ಬೆಳಗಾವಿ(ಆ.25): ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ನಗರದ ರಸ್ತೆಗಳೆಲ್ಲವೂ ಹದಗೆಟ್ಟಿವೆ. ಸಂಚಾರಕ್ಕೆ ಅಯೋಗ್ಯವಾಗಿವೆ. ಇದೇ ರೀತಿ​ಯಾಗಿ ಕೆಎಲ್‌ಇ ರಸ್ತೆಯಲ್ಲಿ ಬಿದ್ದಿರುವ ತೆಗ್ಗುಗುಂಡಿಗಳನ್ನು ಸಂಚಾರಿ ಪೊಲೀಸರು ಸ್ವತಃ ಗುದ್ದಲಿ, ಸಲಕೆ ಹಿಡಿದು ಮುಚ್ಚಿದ್ದಾರೆ.

ಕೆಎಲ್‌ಇ ರಸ್ತೆಯಲ್ಲಿ ಬಿದ್ದಿ​ರುವ ತೆಗ್ಗುಗುಂಡಿ ಮುಚ್ಚಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸಾರ್ವ​ಜ​ನಿ​ಕರು ಸಾಕಷ್ಟುಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದ​ರಿಂದ ದೊಡ್ಡ ಕಂದಕಗಳು ಸೃಷ್ಟಿಯಾಗಿದ್ದವು.

ಸ್ಫೋಟಕ ಪತ್ತೆ​ದಾರಿ ನೈನಾ ಇನ್ನು ನೆನಪು ಮಾತ್ರ, ಭಾವುಕರಾದ ಸಿಬ್ಬಂದಿ

ಈ ಮಾರ್ಗದಲ್ಲಿ ಕರ್ತವ್ಯದ ಮೇಲಿದ್ದ ಸಂಚಾರಿ ಪೊಲೀಸರು ಈ ರಸ್ತೆ ಮೇಲೆ ವಾಹನ ಚಾಲಕರ ಸಂಕಷ್ಟಅರಿತು, ತಾವೇ ಟ್ರ್ಯಾಕ್ಟರ್‌ ಮೂಲಕ ಮಣ್ಣು ತರಿಸಿ, ಗುದ್ದಲಿ, ಸಲಕೆ ಹಿಡಿದು ತೆಗ್ಗುಗಳನ್ನು ಮುಚ್ಚಿದರು. ಇವರ ಕಾರ್ಯಕ್ಕೆ ನಗ​ರದ ಜನರು ಮೆಚ್ಚುಗೆ ವ್ಯಕ್ತ​ಪ​ಡಿ​ಸಿದ್ದಾರೆ.

ತ್ರಿವಳಿ ತಲಾಖ್‌ ನಿಷೇಧ ಬಳಿಕ ರಾಜ್ಯದಲ್ಲಿ ಮೊದಲ ಪ್ರಕರಣ ದಾಖಲು

ಸಂಚಾರಕ್ಕೆ ಅಯೋಗ್ಯವಾದ ರಸ್ತೆಗಳಲ್ಲಿ ವಾಹನಗಳ ಅಪಘಾತಗಳು ಸಂಭವಿಸುತ್ತಲೇ ಇವೆ. ರಸ್ತೆಗಳನ್ನು ದುರಸ್ತಿ ಮಾಡುವು​ದನ್ನು ಬಿಡಿ ಕನಿಷ್ಠ ಮಟ್ಟರಸ್ತೆಗಳಲ್ಲಿ ಬಿದ್ದಿರುವ ತೆಗ್ಗು ಗುಂಡಿಗಳನ್ನು ಮುಚ್ಚುವ ಕಾರ್ಯವನ್ನೂ ಮಹಾನಗರ ಪಾಲಿಕೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಪಾಲಿಕೆ ಮಾಡಬೇಕಾದ ಕೆಲಸವನ್ನು ಸಂಚಾರಿ ಪೊಲೀಸರು ಮಾಡಿರುವುದು ಪ್ರಶಂಸೆಗೆ ಪಾತ್ರವಾಗಿದೆ.

Belagavi Traffic Police fills potholes