ಬೆಳಗಾವಿ, (ಫೆ.25): ಅನಾರೋಗ್ಯಕ್ಕೆ ತುತ್ತಾಗಿ ಬೆಳಗಾವಿಯ ಯೋಧ ವಿಧಿವಶರಾಗಿದ್ದಾರೆ.

ಮಂಜುನಾಥ ಮುಸಲ್ಮಾರಿ(24) ವಿಧಿವಶರಾದ ಯೋಧ. ಮಂಜುನಾಥ ಮುಸಲ್ಮಾರಿ ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾವನೂರು ಗ್ರಾಮದವರಾಗಿದ್ದು, ದೆಹಲಿಯ ಆರ್‍ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸೋಲೊಪ್ಪದ ಪತ್ನಿ: ಹುತಾತ್ಮ ಗಂಡನ ಸಮವಸ್ತ್ರ ಧರಿಸಿ ಸೇನೆಗೆ ಸೇರ್ತಾರೆ ಗೌರಿ!

ಮಂಜುನಾಥ್ ಅವರು ಉತ್ತರ ಪ್ರದೇಶದ ಮೀರತ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇಂದು (ಸೋಮವಾರ) ಸ್ವಗ್ರಾಮ ಮಾವನೂರಿಗೆ ಮಂಜುನಾಥ್ ಅವರ ಪಾರ್ಥಿವ ಶರೀರ ಆಗಮಿಸಲಿದೆ.  ಬಳಿಕ ಅಂತ್ಯ ಸಂಸ್ಕಾರ ನಡೆಯಲಿದೆ.

ಹುತಾತ್ಮ ಯೋಧನ ಮನೆಯಲ್ಲಿ ಕುಟುಂಬಸ್ಥರು ಆಕ್ರಂದನ ಮುಗಿಲುಮುಟ್ಟಿದೆ.