ರೈತ ಉಮೇಶ ಶಿಂದೆ, ತಮ್ಮ 'ಚಂಡ' ಎಂಬ ಎತ್ತಿನ ಮೂರನೇ ವರ್ಷದ ಹುಟ್ಟುಹಬ್ಬವನ್ನು ಊರಿಗೆ ಊಟ ಹಾಕಿಸುವ ಮೂಲಕ ಅದ್ಧೂರಿಯಾಗಿ ಆಚರಿಸಿದ್ದಾರೆ. ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ ಈ ಕಾರ್ಯಕ್ರಮದಲ್ಲಿ ಸಾವಿರಾರು ಗ್ರಾಮಸ್ಥರು ಭಾಗವಹಿಸಿದ್ದರು.

ಬೆಳಗಾವಿ: ರೈತನೊಬ್ಬ ತಮ್ಮ ಮನೆ ಮಗನಂತೆ ಸಾಕಿದ ''ಚಂಡ'' ಎಂಬ ಎತ್ತಿನ ಮೂರನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಬಡ ರೈತ ಉಮೇಶ ಶಿಂದೆ ಅವರು ಈ ರೀತಿ ಊರಿಗೆ ಊಟ ಹಾಕಿಸಿ ಎತ್ತಿನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಬೃಹತ್ ಶಾಮಿಯಾನ, ರುಚಿಕರ ಭೋಜನದ ವ್ಯವಸ್ಥೆ, ಆಕಾಶದೆತ್ತರಕ್ಕೆ ಹಾರಿದ ಬಣ್ಣ ಬಣ್ಣದ ಪಟಾಕಿಗಳು ಎಲ್ಲರನ್ನು ಚಕಿತಗೊಳಿಸಿತು. 

ಗ್ರಾಮದಲ್ಲಿ ಹಬ್ಬದ ವಾತಾವರಣ

ತಮ್ಮ ಮನೆ ಮಗನಂತೆ ಸಾಕಿದ ''ಚಂಡ'' ಎಂಬ ಎತ್ತಿನ ಮೂರನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಎತ್ತಿಗೆ ವಿಶೇಷ ಅಲಂಕಾರ ಮಾಡಿ, ಕೇಕ್ ಕಟ್ ಮಾಡಿ, ಸಿಹಿ ಹಂಚಿ, ಗ್ರಾಮಸ್ಥರ ಜೊತೆಗೂಡಿ ಹಬ್ಬದ ವಾತಾವರಣ ನಿರ್ಮಿಸಿದರು. ಸಾವಿರಾರು ಮಂದಿ ಗ್ರಾಮಸ್ಥರು ಭಾಗಿಯಾಗಿ ''ಚಂಡ'' ಎತ್ತಿಗೆ ಆಶೀರ್ವಾದ ಕೋರಿದರು.

ಇದನ್ನೂ ಓದಿ: ಮಂಡ್ಯ: 11 ತಿಂಗಳ ಬಂಡೂರು ಕುರಿ ದಾಖಲೆಯ 1.35 ಲಕ್ಷ ರೂಗೆ ಮಾರಾಟ! ಬೆಂಗಳೂರು ಟೆಕ್ಕಿ ಖರೀದಿಸಿದ್ಯಾಕೆ?

ಎತ್ತು ಈಗ ಊರಿನ ಹೆಮ್ಮೆ 

ಮಹಾರಾಷ್ಟ್ರದ ಓಟದ ಮೈದಾನಗಳಲ್ಲಿ ಅಬ್ಬರಿಸಿ ಹೆಸರು ತಂದಿರುವ ಈ ಎತ್ತು ಈಗ ಊರಿನ ಹೆಮ್ಮೆಯಾಗಿದೆ. ರೈತನ ಹೃದಯದ ದೊಡ್ಡತನಕ್ಕೆ ಗ್ರಾಮಸ್ಥರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Davanagere: ಹೈ ಸ್ಪೀಡ್ ಮಣಿ ಹೆಸರಿನ ಟಗರು ಸಾವು; ಗ್ರಾಮದಲ್ಲಿ ಮೆರವಣಿಗೆ ಮಾಡಿ ಅಂತ್ಯಕ್ರಿಯೆ