Asianet Suvarna News Asianet Suvarna News

Hassan: ಡಿಗ್ರಿ ಮಾಡೋಕಂತಾ ಕಾಲೇಜಿಗೆ ಕಳಿಸಿದ್ರೆ, ಲವ್‌ ಮಾಡಿದ ಹುಡುಗ ಸಿಗಲಿಲ್ಲಾಂತ ಪ್ರಾಣ ಬಿಟ್ಲು!

ಹಾಸನದಲ್ಲಿ ಡಿಗ್ರಿ ಮಾಡುವುದಕ್ಕೆಂದು ಕಾಲೇಜಿಗೆ ಕಳಿಸಿದರೆ, ಲವ್‌ ಮಾಡಿದ ಹುಡುಗ ಸಿಗಲಿಲ್ಲವೆಂದು ಬಿಕಾಂ ವಿದ್ಯಾರ್ಥಿನಿ ಕಾಲೇಜು ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

Belur degree college BCom student committed self death because love failure sat
Author
First Published Oct 14, 2023, 1:37 PM IST

ಹಾಸನ (ಅ.14): ಹಾಸನದಲ್ಲಿ ಕಾಲೇಜು ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಪ್ರೀತಿಯ ಬಲೆಗೆ ಬಿದ್ದು, ತನ್ನ ಪ್ರಿಯತಮನೊಂದಿಗೆ ಬೈಕ್‌ನಲ್ಲಿ ಊರೂರು ಸುತ್ತಾಡಿದ್ದಾಳೆ. ಆದರೆ, ಈಗ ತನ್ನನ್ನು ಪ್ರೀತಿಸಿದ ಹುಡುಗ ಬೇರೊಬ್ಬಳೊಂದಿಗೆ ಸುತ್ತಾಡುವುದನ್ನು ಸಹಿಸಲಾಗದೇ ಬಿಕಾಂ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಾಲೇಜುಗಳಲ್ಲಿ ಪ್ರೀತಿ, ಪ್ರೇಮ ಎನ್ನುವುದು ಸಹಜವಾದುದ್ದಾಗಿದೆ. ಆದರೆ, ಜೀವನದಲ್ಲಿ ಗುರಿ ತಲುಪುವವರೆಗೂ ಪ್ರೀತಿ ಒಂದು ಭಾಗವಾಗಿರಬೇಕೇ ವಿನಃ ಅದೇ ಜೀವನವಾಗಿರಬಾರದು. ಇನ್ನು ಕಾಲೇಜುಗಳಲ್ಲಿ ಪ್ರೀತಿ- ಪ್ರೇಮದ ಪಾಶಕ್ಕೆ ಸಿಲುಕಿ ಹಲವರು ತಮ್ಮ ಜೀವನವನ್ನೂ ಹಾಳು ಮಾಡಿಕೊಂಡಿದ್ದಾರೆ. ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಬೆಳ್ಳೊಟ್ಟೆ ಗ್ರಾಮದಲ್ಲಿ ಘಟನೆಯೊಂದು ನಡೆದಿದೆ. ಪ್ರಿಯಕರನಿಂದ ವಂಚನೆ ಹಾಗೂ ಕೊಲೆ ಬೆದರಿಕೆ ಆರೋಪದಿಂದಾಗಿ ವಿಷ ಸೇವಿಸಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಬೆಂಗಳೂರು ಮೈಸೂರು ಹೆದ್ದಾರಿ ಸರಣಿ ಅಪಘಾತದಲ್ಲಿ ಸುಟ್ಟು ಭಸ್ಮವಾದ ಕಾರು: ಮಂಡ್ಯ ಎಸ್‌ಪಿ ಕಾರಿಗೂ ಡ್ಯಾಮೇಜ್‌

