ಬೆಂಗಳೂರಿನಲ್ಲಿ ಬೀದಿನಾಯಿಗಳ ದಾಳಿ ಮುಂದುವರೆದಿದ್ದು, ಜಾಲಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ವೇಳೆ 76 ವರ್ಷದ ವೃದ್ಧೆಯೊಬ್ಬರು ಬೀದಿನಾಯಿಗಳ ದಾಳಿಗೆ ಬಲಿಯಾಗಿದ್ದಾರೆ.


ಬೆಂಗಳೂರು (ಆ.28): ರಾಜಧಾನಿಯಲ್ಲಿ ಬೀದಿನಾಯಿಗಳ ಅಟ್ಟಹಾಸ ಮುಂದುವರಿದಿದೆ. ಇದಕ್ಕೆ ಕಡಿವಾಣ ಹಾಕಬೇಕಿದ್ದ ಬಿಬಿಎಂಪಿ ಮಾತ್ರ ಏನೂ ಆಗಿಲ್ಲ ಎನ್ನುವಂತೆ ಸುಮ್ಮನೆ ಕುಳಿತಿದೆ. ಬುಧವಾರ ಜಾಲಹಳ್ಳಿ ಏರ್‌ಫೋರ್ಸ್‌ ಕ್ಯಾಂಪಸ್‌ನಲ್ಲಿ 76 ವರ್ಷದ ವೃದ್ಧ ಮಹಿಳೆ ಹಾಗೂ ನಿವೃತ್ತ ಶಿಕ್ಷಕಿ ಬೆಳಗಿನ ವಾಕಿಂಗ್‌ ಮಾಡುತ್ತಿದ್ದ ವೇಳೆ 10 ಬೀದಿನಾಯಿಗಳು ಏಕಾಏಕಿ ದಾಳಿ ಮಾಡಿವೆ. ದಾಳಿ ಮಾಡಿದ ಹೊಡೆತಕ್ಕೆ ಮಹಿಳೆ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಬಿಹಾರ ಮೂಲದ ನಿವೃತ್ತ ಶಿಕ್ಷಕಿ ರಾಜ್‌ ದುಲ್ಹಾರಿ ಸಿನ್ಹಾ ಮೃತಪಟ್ಟ ಮಹಿಳೆ. ಜಾಲಹಳ್ಳಿಯ ಏರ್ ಫೋರ್ಸ್ ಈಸ್ಟ್ 7 ನೇ ರೆಸಿಡೆನ್ಶಿಯಲ್ ಕ್ಯಾಂಪ್‌ನಲ್ಲಿರುವ ಆಟದ ಮೈದಾನದಲ್ಲಿ ಬೆಳಿಗ್ಗೆ 6.30 ರ ಸುಮಾರಿಗೆ ವಾಕಿಂಗ್ ಮಾಡುತ್ತಿದ್ದಾಗ ಘಟನೆ ನಡೆದಿದೆ. ವೃದ್ಧ ಮಹಿಳೆ ಮೇಲೆ 10-12 ನಾಯಿಗಳು ಭೀಕರ ದಾಳಿ ನಡೆಸಿವೆ ಎಂದು ವರದಿಯಾಗಿದೆ.

ಮಹಿಳೆಯ ಅಳಿಯ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇವರನ್ನು ಭೇಟಿ ಮಾಡುವ ಸಲುವಾಗಿಯೇ ಬಿಹಾರದಿಂದ ಬೆಂಗಳೂರಿಗೆ ಬಂದಿದ್ದರು. ಆಕೆಯನ್ನು ಉಳಿಸಿಕೊಳ್ಳಿವ ನಿಟ್ಟಿನಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಮುಂದಾದರಾದರೂ, ಅವರು ಅದಾಗಲೇ ಸಾವು ಕಂಡಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತಂತೆ ಗಂಗಮ್ಮ ಗುಡಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.

ಒಂದು ರೈಲು ನಿರ್ಮಾಣಕ್ಕೆ ಆಗುವ ವೆಚ್ಚ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ!

ಈ ಕುರಿತಾಗಿ ವ್ಯಕ್ತಿಯೊಬ್ಬರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಮಹಿಳೆಯ ಮೇಲೆ 10 ಬೀದಿನಾಯಿಗಳು ದಾಳಿ ಮಾಡ್ತಿದ್ದವು. ಆದರೆ, ದೊಡ್ಡ ತಡೆಗೋಡೆ ಅಲ್ಲಿದ್ದ ಕಾರಣಕ್ಕೆ ಸಹಾಯಕ್ಕೆ ಹೋಗಲು ಸಾಧ್ಯವಾಗಿಲಿಲ್ಲ. ಆಕೆಗೆ ಸಹಾಯ ಮಾಡುವಂತೆ ಅಲ್ಲಿ ನಾನು ಕಿರುಚಾಡಿದೆ. ಆದರೆ, ನನ್ನದು ಮಾತ್ರ ಅಸಹಾಯಕ ಪರಿಸ್ಥಿತಿಯಾಗಿತ್ತು. ಬಳಿಕ ಕೆಲವರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಡು ಹೋದಲು ಪ್ರಯೋಜನವಾಗಲಿಲ್ಲ ಎಂದು ತಿಳಿದು ಬೇಸರವಾಗಿತು. ತಪ್ಪಿತಸ್ಥ ಭಾವನೆ ನನಗೆ ಈಗಲೂ ಕಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

ರೀಲ್ಸ್‌ ಸಲುವಾಗಿ ಗೋಣಿಚೀಲದಲ್ಲಿ ಪ್ರಾಣಿಯನ್ನು ಹಾಕಿ ತಿರುಗಿಸಿದ ವ್ಯಕ್ತಿ, ವೈರಲ್‌ ವಿಡಿಯೋ ಬಳಿಕ ಪೊಲೀಸ್‌ ತನಿಖೆ ಶುರು!

Scroll to load tweet…