Asianet Suvarna News Asianet Suvarna News

ಮೂವರು ಗಣ್ಯರನ್ನು ಕಳೆದುಕೊಂಡ ಬೆಳಗಾವಿ: ಸಚಿವ ಸಿ.ಸಿ.ಪಾಟೀಲ

ಆನಂದ ಮಾಮನಿಯವರ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಮಾತೋಶ್ರೀ ಗಂಗಮ್ಮ ತಾಯಿ ಹಾಗೂ ಅವರು ಕುಟುಂಬದವರೊಂದಿಗೆ ಚರ್ಚಿಸಿ ಸಾಂತ್ವನ ಹೇಳಿದ ಸಚಿವ ಸಿ.ಸಿ.ಪಾಟೀಲ 

Belagavi Lost Three Dignitaries Says Minister CC Patil grg
Author
First Published Oct 28, 2022, 10:30 AM IST

ಸವದತ್ತಿ(ಅ.28):  ಬೆಳಗಾವಿ ಜಿಲ್ಲೆಗೆ ಒಂದು ಕೆಟ್ಟಗಳಿಗೆ ಬಂದಂತಾಗಿದ್ದು, ಬಿಜೆಪಿಯಲ್ಲಿನ ಸುರೇಶ ಅಂಗಡಿ, ಉಮೇಶ ಕತ್ತಿ ಸೇರಿದಂತೆ ಇಂದು ಆನಂದ ಮಾಮನಿಯಂತ ಪ್ರಮುಖ ವ್ಯಕ್ತಿಗಳನ್ನು ನಾವು ಕಳೆದುಕೊಂಡು ಸಂಕಟ ಪಡುವಂತಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಸಂತಾಪ ವ್ಯಕ್ತಪಡಿಸಿದರು.

ಪಟ್ಟಣದ ಆನಂದ ಮಾಮನಿಯವರ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಅವರು ಮಾತೋಶ್ರೀ ಗಂಗಮ್ಮ ತಾಯಿ ಹಾಗೂ ಅವರು ಕುಟುಂಬದವರೊಂದಿಗೆ ಚರ್ಚಿಸಿ ಸಾಂತ್ವನ ಹೇಳಿದರು. ಆನಂದ ಮಾಮನಿ ಒಬ್ಬ ವಿಶಿಷ್ಟವ್ಯಕ್ತಿಯಾಗಿದ್ದು, ತಾಲೂಕಿನ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಆಸಕ್ತಿಯುಳ್ಳವರಾಗಿದ್ದರು. ಅವರ ಕಡೆಯ ದಿನಗಳಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಭೇಟಿಯಾದಾಗ ತಮ್ಮೊಂದಿಗೆ ಉತ್ತಮವಾಗಿ ಮಾತನಾಡಿ ಕ್ಷೇತ್ರದ ಬಗ್ಗೆ ತಾಲೂಕಿನ ರಸ್ತೆಯ ಬಗ್ಗೆಯೇ ಚಿಂತನೆ ಮಾಡಿದಂತ ವ್ಯಕ್ತಿ ಅವರು. ಆನಂದ ಮಾಮನಿಯವರ ಪತ್ನಿ ರತ್ನಾ ಮಾಮನಿ ಸೇರಿದಂತೆ ಮಾಮನಿ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿದರು.

ಬೆಳಗಾವಿ: ಕಲುಷಿತ ನೀರು ಕುಡಿದು 2 ಸಾವು, 94 ಮಂದಿ ಅಸ್ವಸ್ಥ

ಈ ಸಂದರ್ಭದಲ್ಲಿ ಹಣ್ಣಿಕೇರಿಯ ಮಹಾಸ್ವಾಮೀಜಿ, ಜಗದೀಶ ಶಿಂತ್ರಿ, ವಿರುಪಾಕ್ಷ ಮಾಮನಿ, ಮಲ್ಲಿಕಾರ್ಜುನ ಮಾಮನಿ, ಚಿನ್ಮಯ ಮಾಮನಿ, ಕುಮಾರಸ್ವಾಮಿ ತಲ್ಲೂರಮಠ, ಬಿ.ವಿ.ಮಲಗೌಡರ ಉಪಸ್ಥಿತರಿದ್ದರು.
 

Follow Us:
Download App:
  • android
  • ios