Asianet Suvarna News Asianet Suvarna News

ನಾಲ್ಕೈದು ದಿನದಲ್ಲಿ ಶಿರಾಡಿ ವಾಹನ ಸಂಚಾರಕ್ಕೆ ಮುಕ್ತ ಸಾಧ್ಯತೆ: ಹಾಸನ ಡಿ.ಸಿ.

ಪ್ರತಿ ವರ್ಷ ಮಳೆಗಾಲದಲ್ಲಿ ದೋಣಿಗಲ್ ನಲ್ಲಿ ರಸ್ತೆ ಕುಸಿತವಾಗುವುದು, ವಾಹನ ಸಂಚಾರಕ್ಕೆ ನಿಷೇಧ ಹೇರುವುದು ನಡೆದೇ ಇದೆ ಈ ಬಾರಿಯೂ ರಸ್ತೆ ಕುಸಿತವಾಗಿದ್ದು ಅದರ ದುರಸ್ತಿ ಕಾರ್ಯ ನಡೆದಿದೆ ನಾಲ್ಕೈದು ದಿನಗಳಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.

Shiradighat is open for traffic within 4-5 days hasan DC rav
Author
Bangalore, First Published Jul 21, 2022, 8:37 AM IST

 ಹಾಸನ (ಜು.21): ಸಕಲೇಶಪುರ ತಾಲೂಕಿನ ದೋಣಿಗಾಲ್‌ ಸಮೀಪ ಹೆದ್ದಾರಿ ಕುಸಿತ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಇನ್ನೂ 4-5 ದಿನದಲ್ಲಿ ಬದಲಿ ಮಾರ್ಗದ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಿಲ್ಲಾ​ಧಿಕಾರಿ ಆರ್‌. ಗಿರೀಶ್‌ ತಿಳಿಸಿದರು .

ಜಿಲ್ಲಾಧಿ​ಕಾರಿ(District Collector) ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾಡಿ ರಸ್ತೆಯಲ್ಲಿ ಇದೀಗ ಭಾರಿ ವಾಹನ ಸಂಚಾರ ನಿಷೇ​ಧಿಸಲಾಗಿದ್ದು ಲೋಕೋಪಯೋಗಿ ಇಲಾಖೆ ಅ​ಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಭೆ ನಡೆದಿದ್ದು ಇದರಲ್ಲಿ ರಾಷ್ಟ್ರೀಯ ಹೆದ್ದಾರಿ(Highway) ಪ್ರಾಧಿ​ಕಾರದ ಅಧಿ​ಕಾರಿಗಳು ಸಹ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದೋಣಿಗಾಲ್‌ ಹೆದ್ದಾರಿ(Donegal highway) ಕುಸಿತವನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಅ​ಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಬದಲಿ ರಸ್ತೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ 2.2 ಕಿಲೋಮೀಟರ್‌ ಹೊಸ ರಸ್ತೆ ಮಾಡಲು 4.3 ಕೋಟಿ ಹಣವನ್ನು ಮಂಜೂರು ಮಾಡಲಾಗಿದ್ದು, ಹೆದ್ದಾರಿ ಪ್ರಾ​ಧಿಕಾರದ ಅಧಿ​ಕಾರಿಗಳು ಸ್ಥಳ ಪರಿಶೀಲನೆ ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಶಿರಾಡಿ ಘಾಟ್‌ನ 2.5 ಕಿ.ಮೀ. ತಾತ್ಕಾಲಿಕ ಒನ್‌ ವೇ: ಸಚಿವ ಸಿ.ಸಿ.ಪಾಟೀಲ್‌

ಮುಂದಿನ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಲ್ಲಿ ಮತ್ತೆ ಮಳೆ ಪ್ರಮಾಣ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ದೋಣಿಗಾಲ್‌ ಹೆದ್ದಾರಿ ಕುಸಿತವನ್ನು ಸಂಪೂರ್ಣವಾಗಿ ದುರಸ್ತಿ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾ​ಧಿಕಾರದ ಅಧಿ​ಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಇದೀಗ ಈ ಮಾರ್ಗದಲ್ಲಿ ಏಕಮುಖ ಸಂಚಾರದಲ್ಲಿ ಲಘು ವಾಹನಗಳನ್ನು ಬಿಡಲಾಗುತ್ತಿದ್ದು, ಮುಂದಿನ ನಾಲ್ಕು ಐದು ದಿನಗಳಲ್ಲಿ ಭಾರಿ ವಾಹನ ಸಂಚಾರಕ್ಕೆ ಹೆದ್ದಾರಿಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆದಿದೆ ಎಂದರು .

