ಮುಂಗಾರು ಬಿತ್ತನೆ ಆರಂಭವಾಗಿದ್ದರೂ ಮುಗಿಯದ ಕೋವಿಡ್ ಭೀತಿ  ನಗರ ಭಾಗಗಳಿಗೆ ತೆರಳಿ ಬಿತ್ತನೆ ಬೀಜ ಖರೀದಿ ಮಾಡಲು ಹಿಂಜರಿಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಮನೆ ಬಾಗಿಲಿಗೆ ಬಿತ್ತನೆ ಬೀಜ 

ಬೆಂಗಳೂರು (ಜು.06): ಮುಂಗಾರು ಬಿತ್ತನೆ ಆರಂಭವಾಗಿದ್ದರೂ ಕೋವಿಡ್ ಭೀತಿ ಹಿನ್ನೆಲೆಯಲ್ಲಿ ನಗರ ಭಾಗಗಳಿಗೆ ತೆರಳಿ ಬಿತ್ತನೆ ಬೀಜ ಖರೀದಿ ಮಾಡಲು ಹಿಂಜರಿಯುತ್ತಿರುವ ರೈತ ಗುಂಪುಗಳಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮನೆ ಬಾಗಿಲಿಗೆ ಬಿತ್ತನೆ ಬೀಜ ತಲುಪಿಸುವ ಕಾರ್ಯಕ್ಕೆ ಮುಂದಾಗಿದೆ. 

ಮಂಡ್ಯ ಮತ್ತು ಬೆಂಗಳೂರು ಕೇಂದ್ರದಲ್ಲಿ ಬಿತ್ತನೆ ಬೀಜಗಳಿಗೆ ಹೆಚ್ಚು ಬೇಡಿಕೆಯಿದೆ. ದೂರದ ಊರುಗಳಿಂದ ರೈತರು ಬಿತ್ತನೆ ಬೀಜ ಖರೀದಿಗೆ ಈ ಭಾಗಗಳಿಗೆ ಬರಬೇಕಾಗುತ್ತದೆ. ಆದರೆ ರೈತರು ನಗರ ಭಾಗಗಳಿಗೆ ಹೆಚ್ಚು ಭೇಟಿ ನಿಡುವುದನ್ನು ತಡೆಯಬೇಕಾಗಿದೆ.

ಬೆಳೆಸಾಲಕ್ಕೆ ರೈತರ ಸೆಲ್ಫಿ, ವಂಶಾವಳಿ ಕಡ್ಡಾಯ..! .

ಹೀಗಾಗಿ ಗ್ರಾಮದ ಹತ್ತಾರು ರೈತರು ಒಟ್ಟುಗೂಡಿ ತಮಗೆ ಯಾವ ಬಿತ್ತನೆ ಬೀಜ ಬೇಕು ಎಂಬ ಪಟ್ಟಿ ಮಾಡಿಕೊಂಡು ಬೆಂಗಳೂರು ಕೃಷಿ ವಿವಿಗೆ ತಿಳಿಸಬೇಕು. 

ಬಳಿಕ ಯಾವುದೇ ಸಾರಿಗೆ ವೆಚ್ಚವಿಲ್ಲದೆ ಅವರ ಮನೆ ಬಾಗಿಲಿಗೆ ಬಿತ್ತನೆ ಬೀಜ ಕಳುಹಿಸಲಾಗುತ್ತದೆ. ರೈತರು ಬೀಜಕ್ಕೆ ಮಾತ್ರ ಹಣ ಕೊಡಬೇಕು ಎಂದು ವಿವಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಕೋವಿಡ್‌ನಿಂದ ಮೃತರಾದ ರೈತರ ಸಾಲ ಮನ್ನಾ : ಚಿಂತನೆಗೆ ಸ್ವಾಗತ

ಬೀಜ ಖರೀದಿ ಮಾಡುವವರು ಒಂದೇ ಗ್ರಾಮದವಲ್ಲದಿದ್ದರೂ ಹತ್ತಿರದ ಗ್ರಾಮಗಳ ರೈತರನ್ನು ಸೇರಿಸಿಕೊಂಡು ಪ್ರಸ್ತಾವ ಸಲ್ಲಿಸಬಹುದು. 

ಈ ಮಾಹಿತಿ ತಲುಪಿಸಿದ ಸಮಯದಲ್ಲಿಯೇ ಆನ್‌ಲೈನ್ ಮೂಲಕ ಹಣ ಪಾವತಿಸಬೇಕು. ಆಯಾ ಬೆಳೆಗಳ ಹೆಸರು ತಳಿ, ಬೀಜದ ಪ್ರಮಾಣ ತಲುಪಿಸಬೇಕಾದ ಸ್ಥಳದ ಮಾಹಿತಿ ನೀಡಬೇಕಾಗುತ್ತದೆ. 

ಪ್ರಸ್ತಾವ ಸಲ್ಲಿಸಿದ ಮೂರ್ನಾಲ್ಕು ದಿನಗಳಲ್ಲಿ ಮನೆ ಬಾಗಿಲಿಗೆ ಉತ್ತಮ ಗುಣಮಟ್ಟದ ಬೀಜ ಪೂರೈಸಲಾಗುತ್ತದೆ. ಕನಿಷ್ಠ ಒಂದು ಟನ್ಗೆ ಬೇಡಿಕೆ ಬಂದರೆ ನಾವು ರೈತರ ಮನೆ ಬಾಗಿಲಿಗೆ ಬೀಜ ಕಳುಹಿಸುತ್ತೇವೆ ಎಂದು ಜಿಕೆವಿಕೆಯ ರಾಷ್ಟ್ರೀಯ ಬೀಜ ಪ್ರಾಯೋಜನ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.