Asianet Suvarna News Asianet Suvarna News

'ಕಾಂಗ್ರೆಸ್‌ ನಾಯಕನ ನಡವಳಿಕೆಯೇ ಹಾಸ್ಯಾಸ್ಪದಳ: ಇನ್ಮೇಲಾದ್ರೂ ಕೆಳಮಟ್ಟದ ರಾಜಕಾರಣ ಬಿಡಿ'

*  ಅಭಿವೃದ್ಧಿ ಬಗ್ಗೆ ಕೋನರಡ್ಡಿ ಅವರ ಕಾಳಜಿ ಮೆಚ್ಚತಕ್ಕದ್ದು
*  ಈ ರೀತಿ ಮನವಿ ಕೊಡುವ ಮೊದಲು ಯೋಚಿಸಿದರೆ ಉತ್ತಮ 
*  ಇನ್ನು ಮೇಲಾದರೂ ಕೆಳಮಟ್ಟದ ರಾಜಕಾರಣ ಮಾಡೋದನ್ನ ಬಿಡಬೇಕು 
 

Behavior of the Congress Leader is Ridiculous Says BJP Leaders at Navalgund in Dharwad grg
Author
Bengaluru, First Published Jan 16, 2022, 11:37 AM IST

ಹುಬ್ಬಳ್ಳಿ(ಜ.15):  ಸರ್ಕಾರದಿಂದ ಮಂಜೂರಾದ, ಹಣ ಬಿಡುಗಡೆಯಾಗಿರುವ, ಟೆಂಡರ್‌ ಪ್ರಕ್ರಿಯೆಯಲ್ಲಿರುವ ರಸ್ತೆಗಳ ಅಭಿವೃದ್ಧಿ ಮಾಡಿ ಎಂದು ಹೇಳುವುದು ಹಾಸ್ಯಾಸ್ಪದ. ಈ ರೀತಿ ಕೆಲಸಗಳನ್ನು ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ(NH Konareddy) ಮಾಡಬಾರದು ಎಂದು ನವಲಗುಂದ ಬಿಜೆಪಿ(BJP) ಘಟಕ ಹಾಗೂ ರೈತರು(Farmers) ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಬಿಜೆಪಿ ಹಾಗೂ ರೈತ ಮುಖಂಡರು, ಕೋನರಡ್ಡಿ ನವಲಗುಂದ ವಿಧಾನಸಭಾ ಕ್ಷೇತ್ರದ ಕೆಲವೊಂದಿಷ್ಟು ರಸ್ತೆಗಳ ಅಭಿವೃದ್ಧಿ ಮಾಡುವಂತೆ ಒತ್ತಾಯಿಸಿ ಜಿಪಂಗೆ ಮನವಿ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೋನರಡ್ಡಿ ಅವರ ಕಾಳಜಿ ಮೆಚ್ಚತಕ್ಕದ್ದು. ಆದರೆ ಈ ರೀತಿ ಮನವಿ ಕೊಡುವ ಮೊದಲು ಯೋಚಿಸಿದರೆ ಉತ್ತಮ ಎಂದು ಸಲಹೆ ನೀಡಿದ್ದಾರೆ.

ಈಗ ಕೋನರಡ್ಡಿ ಯಾವ್ಯಾವ ರಸ್ತೆಗಳ ಅಭಿವೃದ್ಧಿಯಾಗಬೇಕೆಂದು ಕೋರಿ ಪಟ್ಟಿ ಮಾಡಿ ಮನವಿ ಮಾಡಿದ್ದಾರೆ. ಅವರು ಯಾವ್ಯಾವ ರಸ್ತೆಗಳ ಹೆಸರು ಹಾಕಿ ಪಟ್ಟಿ ಸಲ್ಲಿಸಿದ್ದಾರೋ ಆ ರಸ್ತೆಗಳಲ್ಲಿ ಬಹುತೇಕ ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆದಿದೆ. ಇದರೊಂದಿಗೆ ಕೆಲವೊಂದಿಷ್ಟು ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದಲೂ(Govenment of Karnataka) ಹಣ ಬಿಡುಗಡೆಯಾಗಿದೆ. ಟೆಂಡರ್‌(Tender) ಪ್ರಕ್ರಿಯೆ ನಡೆದಿದೆ. ಅದು ಮುಗಿದ ಮೇಲೆ ಕೆಲಸ ಶುರುವಾಗಲಿದೆ. ಕ್ಷೇತ್ರದಲ್ಲಿ ನೀರಾವರಿ ಇಲಾಖೆಯಿಂದ 20 ಕೋಟಿ ಮಂಜೂರಾಗಿದೆ. ಆರ್‌ಡಿಪಿಆರ್‌ ಇಲಾಖೆಯಿಂದ(Department of RDPR) 17 ಕೋಟಿ ಮಂಜೂರಾಗಿದೆ. ಇನ್ನೂ ಕೇಂದ್ರದ ಗ್ರಾಮ ಸಡಕ ಯೋಜನೆಯಿಂದ(Pradhan Mantri Gram Sadak Yojana) 50 ಕೋಟಿ ಕೆಲಸಗಳು ನಡೆಯುತ್ತಿವೆ ಎಂದು ವಿವರಿಸಿದ್ದಾರೆ.

