ಮೈಸೂರು(ಜು.17) : ಮೊದಲ ಮಗ ಆಗಬೇಡ, ಕೊನೆಯ ಭಾಷಣ ಮಾಡಬೇಡ ಅಂತ ನಮ್ಮ ಕನ್ನಡ ಮೇಷ್ಟ್ರು ಹೇಳುತ್ತಿದ್ದರು. ನಾನು ಮೊದಲ ಮಗನಾಗಿ ಕಷ್ಟಅನುಭವಿಸಿದ್ದೇನೆ. ಅದು ಯಾರಿಗೂ ಬೇಡ, ಅದನ್ನು ಇಲ್ಲಿ ಹೇಳುವ ಸಂದರ್ಭವೂ ಅಲ್ಲ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು.

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಶ್ರೀ ಜಯಚಾಮರಾಜ ಅರಸು ಎಜುಕೇಷನ್‌ ಟ್ರಸ್ಟ್‌ ಮಂಗಳವಾರ ಆಯೋಜಿಸಿದ್ದ ಶ್ರೀ ಜಯಚಾಮರಾಜ ಒಡೆಯರ್‌ ಅವರ ಜನ್ಮ ಶತಮಾನೋತ್ಸವದಲ್ಲಿ ಮಾತನಾಡಿ, ರಾಜ್ಯಕ್ಕೆ ಜಯಚಾಮರಾಜ ಒಡೆಯರ್‌ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆ ಎಲ್ಲಾ ಕಡೆ ಇದೆ ಎಂದರು.

ಕರ್ನಾಟಕದ ಏಕೀಕರಣಕ್ಕೂ ಜಯಚಾಮರಾಜ ಒಡೆಯರ್‌ ಅವರ ಕೊಡುಗೆ ಅಪಾರ. ಅವರ ಬಗ್ಗೆ ಹೇಳಲು ಗಂಟೆಗಳು ಸಾಲದು. ಅವರು ಕಟ್ಟಿಕೊಟ್ಟಸುವರ್ಣ ಯುಗವನ್ನು ನಾವು ಮತ್ತೆ ನೋಡಬೇಕು. ಅದಕ್ಕಾಗಿ ನಾವು ಹಾಕಿಕೊಳ್ಳುವ ಯೋಜನೆ ಮುಖ್ಯ. ನಾವು ಮುಂದಿನ ಯುವ ಪೀಳಿಗೆಗೆ ಸುವರ್ಣ ಯುಗವನ್ನ ಕಟ್ಟಲು ಈಗಿನಿಂದಲೂ ಕಾರ್ಯಾಚಾರಣೆ ಆರಂಭಿಸಬೇಕು ಎಂದು ಅವರು ಹೇಳಿದರು.

ಸಾಮಾನ್ಯರಂತೆ ಪತ್ನಿಯೊಂದಿಗೆ ಮಾರ್ಕೆಟ್ ಗೆ ಹೋಗಿ ಹಣ್ಣು-ತರಕಾರಿ ಕೊಂಡ ಮಹಾರಾಜ