ಆಗುಂಬೆ ಘಾಟಿಯ ನಾಲ್ಕನೇ ತಿರುವಲ್ಲಿ ರಸ್ತೆ ಬಿರುಕು

ಮಡಿಕೇರಿಯಿಂದ ಮಂಗಳೂರು ಕಡೆಗೆ ಹೋಗುವ ಘಾಟಿ ರಸ್ತೆಯಲ್ಲಿಯೂ ಸಹ 16 ಟನ್‌ ತೂಕದ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಆದ್ದರಿಂದ ಆದಷ್ಟುಶೀಘ್ರವಾಗಿ ಭಾರಿ ವಾಹನಗಳ ಸಂಚಾರ ಶಿರಾಡಿ ಮಾರ್ಗದಲ್ಲಿ ಸಂಚರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ​ಧಿಕಾರಿ ತಿಳಿಸಿದರು.

ಚಾರ್ಮಾಡಿಘಾಟ್ ನಲ್ಲಿ ಕೆಟ್ಟು ನಿಂತ ವಾಹನ: ಚಾರ್ಮಾಡಿ ಘಾಟಿಯಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಗಂಟೆಗಟ್ಟಲೆ ವಾಹನ ಸಂಚಾರಕ್ಕೆ ತಡೆ ಉಂಟಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಚಾರ್ಮಾಡಿ ಘಾಟಿಯ 10ನೇ ತಿರುವಿನಲ್ಲಿ ಇಂಧನ ತುಂಬಿದ ಟ್ಯಾಂಕರ್‌ ತಾಂತ್ರಿಕ ದೋಷದಿಂದ ಮಾರ್ಗ ಮಧ್ಯೆ ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಇದರಿಂದ ಬೆಂಗಳೂರು ಸೇರಿಂತೆ ಇನ್ನಿತರ ಕಡೆಗಳಿಗೆ ಹೋಗುವ ಬಸ್‌ ಹಾಗೂ ಇತರ ವಾಹನಗಳು ಸಾಲುಗಟ್ಟಿನಿಲ್ಲುವಂತಾಯಿತು.

ಆದೇಶ ಪರಿಷ್ಕರಿಸಿದ ಡಿಸಿ, ಶಿರಾಡಿಘಾಟ್‌ನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ!

ಈ ಬಗ್ಗೆ ಮಾಹಿತಿ ಪಡೆದ ಹೊಯ್ಸಳÜ ಪೊಲೀಸರು ಕೊಟ್ಟಿಗೆ ಹಾರ, ಚಾರ್ಮಾಡಿ ಗೇಟ್‌ ಬಳಿ ವಾಹನಗಳನ್ನು ನಿಯಂತ್ರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಂತರ ಕ್ರೇನ್‌ ತರಿಸಿ ಟ್ಯಾಂಕರ್‌ ತೆರವುಗೊಳಿಸಲಾಯಿತು.ಈಗಾಗಲೇ ಶಿರಾಡಿ, ಸಂಪಾಜೆಯಲ್ಲಿ ಮಾರ್ಗ ಕುಸಿತದಿಂದ ವಾಹನ ಸಂಚಾರಕ್ಕೆ ತಡೆಯಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ವಾಹನ ದಟ್ಟಣೆ ಹಾಗೂ ಅತಿ ಹೆಚ್ಚು ಬಸ್‌ಗಳು ಸಂಚರಿಸುವುದರಿಂದ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.

ಅನಿರ್ದಿಷ್ಠಾವಧಿವರೆಗೆ ಶಿರಾಡಿ ಘಾಟ್ ರಸ್ತೆ ಬಂದ್ : ಹಾಸನ ಎಸ್ಪಿ ಹರಿರಾಂ ಶಂಕರ್ ಆದೇಶ

ಸ್ಥಳದಲ್ಲಿ ಹೊಯ್ಸಳದ ವೆಂಕಪ್ಪ ಮತ್ತು ಬಸವರಾಜ್‌, ಸಂಚಾರಿ ಠಾಣೆಯ ಪಿಎಸ್‌ಐ ಓಡಿಯಪ್ಪ, ಶಿವರಾಮ ರೈ, ಕುಮಾರ್‌ ಇದ್ದರು. ರಾತ್ರಿ ಸಂಚಾರದ ಬಸ್‌ಗಳು ಕೂಡ ಇದೇ ಮಾರ್ಗದಲ್ಲಿ ಸಂಚರಿಸುತ್ತಿವೆ. ಟ್ರಾಫಿಕ್‌ ಜಾಮ್‌ ಆಗಿರುವ ಬಗ್ಗೆ ಕೊಟ್ಟಿಗೆಹಾರದಲ್ಲಿ ಮಾಹಿತಿ ಪಡೆದ ಕೆಲವು ಬಸ್‌ಗಳು ಶೃಂಗೇರಿ, ಎಸ್‌.ಕೆ. ಬಾರ್ಡರ್‌, ಬಜಗೋಳಿ ಮೂಲಕ ಸಂಚರಿಸಿದವು.

Follow Us:
Download App:
  • android
  • ios