ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ
ಬೆಳ್ತಂಡಿಯಲ್ಲಿ ಭಾರೀ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿದರು ಈ ವೇಳೆ ಹಾನಿಗೊಳಗಾದ ಮನೆಗಳಿಗೆ ಸರ್ಕಾರ ನೀಡಲಿರುವ ಪರಿಹಾರದ ಕುರಿತು ಕಂದಾಯ ಇಲಾಖೆಯ ಜತೆ ಸಭೆ ನಡೆಸಿದರು
ಬೆಳ್ತಂಗಡಿ (ಜು.27) : ತಾಲೂಕಿನಲ್ಲಿ ಮಳೆಯಿಂದ ಉಂಟಾಗಿರುವ ಹಾನಿಗಳಿಗೆ ಸರ್ಕಾರ ನೀಡಲಿರುವ ಪರಿಹಾರದ ಕುರಿತು ಕಂದಾಯ ಇಲಾಖೆಯ ಜತೆ ಚರ್ಚಿಸಲಾಗಿದೆ. ವೈಯಕ್ತಿಕ ನೆಲೆಯಲ್ಲಿ ಆರ್ಥಿಕ ಸಹಕಾರವನ್ನು ನೀಡಲಾಗಿದ್ದು, ಸ್ಥಳೀಯ ಪಂಚಾಯಿತಿಗಳು, ಜನಪ್ರತಿನಿಧಿಗಳ ಮೂಲಕ ತಾತ್ಕಾಲಿಕ ಅಗತ್ಯ ವ್ಯವಸ್ಥೆಗಳನ್ನು ರೂಪಿಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಶನಿವಾರ ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಚಾರ್ಮಾಡಿ(Charmadi Ghat), ನೆರಿಯ, ಪುದುವೆಟ್ಟು(Puduvettu), ಕಳೆಂಜ(Kalenja), ಶಿಬಾಜೆ, ಅರಸಿನಮಕ್ಕಿ, ಶಿಶಿಲ, ರೆಖ್ಯ ಮೊದಲಾದ ಗ್ರಾಮಗಳಲ್ಲಿ ಮಳೆ ಹಾನಿ ವೀಕ್ಷಣೆ ನಡೆಸಿ ಮಾತನಾಡಿದರು.
ನಾಲ್ಕೈದು ದಿನದಲ್ಲಿ ಶಿರಾಡಿ ವಾಹನ ಸಂಚಾರಕ್ಕೆ ಮುಕ್ತ ಸಾಧ್ಯತೆ: ಹಾಸನ ಡಿ.ಸಿ.
ಕೊಲ್ಲಿ- ಲಾಯಿಲ ರಸ್ತೆಯ ಅಭಿವೃದ್ಧಿ ಕುರಿತ ಪ್ರಸ್ತಾವನೆ ಟೆಂಡರ್ ಹಂತದಲ್ಲಿದ್ದು 9 ಕೋಟಿ ರು. ಅನುದಾನ ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಗೊಳ್ಳಲಿದೆ. ಕೊಲ್ಲಿ ದೇವಸ್ಥಾನದ ಬಳಿಯು ಕಾಂಕ್ರೀಟೀಕರಣ ನಡೆಯಲಿದೆ. ಬೆದ್ರಬೆಟ್ಟು ತನಕ ಅಗಲೀಕರಣ, ನಾವೂರು ತನಕ ಮರು ಡಾಮಾರೀಕರಣ ಸಹಿತ ರಸ್ತೆ ಅಭಿವೃದ್ಧಿಗೊಳ್ಳಲಿದೆ. ಸುಮಾರು 250 ಕುಟುಂಬಗಳಿಗೆ ಅಗತ್ಯ ಬೇಕಾದ ಕೊಲ್ಲಿ- ಫಣಿಕಲ್ಲು ರಸ್ತೆ ನಿರ್ಮಾಣವು ಮುಂದಿನ ಹಂತದಲ್ಲಿ ನಡೆಯಲಿದೆ ಎಂದು ಹೇಳಿದರು.
