Mangaluru: ಹರೀಶ್ ಪೂಂಜಾ ಸವಾಲಿನ ಬೆನ್ನಲ್ಲೇ ಮತ್ತೆ ಹಾರಿದ ಭಗವಾಧ್ವಜ..!

*  ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆಯಲ್ಲಿ ನಡೆದ ಘಟನೆ
*  ಭಗವಾಧ್ವಜ ಮತ್ತು ಕಟ್ಟೆಗೆ ಹಾನಿ ಮಾಡಿ ದುಷ್ಕೃತ್ಯ ಮೆರೆದಿದ್ದರು ಕಿಡಿಗೇಡಿಗಳು
*  ಭಗಾವಧ್ವಜವು ಹಿಂದುಗಳ ಶಕ್ತಿ ಮತ್ತು ಪ್ರೇರಣೆಯ ಸಂಕೇತ
 

Hindu Activist Again Hoist Bhagavad Dwaja Flag in Dakshina Kannada grg

ಮಂಗಳೂರು(ಏ.19):  ಭಗವಾಧ್ವಜ(Bhagavad Dwaja) ಮತ್ತು ಕಟ್ಟೆಗೆ ಹಾನಿ ಮಾಡಿ ಕಿಡಿಗೇಡಿಗಳು ದುಷ್ಕೃತ್ಯ ಮೆರೆದ 24 ಗಂಟೆಯೊಳಗೆ ಮತ್ತದೇ ಜಾಗದಲ್ಲಿ ಹಿಂದೂ(Hindu) ಕಾರ್ಯಕರ್ತರು ಭಗವಾಧ್ವಜ ಹಾರಿಸಿದ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಎಂಬಲ್ಲಿ ನಡೆದಿದೆ. ಕಿತ್ತು ಹಾಕಿರ ಜಾಗದಲ್ಲೇ ಮತ್ತೆ ಭಗವಾಧ್ವಜ ಹಾರಡಲಿದೆ ಅಂತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ(Harish Poonja) ಸವಾಲು ಹಾಕಿದ ಬೆನ್ನಲ್ಲೇ ಮತ್ತದೇ ಜಾಗದಲ್ಲಿ ಭಗವಾಧ್ವಜ ಹಾರಾಡಿದೆ.

ದ.ಕ(Dakshina Kannada) ಜಿಲ್ಲೆಯ ಬೆಳ್ತಂಗಡಿ(Belthangady) ತಾಲೂಕಿನ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಎಂಬಲ್ಲಿ ಇತ್ತೀಚೆಗೆ ಸ್ಥಳೀಯ ಹಿಂದೂ ಯುವಕರು ಸೇರಿಕೊಂಡು ಕಟ್ಟೆ ನಿರ್ಮಿಸಿ ಕೇಸರಿ ಧ್ವಜ(Saffron Flag) ಪ್ರತಿಷ್ಠಾಪಿಸಿದ್ದರು. ಭಾನುವಾರ ರಾತ್ರಿ ಕಿಡಿಗೇಡಿಗಳು ಭಗವಾಧ್ವಜ ಮತ್ತು ಕಟ್ಟೆಗೆ ಹಾನಿ ಮಾಡಿ ದುಷ್ಕೃತ್ಯ ಮೆರೆದಿದ್ದರು. 

Saffron Flag at Red Fort: ಕೆಂಪು ಕೋಟೆಯ ಮೇಲೆ ಭಗವಾಧ್ವಜ ಹಾರಿಸಿಯೇ ಸಿದ್ದ: ಶಾಸಕ ಹರೀಶ್ ಪೂಂಜಾ

ಕಟ್ಟೆಯನ್ನು ಹಾನಿಗೈದು ಕಂಬ ಹಾಗೂ ಭಗವಾಧ್ವಜವನ್ನು ಕೆಳಕ್ಕುರುಳಿಸಿ ಕೃತ್ಯ ಎಸಗಿದ್ದರು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭಗವಾಧ್ವಜ ಕಿತ್ತೆಸೆದ ವಿರುದ್ದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಎಚ್ಚರಿಕೆ ನೀಡಿದ್ದು, ಸಭಾ ಕಾರ್ಯಕ್ರಮದ ವೇದಿಕೆಯಲ್ಲೇ ಕಿಡಿಗೇಡಿಗಳಿಗೆ ವಾರ್ನ್ ‌ಮಾಡಿದ್ದರು.

'ತಾಕತ್ತಿದ್ರೆ ನಾಲ್ಕು ಜನರ ಎದುರಲ್ಲಿ ಕಿತ್ತುಹಾಕಿ, ನಿಮ್ಮ ಕೈ ಕಾಲು ಮುರಿಯಲು ನಮ್ಮ ಯುವಕರು ಸಿದ್ದವಾಗಿದ್ದಾರೆ. ಭಗಾವಧ್ವಜವು ಹಿಂದುಗಳ ಶಕ್ತಿ ಮತ್ತು ಪ್ರೇರಣೆಯ ಸಂಕೇತ. ನಮ್ಮ ಹೃದಯದಲ್ಲಿ ಅದಕ್ಕೆ ಆರಾಧನೆಯ ಸ್ಥಾನವನ್ನು ನೀಡಿದೆ. ಹಾಗಾಗಿ ಮತ್ತದೇ ಹಾಳುಗೆಡಹಿದ ಜಾಗದಲ್ಲಿ ಭಗವಾಧ್ವಜವನ್ನು ಹಾರಾಡುವಂತೆ ಮಾಡುತ್ತೇವೆ. ಮುಂದೆ ಇಂತಹ ದುಷ್ಕೃತ್ಯ ಮರುಕಳಿಸಿದರೆ ಪರಿಣಾಮ ಬೇರೆ ರೀತಿಯೇ ಆಗಿರುತ್ತದೆ' ಎಂದು ಹಿಂದೂ ಜಾಗರಣಾ ವೇದಿಕೆ ಕಾರ್ಯಕ್ರಮದಲ್ಲಿ ತುಳುವಿನಲ್ಲಿ ಪೂಂಜಾ ವಾರ್ನಿಂಗ್ ಮಾಡಿದ್ದರು. ಇದಾದ ಬೆನ್ನಲ್ಲೇ ಹಿಂದೂ ಕಾರ್ಯಕರ್ತರು ಅದೇ ಜಾಗದಲ್ಲಿ ಭಗವಾಧ್ವಜ ಹಾರಿಸಿದ್ದಾರೆ.

