Asianet Suvarna News Asianet Suvarna News

ಏರೋ ಇಂಡಿಯಾ; ಕೆಲ ವಿಮಾನ ಬಂದ್, ಪ್ರಯಾಣಿಕರಿಗೆ ಮಹತ್ವದ ಮಾಹಿತಿ

ಬೆಂಗಳೂರಿನಲ್ಲಿ ಏರ್ ಶೋ/ ಒಂದು ವಾರಗಳ ಕಾಲ ಬಹುತೇಕ ವಿಮಾನ ಹಾರಾಟ ಸ್ಥಗಿತ/ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ/ ಏರ್ ಷೊ ಸಮಯದಲ್ಲಿ ದೇಶಿ, ಅಂತಾರಾಷ್ಟ್ರಿಯ ವಿಮಾನಗಳ ಹಾರಾಟ ಬಹುತೇಕ ಸ್ಥಗಿತ/ ಫೆ.3ರಿಂದ 5ರವರೆಗೆ ನಡೆಯುವ ಏರ್ ಶೋ

Bengaluru airport to partially close due to Aero India 2021 mah
Author
Bengaluru, First Published Jan 27, 2021, 8:39 PM IST

ಬೆಂಗಳೂರು (ಜ.  27) ಬೆಂಗಳೂರಿನಲ್ಲಿ ಏರ್ ಶೋ ಆಯೋಜನೆ ಮಾಡಿರುವುದರಿಂದ  ಒಂದು ವಾರಗಳ ಕಾಲ ಬಹುತೇಕ ವಿಮಾನ ಹಾರಾಟ ಸ್ಥಗಿತವಾಗಲಿದೆ. ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಲಿದೆ.

ಏರ್ ಷೊ ಸಮಯದಲ್ಲಿ ದೇಶಿ, ಅಂತಾರಾಷ್ಟ್ರಿಯ ವಿಮಾನಗಳ ಹಾರಾಟ ಬಹುತೇಕ ಸ್ಥಗಿತವಾಗಲಿದೆ ಯಲಹಂಕ ವಾಯುನೆಲೆಯಲ್ಲಿ ನಡೆಯುವ ಏರ್ ಶೋ ನಡೆಯಲಿದ. ಫೆ.3ರಿಂದ 5ರವರೆಗೆ ಏರ್ ಶೋ ನಡೆಯಲಿದೆ. ಇದರ ಹಿನ್ನೆಲೆ ಜ‌.30ರಿಂದಲೇ ವಿಮಾನ ಹಾರಾಟದ ಸಮಯ ಬದಲಾವಣೆ ಮಾಡಿಕೊಳ್ಳಲಾಗುತ್ತದೆ. ಜ.30, 31ರಂದು ಮಧ್ಯಾಹ್ನ 1.30ರಿಂದ 4.30ರವರೆಗೆ ವಿಮಾನ ಹಾರಾಟ ಇರುವುದಿಲ್ಲ.

ಅತಿದೂರದ ರೂಟ್ ಕವರ್ ಮಾಡಿದ ಮಹಿಳಾ ಫೈಲಟ್ ಗಳು

ಈ ಸಂದರ್ಭದಲ್ಲಿ ಏರ್ ಶೋ ವಿಮಾನಗಳ ತಾಲೀಮು ನಡೆಯಲಿದೆ. ಫೆ.1, 4 ಮತ್ತು 5ರಂದು ಬೆಳಗ್ಗೆ 10ರಿಂದ 12ರವರೆಗೆ ಹಾಗೂ ಮಧ್ಯಾಹ್ನ 2ರಿಂದ 5ರವರೆಗೆ ವಿಮಾನ ಹಾರಾಟ ಇರುವುದಿಲ್ಲ. ಫೆ.2, 3ರಂದು ಬೆಳಗ್ಗೆ 9ರಿಂದ 12ರವರೆಗೆ ಹಾಗೂ ಮಧ್ಯಾಹ್ನ 2ರಿಂದ 5ರವರೆಗೆ ವಿಮಾನ ಹಾರಾಟಕ್ಕೆ ಅವಕಾಶ ಇಲ್ಲ ಎಂದು  ಬೆಂಗಳೂರು ಏರ್ ಪೋರ್ಟ್ ಅಧಿಕಾರಿಗಳ ಮೂಲ ಮಾಹಿತಿ ನೀಡಿದೆ. 

 

Follow Us:
Download App:
  • android
  • ios