ಹುಬ್ಬಳ್ಳಿಯ ಏರ್ಪೋರ್ಟ್‌ಗೆ ಬೆಲ್ಜಿಯಂ ಶಫರ್ಡ್ ಶ್ವಾನಗಳ ಕಾವಲು

* ಹುಬ್ಬಳ್ಳಿಯ ಏರ್ಪೋರ್ಟ್‌ಗೆ ಬೆಲ್ಜಿಯಂ ಶಫರ್ಡ್ ಶ್ವಾನಗಳ ಕಾವಲು
* ಹುಬ್ಬಳ್ಳಿಯ ಏರ್‌ಪೋರ್ಟ್‌ಗೆ ಮತ್ತಷ್ಟು ಭದ್ರತೆ
* ಬೆಲ್ಜಿಯಂ ಶಫರ್ಡ್ ಶ್ವಾನಗಳ ಆಗಮನ

belgian shepherd security dogs Comes To Hubballi Airport rbj

ಗುರುರಾಜ್‌ ಹೂಗಾರ್.

ಹುಬ್ಬಳ್ಳಿ, (ಮೇ.15):
ಜನಪ್ರೀಯ ರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಾಣಿಜ್ಯನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಗುರು ಹಾಗೂ ಮಾಯಾ ಎನ್ನುವ ಹೆಸರಿನ ಎರಡು ಬೆಲ್ಜಿಯಂ ಶಫರ್ಡ್ ಶ್ವಾನಗಳು ಸೇರ್ಪಡೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯು ಒಂದು ವರ್ಷದ ಬೆಲ್ಜಿಯಂ ಶೆಫರ್ಡ್ ನಾಯಿಗಳನ್ನು ತನ್ನ ಭದ್ರತಾ ತಂಡಕ್ಕೆ ಸೇರಿಸಿಕೊಂಡಿದೆ. ಇದರಿಂದಾಗಿ ವಿಮಾನ ನಿಲ್ದಾಣದ ಭದ್ರತಾ ವಿಭಾಗದ ಬಲ ಹೆಚ್ಚಿದಂತಾಗಿದೆ. ಬೆಂಗಳೂರಿನಲ್ಲಿ ಸಿಆರ್‌ಪಿಎಫ್ ಶ್ವಾನ ತಳಿ ಮತ್ತು ತರಬೇತಿ ಶಾಲೆಯಲ್ಲಿ ಏಳು ತಿಂಗಳು ಈ ಶ್ವಾನಗಳಿಗೆ ತರಬೇತಿ ನೀಡಲಾಗಿದೆ. ಈ ತಳಿಯ ನಾಯಿಗಳು ಸ್ಫೋಟಕಗಳು ಮತ್ತು ಮಾದಕವಸ್ತುಗಳನ್ನು ವೇಗವಾಗಿ ಪತ್ತೆಹಚ್ಚಲು ವಿಶೇಷವಾಗಿ ತರಬೇತಿ ಪಡೆದಿರುತ್ತವೆ.

ಕಸದಲ್ಲಿಯೇ ರಸ ತೆಗೆಯುವಲ್ಲಿ ಯಶಸ್ವಿಯಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ..!

'ಗುರು' ಶ್ವಾನಕ್ಕೆ ಮಾದಕ ದ್ರವ್ಯಗಳನ್ನು ಪತ್ತೆ ಮಾಡಲು ತರಬೇತಿ ನೀಡಲಾಗಿದ್ದು 'ಮಾಯಾ'ಗೆ ಸ್ಫೋಟಕಗಳನ್ನು ಪತ್ತೆಹಚ್ಚಲು ಹೇಳಿದ ಪರೀಕ್ಷೆಯಲ್ಲಿ ಪಾಸ್‌ ಆಗಿದ್ದು, ವಿಮಾನಗಳಲ್ಲಿ ಸ್ಫೋಟಕಗಳು, ಮಾದಕ ದ್ರವ್ಯಗಳನ್ನು ಪತ್ತೆಹಚ್ಚಲು ಮತ್ತು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಾಮಗ್ರಿಗಳಲ್ಲಿ ಅಪಾಯಕಾರಿ ವಸ್ತುಗಳಿದ್ದರೆ ಗುರುತಿಸಲು ಶ್ವಾನಗಳನ್ನು ಬಳಸಲಾಗುತ್ತದೆ.

ಅಷ್ಟೇ ಅಲ್ಲದೇ ಸುರಕ್ಷಿತ ಪ್ರಯಾಣದ ಭರವಸೆ ಮೂಡಿಸುವುದು ವಿಮಾನ ನಿಲ್ದಾಣದ ಪ್ರಾಧಿಕಾರದ ಉದ್ದೇಶ್ ಈ ಕಾರಣಕ್ಕೆ ಹುಬ್ಬಳ್ಳಿಯ ವಿಮಾನ ನಿಲ್ದಾಣದ ಭದ್ರತೆ ಶ್ವಾನಗಳನ್ನು ಸೇರ್ಪಡೆ ಮಾಡಲಾಗಿದೆ.

ಭದ್ರತಾ ತಂಡದ ಶ್ವಾನದಳಕ್ಕೆ ಹೊಸ ತಳಿಗಳ ಸೇರ್ಪಡೆ ಸಮಯದಲ್ಲಿ ಭದ್ರತಾ ಪಡೆಯ ಮೂರನೇ ಬೆಟಾಲಿಯನ್‌ನ ಕಮಾಂಡೆಂಟ್‌ ಟಿ. ಫೈಜುದ್ದೀನ್‌, ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ ಠಾಕರೆ, ಇನ್‌ಸ್ಪೆಕ್ಟರ್‌ ಮಹೇಶ ಹುದ್ದಾರ್‌, ಪಿಎಸ್‌ಐ ಹನುಮಂತ ಕರಿ, ಶ್ವಾನ ನಿರ್ವಹಣಾ ಅಧಿಕಾರಿಗಳಾದ ಮಹೇಶ ದೊಡ್ಡಮನಿ, ರಮೇಶ ಉಪ್ಪಾರ, ಫಕೀರಪ್ಪ ಹುಲ್ಲೂರು ಹಾಗೂ ಮಂಜುನಾಥ ಡಿ. ಪಾಲ್ಗೊಂಡಿದ್ದರು.

Latest Videos
Follow Us:
Download App:
  • android
  • ios