Kalladka Prabhakar Bhat ಬೈಪಾಸ್ ಸರ್ಜರಿ ಯಶಸ್ವಿ, ಆಸ್ಪತ್ರೆಯಿಂದ ಕಲ್ಕಡ್ಕ ಪ್ರಭಾಕರ್ ಭಟ್ ಬಿಡುಗಡೆ!

ಭಗವಾಧ್ವಜ ಹಾನಿಗೈದವರ ವಿರುದ್ದ ಶಾಸಕ ಹರೀಶ್ ಪೂಂಜಾ ಕಿಡಿ!

ತಾಕತ್ತಿದ್ರೆ ನಾಲ್ಕು ಜನರ ಎದುರಲ್ಲಿ ಭಗವಾಧ್ವಜ ಕಿತ್ತುಹಾಕಿ, ನಿಮ್ಮ ಕೈ ಕಾಲು ಮುರಿಯಲು ನಮ್ಮ ಯುವಕರು ಸಿದ್ದವಾಗಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಿಡಿಗೇಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ (Kokkada) ಗ್ರಾಮದ ಉಪ್ಪಾರಪಳಿಕೆ ಎಂಬಲ್ಲಿ ಇತ್ತೀಚೆಗೆ ಸ್ಥಳೀಯ ಹಿಂದೂ ಯುವಕರು ಸೇರಿಕೊಂಡು ಕಟ್ಟೆ ನಿರ್ಮಿಸಿ ಕೇಸರಿ ಧ್ವಜ ಪ್ರತಿಷ್ಠಾಪಿಸಿದ್ದರು. ನಿನ್ನೆ ರಾತ್ರಿ ಕಿಡಿಗೇಡಿಗಳು ಭಗವಾಧ್ವಜ ಮತ್ತು ಕಟ್ಟೆಗೆ ಹಾನಿ ಮಾಡಿ  ದುಷ್ಕೃತ್ಯ ಮೆರೆದಿದ್ದಾರೆ. ಕಟ್ಟೆಯನ್ನು ಹಾನಿಗೈದು ಕಂಬ ಹಾಗೂ ಭಗವಾಧ್ವಜವನ್ನು ಕೆಳಕ್ಕುರುಳಿಸಿ ಕೃತ್ಯ ಎಸಗಿದ್ದಾರೆ. 

ಇದರ ವಿರುದ್ದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಎಚ್ಚರಿಕೆ ನೀಡಿದ್ದು, ಸಭಾ ಕಾರ್ಯಕ್ರಮದ ವೇದಿಕೆಯಲ್ಲೇ ಕಿಡಿಗೇಡಿಗಳಿಗೆ ವಾರ್ನ್ ‌ಮಾಡಿದ್ದಾರೆ. 'ತಾಕತ್ತಿದ್ರೆ ನಾಲ್ಕು ಜನರ ಎದುರಲ್ಲಿ ಕಿತ್ತುಹಾಕಿ, ನಿಮ್ಮ ಕೈ ಕಾಲು ಮುರಿಯಲು ನಮ್ಮ ಯುವಕರು ಸಿದ್ದವಾಗಿದ್ದಾರೆ. ಭಗಾವಧ್ವಜವು ಹಿಂದುಗಳ ಶಕ್ತಿ ಮತ್ತು ಪ್ರೇರಣೆಯ ಸಂಕೇತ. ನಮ್ಮ ಹೃದಯದಲ್ಲಿ ಅದಕ್ಕೆ ಆರಾಧನೆಯ ಸ್ಥಾನವನ್ನು ನೀಡಿದೆ. ಹಾಗಾಗಿ ಮತ್ತದೇ ಹಾಳುಗೆಡಹಿದ ಜಾಗದಲ್ಲಿ ಭಗವಾಧ್ವಜವನ್ನು ಹಾರಾಡುವಂತೆ ಮಾಡುತ್ತೇವೆ. ಮುಂದೆ ಇಂತಹ ದುಷ್ಕೃತ್ಯ ಮರುಕಳಿಸಿದರೆ ಪರಿಣಾಮ ಬೇರೆ ರೀತಿಯೇ ಆಗಿರುತ್ತದೆ' ಎಂದು ಹಿಂದೂ ಜಾಗರಣಾ ವೇದಿಕೆ ಕಾರ್ಯಕ್ರಮದಲ್ಲಿ ತುಳುವಿನಲ್ಲಿ ಪೂಂಜಾ ವಾರ್ನಿಂಗ್ ಮಾಡಿದ್ದರು.

Latest Videos
Follow Us:
Download App:
  • android
  • ios