Asianet Suvarna News Asianet Suvarna News

Ballari: ಗಂಡು ಮಕ್ಕಳಾಗಿಲ್ಲವೆಂದು ದಂಪತಿ ಜಗಳ: ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ

ನಾಲ್ಕು ಹೆಣ್ಣು ಮಕ್ಕಳಿದ್ದರಿಂದ ಗಂಡು ಮಕ್ಕಳಾಗಿಲ್ಲವೆಂದು ಗಂಡನ ಜಗಳ
ಇಬ್ಬರು ಚಿಕ್ಕ ಹೆಣ್ಣು ಮಕ್ಕಳನ್ನು ಕಾಲುವೆಗೆ ಎಸೆದು ತಾನೂ ಹಾರಿದ ತಾಯಿ
ಓರ್ವ ಮಗಳನ್ನು ರಕ್ಷಿಸಿದ ರೈತರು, ತಾಯಿಗಾಗಿ ಶೋಧ

Bellary Couple quarrels over not having sons Mother jumps into canal with two daughters sat
Author
First Published Jan 12, 2023, 10:22 PM IST

ಬಳ್ಳಾರಿ (ಜ.12): ಕೌಟುಂಬಿಕ ಕಲಹ ಹಿನ್ನಲೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿಯೂ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಳ್ಳಾರಿ  ತಾಲೂಕಿನ ಸಿಂಧವಾಳ ಗ್ರಾಮದ ಕಾಲೂವರ ಬಳಿ ನಡೆದಿದೆ. ಘಟನೆಯಲ್ಲಿ ಒಂದು ಮಗುವನ್ನು ರಕ್ಷಿಸಲಾಗಿದೆ. 

ಲಕ್ಷ್ಮಿ (35) ಎನ್ನುವ ಮಹಿಳೆ ತನ್ನ ಚಿಕ್ಕ ಮಕ್ಕಳಾದ ಶಾಂತಿ (3) ಹಾಗೂ ವೆನ್ನೆಲ (4) ಎಂಬ ಹೆಣ್ಣು ಮಕ್ಕಳನ್ನು ಬೃಹತ್‌ ನೀರಿನ ಕಾಲುವೆಗೆ ಎಸೆದು ತಾನೂ ಕಾಲುವೆಗೆ ಹಾರಿದ್ದಾಳೆ. ಇದನ್ನು ನೋಡಿದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ವೆನ್ನೆಲ ಎನ್ನುವ ಮಗುವನ್ನು ದಡ ಸೇರಿಸಿ ರಕ್ಷಣೆ ಮಾಡಿದ್ದಾರೆ. ಆದರೆ, ಇನ್ನು ಮೂರು ವರ್ಷದ ಮಗು ಶಾಂತಿ ಮೃತದೇಹ ಪತ್ತೆಯಾಗಿದ್ದು, ತಾಯಿಯ ದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಬಾಗಲಕೋಟೆ: ಬಡತನದಿಂದ ಬೇಸತ್ತ ತಾಯಿ: ಮೂವರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾನೂ ಸಾವಿಗೆ ಶರಣು

ಮೂಲತಃ ಬಳ್ಳಾರಿ ನಗರದ ಗುಗ್ಗರಹಟ್ಟಿ ನಿವಾಸಿಯಾದ ಲಕ್ಷ್ಮಿ ಅವರನ್ನು ನೆರೆಯ ಆಂಧ್ರ ಪ್ರದೇಶ ರಾಜ್ಯದ ಅಲೂರು ಗ್ರಾಮದ ವೀರಭದ್ರ ಎನ್ನುವವರೊಂದಿಗೆ ವಿವಾಹ ಮಾಡಲಾಗಿತ್ತು. ಇವರಿಗೆ ಒಟ್ಟು ನಾಲ್ಕು ಹೆಣ್ಣು ಮಕ್ಕಳಿದ್ದರು. ದಂಪತಿಗೆ ಗಂಡು ಮಗು ಜನಿಸದ ಹಿನ್ನೆಲೆಯಲ್ಲಿ ಮನೆಯಲ್ಲೂ ಆಗಿಂದಾಗ್ಗೆ ದಂಪತಿಯ ನಡುವೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಪತ್ನಿ ಲಕ್ಷ್ಮೀ ತನ್ನಿಬ್ಬರು ಚಿಕ್ಕ ಹೆಣ್ಣು ಮಕ್ಕಳನ್ನು ಎತ್ತಿಕೊಂಡು ಹೋಗಿ ಕಾಲುವೆಗೆ ಎಸೆದು ತಾನೂ ಅತ್ಯಹ್ಯತೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

