Asianet Suvarna News Asianet Suvarna News

Hubballi: ಫ್ಲೈಓವರ್ ಕಾಮಗಾರಿ ವೇಳೆ ನಡೆದ ಅವಘಡ: ಯುವಕನ ಎದೆ ಸೀಳಿದ ಕಬ್ಬಿಣದ ರಾಡು

ಹುಬ್ಬಳ್ಳಿ ನಗರದಲ್ಲಿ ನಡೆಯುತ್ತಿರುವ ಪ್ಲೈಓವರ್ ಕಾಮಗಾರಿ ವೇಳೆ ಬಾರಿ ಅವಘಡವೊಂದು ಸಂಭವಿಸಿದೆ.   ಕಾಲು ಜಾರಿ ಬಿದ್ದ ಕಾರ್ಮಿಕನೊಬ್ಬ ಎದೆಯಲ್ಲಿ ಕಬ್ಬಿಣ ಸರಳು ನಾಟಿದ್ದು, ಕಾರ್ಮಿಕ ಸಾವು ಬದುಕಿನ‌ ಮಧ್ಯೆ ಹೋರಾಟ ನಡೆಸಿದ್ದಾನೆ.

accident during flyover work an iron rod penetrated the chest of a young man at hubballi gvd
Author
First Published Dec 28, 2022, 8:24 AM IST

ಹುಬ್ಬಳ್ಳಿ (ಡಿ.28): ನಗರದಲ್ಲಿ ನಡೆಯುತ್ತಿರುವ ಪ್ಲೈಓವರ್ ಕಾಮಗಾರಿ ವೇಳೆ ಬಾರಿ ಅವಘಡವೊಂದು ಸಂಭವಿಸಿದೆ.   ಕಾಲು ಜಾರಿ ಬಿದ್ದ ಕಾರ್ಮಿಕನೊಬ್ಬ ಎದೆಯಲ್ಲಿ ಕಬ್ಬಿಣ ಸರಳು ನಾಟಿದ್ದು, ಕಾರ್ಮಿಕ ಸಾವು ಬದುಕಿನ‌ ಮಧ್ಯೆ ಹೋರಾಟ ನಡೆಸಿದ್ದಾನೆ. ಹುಬ್ಬಳ್ಳಿಯ ಹೊಸೂರು ಸರ್ಕಲ್ ಬಳಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿಯ ವೇಳೆ ಈ ಘಟನೆ ನಡೆದಿದ್ದು, ಫ್ಲೈಓವರ್ ಮೇಲಿಂದ ಕಬ್ಬಿಣದ ರಾಡ್ ಯುವಕನ ಬಲಗಡೆಯ ಎದೆ ಭಾಗ ಸೀಳಿಕೊಂಡ ಬೆನ್ನಲ್ಲಿ ಹೊರ ಬಂದಿದೆ. ಗಾಯಾಳುವನ್ನು ಕೊಲ್ಕತ್ತಾ ಮೂಲದ ಅಬ್ದುಲ್ ಗಫರ್ ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಕಾರ್ಮಿಕನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲು ಮಾಡಲಾಗಿದೆ.

ಹೊಸೂರು ಸರ್ಕಲ್ ಬಳಿ ನಡೆಯುತ್ತಿರುವ ಪ್ಲೈಓವರ್ ಕಾಮಗರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ, ಮೇಲಿಂದ ಕಬ್ಬಿಣದ ರಾಡ್ ಅಬ್ದುಲ್‌ನ ಬಲ ಎದೆಯನ್ನು ಸೀಳಿದ ಪರಿಣಾಮ ಅಬ್ದುಲ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಅಲ್ಲೇ ಕೆಲಸ ಮಾಡುತ್ತಿದ್ದ ಸಹ ಕಾರ್ಮಿಕರು ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಸಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದಾರೆ, ಸದ್ಯ ಅಬ್ದುಲ್‌ನ ಎದೆಯಲ್ಲಿ ಸಿಕ್ಕಿರುವ ರಾಡ್ ನೋಡಿ ವೈದ್ಯರೇ ನೋಡಿ ಬೆಚ್ಚಿ ಬಿದ್ದಿದ್ದು ಆತನಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ.

Ramanagara: ರಾಗಿ ಬೆಂಬಲ ಬೆಲೆ ನೋಂದ​ಣಿ​ಯಲ್ಲಿ ಕುಸಿತ!

ಬೈಕ್‌ ಹಂಫ್ಸ್‌ ಎಗರಿ ಅಪಘಾತ: ಅತಿವೇಗ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಾಲನೆ ಮಾಡಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಎಚ್‌ಎಸ್‌ಆರ್‌ ಲೇಔಟ್‌ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೆ.ಪಿ.ನಗರದ ಎಸ್‌ಎಂಎಸ್‌ ಲೇಔಟ್‌ ನಿವಾಸಿ ಬಿ.ಪಿ.ಪ್ರವೀಣ್‌ ಕುಮಾರ್‌ (48) ಮೃತ ಸವಾರ. ಶನಿವಾರ ಮುಂಜಾನೆ 3.30ರ ಸುಮಾರಿಗೆ ಎಚ್‌ಎಸ್‌ಆರ್‌ ಲೇಔಟ್‌ನ 24ನೇ ಮುಖ್ಯರಸ್ತೆ ಅಲಂಕಾರ್‌ ಪ್ಲಾಜಾ ಎದುರು ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ ತೊಲಗಿಸಿ ಕಾಂಗ್ರೆಸನ್ನು ಅಧಿಕಾರಕ್ಕೆ ತನ್ನಿ: ಶಾಸಕ ನರೇಂದ್ರ

ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ಬಿ.ಪಿ.ಪ್ರವೀಣ್‌ ಕುಮಾರ್‌, ತಮ್ಮ ದ್ವಿಚಕ್ರ ವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬರುವಾಗ ರಸ್ತೆ ಉಬ್ಬು ಗಮನಿಸಿಲ್ಲ. ಹೀಗಾಗಿ ರಸ್ತೆ ಉಬ್ಬಿನಲ್ಲಿ ದ್ವಿಚಕ್ರ ವಾಹನ ಎಗರಿ ರಸ್ತೆ ಮೇಲೆ ಬಿದ್ದ ಪರಿಣಾಮ ಸವಾರ ಪ್ರವೀಣ್‌ ಕುಮಾರ್‌ ತಲೆ, ಕೈ-ಕಾಲುಗಳಿಗೆ ಗಂಭೀರ ಪೆಟ್ಟು ಬಿದ್ದಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಸಂಬಂಧ ಎಚ್‌ಎಸ್‌ಆರ್‌ ಲೇಔಟ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios