Asianet Suvarna News Asianet Suvarna News

ಬಸ್ಸಲ್ಲಿ ಯುವತಿ ಎದುರು ಹಸ್ತಮೈಥುನ ಮಾಡಿಕೊಂಡ ಕಾಮುಕ: ಸಿಕ್ಕಿಬಿದ್ದ ಬಳಿಕ ಅಳುತ್ತಾ ನಾಟಕವಾಡ್ದ..!

ವೈರಲ್ ವಿಡಿಯೋ ಪ್ರಕಾರ, ಆರೋಪಿ ಮಂಗಳವಾರ ಡಿಟಿಸಿ ಬಸ್‌ನಲ್ಲಿ ಹಸ್ತಮೈಥುನ ಮಾಡಿಕೊಂಡಿದ್ದು, ಯುವತಿ ಈ ಬಗ್ಗೆ ಇತರರಿಗೆ ಹೇಳಿಕೊಂಡಾಗ ಬಸ್‌ನಲ್ಲಿದ್ದ ಮಾರ್ಷಲ್ ಸಂದೀಪ್ ಚಕಾರ ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

man allegedly masturbates in front of girl on delhi bus cries when caught ash
Author
First Published Jan 5, 2023, 5:01 PM IST

ರಾಷ್ಟ್ರ ರಾಜಧಾನಿ (National Capital) ದೆಹಲಿಯಲ್ಲಿ (Delhi) ಹೊಸ ವರ್ಷದ (New Year) ಸಂಭ್ರಮದಲ್ಲಿದ್ದ ಜನತೆಗೆ ಮೊದಲ ದಿನವೇ ಆಘಾತ ಕಾದಿತ್ತು. ಇದಕ್ಕೆ ಕಾರಣ ಬೆತ್ತಲೆ ಸ್ಥಿತಿಯಲ್ಲಿ ಯುವತಿಯ ಶವ (Women Dead Body) ಪತ್ತೆಯಾಗಿತ್ತು. ಸ್ಕೂಟಿ ಚಲಾಯಿಸುತ್ತಿದ್ದ ಯುವತಿಯನ್ನು ಗುದ್ದಿ (Accident), ಆಕೆಯ ಕಾಲು ಕಾರಿಗೆ (Car) ಸಿಲುಕಿದ ಕಾರಣ ಯುವತಿಯನ್ನು ಹಲವು ಕಿಲೋಮೀಟರ್‌ಗಳವರೆಗೆ ಎಳೆದೊಯ್ಯಲಾಗಿದೆ. ಅಲ್ಲದೆ, ಈ ವೇಳೆ ಆಕೆಯ ಬಟ್ಟೆಯೆಲ್ಲ ಕಳಚಿ ಹೋಗಿದೆ ಎಂದು ದೆಹಲಿ ಪೊಲೀಸರು (Delhi Police) ಹೇಳಿದ್ದಾರೆ. ಈ ಘಟನೆಯ ಬಳಿಕ ದೆಹಲಿ ಪೊಲೀಸರ ವಿರುದ್ಧ, ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ರಾಷ್ಟ್ರ ರಾಜಧಾನಿಯ ಕಾನೂನು ಸುವ್ಯವಸ್ಥೆ ಬಗ್ಗೆಯೂ ತೀವ್ರ ಚರ್ಚೆಯಾಗುತ್ತಿದೆ. 