ಬಳ್ಳಾರಿಯಿಂದ ಆಂಧ್ರ ಪ್ರದೇಶಕ್ಕೆ ಹೋಗುವ ಮಾರ್ಗದ ಮಧ್ಯೆ ಬಳ್ಳಾರಿ ತಾಲೂಕಿನ ಸಿಂಧವಾಳ ಗ್ರಾಮದ ಬಳಿಯ ಎಲ್ ಎಲ್ ಸಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯನ್ನು ಕಂಡ ಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯರು ಒಬ್ಬ ಮಗಳು ವೆನ್ನೆಲಳನ್ನು ರಕ್ಷಿಸಿದ್ದಾರೆ. ಮತ್ತೊಬ್ಬ ಮಗಳು, ತಾಯಿ ಇಬ್ಬರು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿಲ್ಲ ಎಂದು ಮೋಕ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಮೆಟ್ರೋ ಪಿಲ್ಲರ್‌ ದುರಂತ, 3 ಸಂಸ್ಥೆಗಳಿಂದ ತನಿಖೆ ಶುರು

ನಿನ್ನೆ ಮೂರು ಮಕ್ಕಳಿಗೆ ವಿಷವುಣಿಸಿದ್ದ ತಾಯಿ: ಬಾಗಲಕೋಟೆ :  ರಾಜ್ಯದ ಮಾಜಿ ಸಚಿವ ಎಚ್.ವೈ. ಮೇಟಿ ಅವರ ದೂರದ ಸಂಬಂಧಿ ಕುಟುಂಬದಲ್ಲಿ ಬಡತನದಿಂದ ಬೇಸತ್ತಿದ್ದ ತಾಯಿಯೊಬ್ಬಳು ತನ್ನ ಮೂವರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ಕೊಂದು ಕೊನೆಗೆ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರದಲ್ಲಿ ನಡೆದಿತ್ತು. ರೇಖಾ ಬಗಲಿ(28) ತಾಯಿ, ಮಕ್ಕಳಾದ ಸನ್ನಿಧಿ (8), ಸಮೃದ್ದಿ (5) ಹಾಗೂ ಶ್ರೀನಿಧಿ (3) ಮೃತ ದುರ್ದೈವಿಗಳು. ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ತನ್ನ ಮೂವರು ಮಕ್ಕಳಿಗೆ ವಿಷವುಣಿಸಿದ ತಾಯಿ ಕೊನೆಗೆ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಗೆ ಸೂಕ್ತ ಕಾರಣ ತಿಳಿದುಬಂದಿಲ್ಲ. ಆದರೆ, ಮೂವರು ಮಕ್ಕಳಿಗೆ ವಿಷವುಣಿಸಿದ ತಾಯಿ ರೇಖಾ ಇತ್ತೀಚಿನ ಕೆಲವು ದಿನಗಳಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಳು ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ಆದರೆ, ಇಂದು ಪುನಃ ಇಂತಹದೇ ಘಟನೆ ನಡೆದಿರುವು ಇಡೀ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ನಡೆಯುತ್ತಿದೆ.

Follow Us:
Download App:
  • android
  • ios