ಶಿವಮೊಗ್ಗ [ಮಾ.14]: ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸ್ವಾಗತಾರ್ಹ. ಇದರಿಂದ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಬದಲಾವಣೆ ಖಚಿತ ಎಂದು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. 

ಶಿವಮೊಗ್ಗದಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಯಾವ ರೀತಿ ಬದಲಾವಣೆ ಎಂದು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇನೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು. 

ಮುಖ್ಯಮಂತ್ರಿ ತವರಾದ ಶಿಕಾರಿಪುರದಲ್ಲಿ ದಿನದ 24 ಗಂಟೆಯೂ ವಿದ್ಯುತ್ ಸರಬರಾಜು ಇರುತ್ತದೆ. ಆದರೆ ಸಾಗರ ಸೇರಿದಂತೆ ಬೇರೆ ತಾಲೂಕುಗಳಲ್ಲಿ ವಿದ್ಯುತ್ ಖಡಿತ ಮಾಡ್ತಾರೆ ಎಂದರು. 

ಜಿಲ್ಲೆಯವರು ಸಿಎಂ ಆದರೆ ಜಿಲ್ಲೆ ಒಡೆಯಲು ಮುಂದಾಗುತ್ತಾರೆ. ಸಾಗರದ ಕೆಲ ಸರ್ಕಾರಿ ಕಚೇರಿಗಳು ಶಿಕಾರಿಪುರಕ್ಕೆ ಶಿಫ್ಟ್ ಆಗಿದೆ. ಹಲವು ರೀತಿಯ ಸಮಸ್ಯೆ ತಂದೊಡ್ಡುತ್ತಿದ್ದಾರೆ. ಕಲ್ಲೊಡ್ಡು ಯೋಜನೆ ತಂದು ಮತ್ತೆ ಮುಳುಗಡೆ ಮಾಡಲು ಮುಂದಾಗಿದ್ದಾರೆ. ಆದರೆ ಯಡಿಯೂರಪ್ಪನವರು ಈ ಯೋಜನೆ ಕೈ ಬಿಡಬೇಕು ಎಂದರು. 

ಎಸ್.ಎಂ. ಕೃಷ್ಣ ರೀತಿಯಲ್ಲಿ ಡಿ.ಕೆ.ಶಿವಕುಮಾರ್ ಮಾಸ್ಟರ್ ಪ್ಲಾನ್ : ಮುಂದಿನ ಯೋಜನೆಗಳೇನು..?...

ಇನ್ನು ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹೆಚ್ಚಾಗಿದೆ. ತಡೆಯುವ ಪ್ರಯತ್ನ ಮಾಡಲಿ. ಮಂಗನ ಕಾಯಿಲೆ ತಡೆಯಲು ಹೆಚ್ಚಿನ ಆರೋಗ್ಯ ಸೌಲಭ್ಯ ಕೈಗೊಳ್ಳಲಿ ಎಂದು ಬೇಳೂರು ಗೋಪಾಕೃಷ್ಣ ಹೇಳಿದರು. ಸಂಸದ ಬಿ ವೈ ರಾಘವೇಂದ್ರ ಮಂಕಿ ಪಾರ್ಕ್ ಮಾಡಿ ಪುಣ್ಯ ಕಟ್ಟಿಕೊಳ್ಳಲಿ. ಮಂಕಿ ಪಾರ್ಕ್ ಮಾಡಿದರೆ ಅದರಲ್ಲಿ ನಮ್ಮ ಶಾಸಕರನ್ನು ಹಾಕಿ. ಭ್ರಷ್ಟಾಚಾರದ ಪಿತಾಮಹ ಹಾಲಪ್ಪ ಎಂದು ವಾಗ್ದಾಳಿ ನಡೆಸಿದರು.