ಈ ಘಟನೆ ಮರೆಯುವ ಮುನ್ನವೇ ದೆಹಲಿಯ ಸಾರ್ವಜನಿಕ ಬಸ್‌ನಲ್ಲಿ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣವ್ನೇ ಜನರು ಇನ್ನೂ ಮರೆತಿಲ್ಲ. ಈ ನಡುವೆ ರಾಷ್ಟ್ರ ರಾಜಧಾನಿಯ ರೋಹಿಣಿ ಪ್ರದೇಶದಲ್ಲಿ ಬಸ್‌ನಲ್ಲಿ ವ್ಯಕ್ತಿಯೊಬ್ಬ ಯುವತಿ ಎದುರು ತನ್ನ ಖಾಸಗಿ ಅಂಗವನ್ನು ತೋರಿಸಿ ಹಸ್ತಮೈಥುನ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ದೆಹಲಿ ಸಾರಿಗೆ ಸೇವೆ (DTC) ಮಾರ್ಷಲ್‌ ಈ ಬಗ್ಗೆ ಆರೋಪಿಸಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ ಇನ್ನೂ ಈ ಬಗ್ಗೆ ದೂರು ದಾಖಲಾಗದ ಕಾರಣ ಆರೋಪಿಯನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಯುವತಿಯ ಕಾರು ಎಳೆದೊಯ್ದ ಪ್ರಕರಣ: ಅಪಘಾತದ ತೀವ್ರತೆಗೆ ಮೆದುಳು, ಶ್ವಾಸಕೋಶ ಹೊರಕ್ಕೆ
 
ವೈರಲ್ ವಿಡಿಯೋ ಪ್ರಕಾರ, ಆರೋಪಿ ಮಂಗಳವಾರ ಡಿಟಿಸಿ ಬಸ್‌ನಲ್ಲಿ ಹಸ್ತಮೈಥುನ ಮಾಡಿಕೊಂಡಿದ್ದು, ಯುವತಿ ಈ ಬಗ್ಗೆ ಇತರರಿಗೆ ಹೇಳಿಕೊಂಡಾಗ ಬಸ್‌ನಲ್ಲಿದ್ದ ಮಾರ್ಷಲ್ ಸಂದೀಪ್ ಚಕಾರ ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನು, ಈ ಘಟನೆಯಲ್ಲಿ ಸಿಕ್ಕಿಬಿದ್ದ ನಂತರ ಆರೋಪಿ ಅಳುತ್ತಿರುವ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಆರೋಪಿ ಬಿಹಾರದ ನಿವಾಸಿಯಾಗಿದ್ದು, ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಆದರೆ ಇನ್ನೂ ಯಾವುದೇ ದೂರು ದಾಖಲಾಗದ ಕಾರಣ ಆತನನ್ನು ಬಂಧಿಸಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಧವಾರ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಉತ್ತರ ರೋಹಿಣಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಸುಮನ್ ನೇತೃತ್ವದಲ್ಲಿ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದೂ ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Yashwanthpur Railway Station: ಡ್ರಮ್‌ನಲ್ಲಿ ಯುವತಿ ಶವ ಪತ್ತೆ: ಬೆಚ್ಚಿಬಿದ್ದ ಪ್ರಯಾಣಿಕರು

ಈ ಮಧ್ಯೆ, ಈ ಘಟನೆ ಬಗ್ಗೆ ದೂರು ನೀಡಲು ಅಥವಾ ಹೇಳಿಕೆ ದಾಖಲಿಸಲು ಪೊಲೀಸರು ಸಂತ್ರಸ್ಥೆ ಮಹಿಳೆಯನ್ನು ಸಂಪರ್ಕಿಸಿದ್ದು, ಆದರೆ ಆಕೆ ದೂರು ನೀಡಲು ನಿರಾಕರಿಸಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಈ ಹಿನ್ನೆಲೆ ಈ ಘಟನೆ ಬಗ್ಗೆ ಭವಿಷ್ಯದಲ್ಲಿ ಯಾವುದಾದರೂ ದೂರು ದಾಖಲಾದ ಬಳಿಕ ಕಾನೂನಿನ ಸರಿಯಾದ ಸೆಕ್ಷನ್‌ಗಳ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆ 2023 ಕಾಲಿಟ್ಟ ಕೆಲವೇ ದಿನಗಳಾಗಿದ್ದರೂ ಈ ರೀತಿಯ ಘಟನೆಗಳು ದೆಹಲಿಯಲ್ಲಿ ಈಗಾಗಲೇ ವರದಿಯಾಗುತ್ತಿರುವುದು ಅಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಏಳುತ್ತವೆ. 

ಇದನ್ನೂ ಓದಿ: Bengaluru Crime: ಸೋದರ ಮಾವನಿಂದಲೇ ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿನಿ ಕೊಲೆ

Follow Us:
Download App:
  • android
  • ios