ಮೃತ ವಿದ್ಯಾರ್ಥಿನಿಯನ್ನು ಆಶಾ (20) ಎಂದು ಹೇಳಲಾಗಿದೆ. ಮೃತಳು ಬೇಲೂರು ಪಟ್ಟಣದ ವೈಡಿಡಿ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ಓದುತ್ತಿದ್ದಳು. ಪ್ರಿಯಕರ ಮಂಜುನಾಥ್ ಕೂಡ ಅದೇ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿದ್ದನು. ಇವನು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ, ಕಾಟೀಹಳ್ಳಿ ಗ್ರಾಮದವನಾಗಿದ್ದಾನೆ. ಆಶಾಳನ್ನ ಪ್ರೀತಿಸೋದಾಗಿ ಸುತ್ತಾಡಿ ವಂಚನೆ ಮಾಡಿದ್ದಾನೆ  ಎಂಬ ಆರೋಪ ಕೇಳಿಬಂದಿದೆ. ಆಶಾಳ ಬೆನ್ನುಬಿದ್ದು ಪ್ರೀತಿಸಿದ ಈ ಯುವಕ ಮಂಜುನಾಥ್‌, ಇತ್ತೀಚಿಗೆ ಬೇರೊಂದು ಹುಡುಗಿ ಜೊತೆ ಸುತ್ತಾಡುತ್ತಿದ್ದನು.

ಬೇರೊಂದು ಹುಡುಗಿಯೊಂದಿಗೆ ಯುವಕ ಸುತ್ತಾಟ: ಇನ್ನು ನಾವಿಬ್ಬರೂ ಒಂದು ವರ್ಷದಿಂದ ಪ್ರೀತಿಸುತ್ತಿದ್ದರೂ ಈಗ ನೀನು ನನ್ನನ್ನು ಬಿಟ್ಟು ಬೇರೊಬ್ಬ ಹುಡುಗಿಯೊಂದಿಗೆ ಓಡಾಡುತ್ತಿದ್ದೀಯ ಎಂದು ಮಂಜುನಾಥನನ್ನು ಪ್ರಶ್ನಿಸಿದ್ದಕ್ಕೆ ಕೊಲೆ‌ಬೆದರಿಕೆ ಹಾಕಿದ್ದಾನೆಂದು ಕೇಳಿಬಂದಿದೆ. ಜೊತೆಗೆ, ನನ್ನೊಂದಿಗೆ ನೀನು ಸುತ್ತಾಡಿರುವ ಫೋಟೋ, ಮೆಸೇಜ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಪ್ರೇಯಸಿ ಆಶಾಳಿಗೆ ಮಂಜುನಾಥ್‌ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದು ಆಶಾ ಅಕ್ಟೋಬರ್ 6 ರಂದು ಕಾಲೇಜಿನ ಬಳಿಯೇ ವಿಷ ಸೇವಿಸಿದ್ದಳು.

Bengaluru : ಕಿಲ್ಲರ್‌ ಬಿಎಂಟಿಸಿ ಬಸ್‌ಗೆ ಇಂಜಿನಿಯರ್‌ ವಿದ್ಯಾರ್ಥಿ ಬಲಿ

ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ: ಕೂಡಲೇ ಅಲ್ಲಿದ್ದ ವಿದ್ಯಾರ್ಥಿಗಳ ಸಹಾಯದೊಂದಿಗೆ ಆರೋಪಿ ಮಂಜುನಾಥ್‌, ಆಶಾಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದನು. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಆಶಾಳನ್ನು ಶಿಫ್ಟ್ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ಸಾವನ್ನಪ್ಪಿದ್ದಾಳೆ. ಈ ಘಟನೆಗೆ ಸಂಬಂಧಪಟ್ಟಂತೆ ಆಶಾ ತಂದೆ ರಾಮಯ್ಯ, ಮಂಜುನಾಥನ ವಿರುದ್ಧ ಪೋಲಿಸರಿಗೆ ದೂರು ನೀಡಿದ್ದಾರೆ. ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Follow Us:
Download App:
  • android
  • ios