಆಮೇಲೆ ವಿದ್ಯಾರ್ಥಿನಿಯ ಕೈ ಹಿಡಿದು ಎಳೆದಿದ್ದಾನೆ. ಈ ವೇಳೆ ಜೋರಾಗಿ ಕಿರುಚಲು ಮುಂದಾದ ವಿದ್ಯಾರ್ಥಿನಿಯ ಬಾಯಿ ಮುಚ್ಚಿ ಎಳೆದುಕೊಂಡಿದ್ದಾನೆ. ಕಾಮುಕನಿಂದ ಬಿಡಿಸಿಕೊಂಡು ಹೊರಗೆ ಓಡಿ ಬಂದಿದ್ದಾಳೆ.

ವಿದ್ಯಾರ್ಥಿನಿಯರು ಕೂಗುತ್ತಿದ್ದಂತೆ ಓಡಿ ಹೋದ ಕಾಮುಕ: ಇನ್ನು ಶೌಚಾಲಯದಿಂದ ಹೊರಗೆ ಬಂದು ವಿದ್ಯಾರ್ಥಿನಿ ಕಿರುಚುವುದನ್ನು ನೋಡಿದ ಇತರೆ ಕ್ಯಾಂಪಸ್‌ ಆವರಣದಲ್ಲಿದ್ದ ಇತರೆ ವಿದ್ಯಾರ್ಥಿನಿಯರು ಕೂಡ ಜೋರಾಗಿ ಕೂಗಿದ್ದಾರೆ. ಈ ವೇಳೆ ತನಗೆ ಧರ್ಮದೇಟು ಬೀಳುವುದು ಖಚಿತವೆಂದು ಅರಿತ ಕಾಮುಕ ಅಲ್ಲಿಂದ ಓಡಲು ಮುಂದಾಗಿದ್ದಾನೆ. ನಾಲ್ಕನೇ ಮಹಡಿಯಿಂದ ಓಡುವಾಗ ಹಿಡಿಯಲು ಅಡ್ಡ ಬಂದಿರುವ ವಿದ್ಯಾರ್ಥಿನಿಯೊಬ್ಬಳನ್ನು ಕೂಡ ದುಷ್ಕರ್ಮಿ ತಳ್ಳಿ ಹೋಗಿದ್ದಾನೆ. ತಳ್ಳಿದ ರಭಸಕ್ಕೆ ವಿದ್ಯಾರ್ಥಿನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆದರೆ, ಕಾಮುಕನನ್ನು ಹಿಡಿದುಕೊಳ್ಳಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Dharwad: ಕಾಮುಕನನ್ನು ಹಿಡಿದು ಚಪ್ಪಲಿ ಏಟು ಕೊಟ್ಟ ಮಹಿಳೆಯರು: ಸಿಕ್ಕ ಸಿಕ್ಕವರನ್ನ ರೇಟ್‌ ಕೇಳುತ್ತಿದ್ದನಂತೆ..!

ಕಾಲೇಜಿನಲ್ಲಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿನಿಯರು:  ಬೆಳಗ್ಗೆ ಬೇಗನೆ ಬರುವ ವಿದ್ಯಾರ್ಥಿನಿಯರು ವಿವಿಧ ತರಗತಿಗಳು ನಡೆಯುವ ಹಿನ್ನೆಲೆಯಲ್ಲಿ ಸಂಜೆವರೆಗೂ ಇಲ್ಲಿರುತ್ತಾರೆ. ಆದರೆ, ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಭದ್ರತೆಯಿಲ್ಲ ಎಂದು ಎಲ್ಲ ತರಗತಿಯ ವಿದ್ಯಾರ್ಥಿನಿಯರು ಸೇರಿಕೊಂಡು ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ನಂತರ, ಹೆಚ್ಚಿನ ಭದ್ರತೆಯನ್ನು ಒದಗಿಸುವ ಕುರಿತು ಆಡಳಿತ ಮಂಡಳಿಯವರು ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಟ್ಟಿದ್ದಾರೆ.

ಜಯನಗರ ಠಾಣೆಯಲ್ಲಿ ದೂರು: ಸದ್ಯ ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದೆ. ಐಪಿಸಿ ಸೆಕ್ಷನ್ 354 ಅಡಿ ಪ್ರಕರಣ ದಾಖಲಿಸಿಕೊಂಡ ಜಯನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಕಾಲೇಜಿನ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಸಿಟಿವಿಯಲ್ಲಿ ವ್ಯಕ್ತಿಯ ಚಹರೆ ಪತ್ತೆಯಾಗಿದ್ದು, ಟಾಯ್ಲೆಟ್‌ ಕ್ಲೀನ್‌ ಮಾಡುವವನಿಂದಲೇ ಕೃತ್ಯ ನಡೆದಿರಬಹುದೇ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios