ಬಿಜೆಪಿ ಶಾಸಕ ದಂಪತಿ ಮೇಲೆ ಹೂಮಳೆ ಸುರಿಸಿ ಮೆರೆಸಿದ ಪೊಲೀಸರಿಗೆ ಸಂಕಷ್ಟ
* ಶಾಸಕ ಮಹಾಂತೇಶ ದೊಡಗೌಡರ ದಂಪತಿಗೆ ಪೊಲೀಸರಿಂದ ಪುಷ್ಪವೃಷ್ಟಿ ಪ್ರಕರಣ
* ಪುಷ್ಪವೃಷ್ಟಿ ಮಾಡಿದ ಪೊಲೀಸ್ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ
* ಶೋಕಾಸ್ ನೋಟಿಸ್ ಜಾರಿ ಮಾಡಿದ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ
ಬೆಳಗಾವಿ, (ಸೆ.04): ಹುಟ್ಟುಹಬ್ಬ ಹಿನ್ನೆಲೆ ಜಿಲ್ಲೆಯ ಕಿತ್ತೂರು ಶಾಸಕ ಹಾಗೂ ಶಾಸಕನ ಪತ್ನಿ ಮೇಲೆ ಹೂಮಳೆ ಸುರಿಸಿ ಮಹಾರಾಜನಂತೆ ಮೆರೆಸಿದ ಪೊಲೀಸರಿಗೆ ಸಂಕಷ್ಟ ಎದುರಾಗಿದೆ.
ಹೌದು...ಹುಟ್ಟುಹಬ್ಬ ಹಿನ್ನೆಲೆ ಶಾಸಕ ಮಹಾಂತೇಶ ದೊಡ್ಡಗೌಡರ ಮೇಲೆ ಹೂಮಳೆ ಸುರಿಸಿದ ಪೊಲೀಸರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
"
ಬೆಳಗಾವಿ; ಪೊಲೀಸರಿಂದ ಬಿಜೆಪಿ ಶಾಸಕರಿಗೆ ಹೂಮಳೆ... ಕೊರೋನಾ ರೂಲ್ಸ್ ಕೇಳೋರಿಲ್ಲ
ಬೈಲಹೊಂಗಲ ಡಿವೈಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಸಾತೇನಹಳ್ಳಿ, ನೇಸರಗಿ ಠಾಣೆ ಪಿಎಸ್ಐ ವೈ.ಎಸ್.ಶೀಗಿಹಳ್ಳಿಗೆ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಇಂದು (ಸೆ.04) ಶೋಕಾಸ್ ನೋಟಿಸ್ ನೀಡಿದ್ದಾರೆ.
ಕಿತ್ತೂರು ಬಿಜೆಪಿ ಶಾಸಕ ಮಹಾಂತೇಶ ದೊಡ್ಡಗೌಡರ ಹುಟ್ಟು ಹಿನ್ನೆಲೆ ಅವರ ನಿವಾಸಕ್ಕೆ ತೆರಳಿದ ಪೊಲೀಸ್ ಅಧಿಕಾರಿಗಳು ದಂಪತಿಯನ್ನ ರಾಜ-ರಾಣಿಯಂತೆ ಕೂರಿಸಿ ಹೂಮಳೆಗರೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. ಪೋಲಿಸ್ ಅಧಿಕಾರಿಗಳ ನಡೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.