ಶಾಲಾ ಕಟ್ಟಡ, ಅಂಗನವಾಡಿ ಅಭಿವೃದ್ಧಿ:
ಕಿಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಟ್ಟು ಆರು ನೂತನ ಕೊಠಡಿಗಳ ಅಗತ್ಯವಿದ್ದು ಮೂರು ಕೊಠಡಿ ನಿರ್ಮಾಣಕ್ಕೆ ಅನುದಾನವನ್ನು ನೀಡಲಾಗುತ್ತದೆ. ಪೋಷಕರು, ಹಳೆ ವಿದ್ಯಾರ್ಥಿಗಳು ಸೇರಿ ಹೆಚ್ಚುವರಿ ಮೂರು ಕೊಠಡಿಗಳನ್ನು ನಿರ್ಮಿಸಿದರೆ ಪರಿಪೂರ್ಣತೆ ದೊರಕುತ್ತದೆ. ಅಂಗನವಾಡಿಗಳ ಅಭಿವೃದ್ಧಿ ಕೆಲಸಗಳನ್ನು ಉದ್ಯೋಗ ಖಾತರಿ, ಶಾಸಕರ ಹಾಗೂ ಇಲಾಖೆಯ ಅನುದಾನದಲ್ಲಿ ನಡೆಸಲಾಗುವುದು ಎಂದು ಶಾಸಕರು ಹೇಳಿದರು. ಮಿತ್ತ ಬಾಗಿಲು ಶಾಲೆಗೆ ಶೌಚಾಲಯ ನಿರ್ಮಾಣ ಹಾಗೂ ಛಾವಣಿ ದುರಸ್ತಿ ಕೆಲಸವನ್ನು 5 ಲಕ್ಷ ರು. ವೆಚ್ಚದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
Mangaluru: ಹರೀಶ್ ಪೂಂಜಾ ಸವಾಲಿನ ಬೆನ್ನಲ್ಲೇ ಮತ್ತೆ ಹಾರಿದ ಭಗವಾಧ್ವಜ..!
ಪರ್ಯಾಯ ವ್ಯವಸ್ಥೆ:
ಮಲವಂತಿಗೆ ಗ್ರಾಮದ ಸುಂದರ ಪೂಜಾರಿ ಎಂಬವರ ಮನೆಯು ಗುಡ್ಡ ಕುಸಿತದ ಪರಿಣಾಮ ಅಪಾಯದ ಸ್ಥಿತಿಯಲ್ಲಿದೆ. ಈಗಾಗಲೇ ಮನೆ ಮಂದಿಯನ್ನು ಸ್ಥಳಾಂತರಿಸಲಾಗಿದ್ದು ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆಯಿಂದ ಇವರಿಗೆ ಜಾಗ ಗುರುತಿಸಿ ಸಂಪೂರ್ಣ ಮನೆ ಹಾನಿ ಪರಿಹಾರ ಒದಗಿಸಿ ಮನೆ ನಿರ್ಮಿಸಲು ಸೂಚಿಸಲಾಗುವುದು ಎಂದು ಹೇಳಿದರು.
ಕಾಳಜಿ ಕೇಂದ್ರ:
ಮಿತ್ತಬಾಗಿಲು, ಕುಕ್ಕಾವು, ಚಾರ್ಮಾಡಿ ಶಾಲೆಗಳಲ್ಲಿ ಕಾಳಜಿ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದ್ದು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸದ್ಯ ಮಳೆ ಕಡಿಮೆಯಾಗಿರುವುದರಿಂದ ಯಾರಿಗೂ ಇವುಗಳ ಅಗತ್ಯ ಕಂಡು ಬಂದಿಲ್ಲ. ಆದರೆ ಅಗತ್ಯ ಸಂದರ್ಭ ಕಂಡು ಬಂದರೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲು ಸಜ್ಜಾಗಿವೆ ಎಂದರು.
ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಕಡಿರುದ್ಯಾವರ ಗ್ರಾ.ಪಂ. ಅಧ್ಯಕ್ಷ ಅಶೋಕ್ ಕುಮಾರ್, ಮಲವಂತಿಗೆ ಗ್ರಾ.ಪಂ. ಉಪಾಧ್ಯಕ್ಷ ಡಿ.ದಿನೇಶ್ ಗೌಡ, ಮಿತ್ತ ಬಾಗಿಲು ಗ್ರಾ.ಪಂ. ಉಪಾಧ್ಯಕ್ಷ ವಿನಯ ಚಂದ್ರ ಸೇನೆರಬೆಟ್ಟು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ ಪೂಜಾರಿ, ಮುಖ್ಯೋಪಾಧ್ಯಾಯ ರಮೇಶ್ ಪೈಲಾರು, ಇಂದಿರಾ ಪ್ರಮುಖರಾದ ಪ್ರಮೋದ ದಿಡುಪೆ ತೀಕ್ಷಿತ್ ಕೆ. ಗೌಡ, ಕೇಶವ ಫಡಕೆ, ಕಿರಣ್ ಫಡಕೆ, ಗ್ರಾ.ಪಂ. ಸದಸ್ಯರು ಹಾಗೂ ಸ್ಥಳೀಯರು ಇದ್ದರು.
ಬೆಳ್ತಂಗಡಿ ನ.ಪಂ. ಅಧಿಕಾರಿಗಳ ಸಭೆ:
ನಗರದ ಜೂನಿಯರ್ ಕಾಲೇಜು ಬಳಿ ರಾತ್ರಿ ಹೊತ್ತು ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ರಾತ್ರಿ ಹೊತ್ತು ಗಸ್ತು ಹೆಚ್ಚಿಸಬೇಕು ಎಂದು ಶಾಸಕ ಹರೀಶ್ ಪೂಂಜ ಪೊಲೀಸ್ ಇಲಾಖೆಗೆ ಆದೇಶಿಸಿದರು. ಅವರು ಮಂಗಳವಾರ ನ.ಪಂ. ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಗರ ಅಭಿವೃದ್ಧಿ ಕುರಿತು ಸಮಾಲೋಚಿಸಿದರು.
ನಗರದಲ್ಲಿ ಮೂಡ ಸಮಸ್ಯೆಯಿಂದ ಬಾಕಿ ವಿಲೇವಾರಿ ಅರ್ಜಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದಕ್ಕೆ ಅಧಿಕಾರಿಗಳು ಉತ್ತರಿಸಿ ವಿವಿಧ ಕಾರಣಗಳಿಂದ 43ಅರ್ಜಿಗಳು ಬಾಕಿ ಇದ್ದು, ಇದಕ್ಕಾಗಿ ವಿಶೇಷ ವರದಿ ತಯಾರಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದ ಆದೇಶ ಬಂದ ತಕ್ಷಣ ಪರಿಹರಿಸಲಾಗುವುದು ಎಂದು ತಿಳಿಸಿದರು. ಈ ಬಗ್ಗೆ ಸರ್ಕಾರದಿಂದ ಆಗಬೇಕಾದ ಕ್ರಮಗಳ ಬಗ್ಗೆ ಸಂಬಂಧಪಟ್ಟಸಚಿವರ ಗಮನಕ್ಕೆ ತರಲಾಗುವುದು ಎಂದು ಶಾಸಕರು ತಿಳಿಸಿದರು. ಕೆ.ಆರ್.ಡಿ.ಎಲ…. ಯೋಜನೆಯಡಿ ಮಂಜೂರಾದ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಲ್ಲಿ ಶಾಸಕರು ಮಾಹಿತಿ ಪಡೆದರು