Dharwad: ಬ್ರಿಟಿಷ್‌ ಸರ್ಕಾರದಲ್ಲೇ ಸ್ಥಾಪಿತವಾದ ಡಿಮ್ಹಾನ್ಸ್‌ ಮೇಲ್ದರ್ಜೆಗೇರಿಸುವುದ್ಯಾವಾಗ?

ಆದರೆ ಕೋನರಡ್ಡಿ ಅವರು ಯಾವುದೋ ಮೂಲಗಳಿಂದ ಯಾವ್ಯಾವ ರಸ್ತೆ ಅಭಿವೃದ್ಧಿಗೆ ಮಂಜೂರಾಗಿದೆ ಎಂಬುದು ತಿಳಿದುಕೊಳ್ಳುತ್ತಾರೆ. ಎಷ್ಟೆಷ್ಟು ಹಣ ಬಿಡುಗಡೆಯಾಗಿದೆ ಎಂಬುದನ್ನು ಅರಿತುಕೊಳ್ಳುತ್ತಾರೆ. ಬಳಿಕ ಆ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಎಂದು ಸಂಬಂಧಪಟ್ಟ ಇಲಾಖೆಗೆ ಒತ್ತಾಯಿಸಿ ಮನವಿ ಸಲ್ಲಿಸುತ್ತಾರೆ. ಇದು ಅತ್ಯಂತ ಹಾಸ್ಯಾಸ್ಪದವಾಗಿದೆ. ಇದು ಜನತೆಗೂ ಗೊತ್ತಾಗುತ್ತದೆ ಎಂಬುದನ್ನು ಕೋನರಡ್ಡಿ ಅರಿತುಕೊಳ್ಳಬೇಕು. ಇನ್ನೂ ಮೇಲಾದರೂ ಈ ರೀತಿ ಕೆಳಮಟ್ಟದ ರಾಜಕಾರಣ(Politics) ಮಾಡುವುದನ್ನು ಬಿಡಬೇಕು ಎಂದು ಬಿಜೆಪಿ ತಾಲೂಕಾಧ್ಯಕ್ಷ ಎಸ್‌.ಬಿ. ದಾನಪ್ಪಗೌಡರ, ರೈತ ಮೋರ್ಚಾ ಅಧ್ಯಕ್ಷ ಬಸಣ್ಣ ಹಸಬಿ, ಕಬ್ಬು ಬೆಳೆಗಾರರ ರಾಜ್ಯ ಸಮಿತಿ ಸದಸ್ಯ ಬಸಣ್ಣ ಬೆಳವಣಿಕೆ, ಮೃತ್ಯುಂಜಯ ಹಿರೇಮಠ ಕೋನರಡ್ಡಿ ಅವರಿಗೆ ಸಲಹೆ ಮಾಡಿದ್ದಾರೆ.

ಮೇಯರ್‌, ಉಪ ಮೇಯರ್‌ ಚುನಾವಣೆ ನಡೆಸಿ

ಧಾರವಾಡ:  ಹು-ಧಾ ಮಹಾನಗರ ಪಾಲಿಕೆ(Hubballi-Dharwad City Corporation) ಚುನಾವಣೆಯಾಗಿ(Election) ನಾಲ್ಕೈದು ತಿಂಗಳು ಕಳೆದರೂ ಇನ್ನೂ ಮೇಯರ್‌- ಉಪ ಮೇಯರ್‌ ಚುನಾವಣೆ ಇಲ್ಲ. ಜೊತೆಗೆ ಇತ್ತೀಚೆಗೆ ನಡೆದ ಅಣ್ಣಿಗೇರಿ ಪುರಸಭೆಯಲ್ಲಿ ಕಾಂಗ್ರೆಸ್‌ ಸ್ಪಷ್ಟಬಹುಮತ ಸಾಧಿಸಿದರೂ ಮೀಸಲಾತಿ ನಿಗದಿ ಪಡಿಸಿ ಚುನಾವಣೆ ನಡೆಸಲು ಮೀನಮೇಷ ಎಣಿಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಮಾಜಿ ಶಾಸಕ, ಕಾಂಗ್ರೆಸ್‌(Congress) ಮುಖಂಡ ಎನ್‌.ಎಚ್‌. ಕೋನರಡ್ಡಿ ಪ್ರಶ್ನಿಸಿದ್ದಾರೆ.

Covid 19 Spike: ಇಂದಿನಿಂದ 1-8ನೇ ಭೌತಿಕ ತರಗತಿ ಬಂದ್‌

ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಅವರು, ಮಹಾನಗರ ಪಾಲಿಕೆ ಚುನಾವಣೆಯನ್ನೇ ಎರಡು ವರ್ಷಗಳ ಕಾಲ ತಡವಾಗಿ ಮಾಡಲಾಗಿದೆ. ಜೊತೆಗೆ ಚುನಾವಣೆಯಾಗಿ ಸದಸ್ಯರು ಆಯ್ಕೆಯಾಗಿ ನಾಲ್ಕು ತಿಂಗಳು ಕಳೆದರೂ ಇನ್ನೂ ಅಧಿಕಾರ ಸ್ವೀಕರಿಸಿಲ್ಲ. ಜೊತೆಗೆ ಮೇಯರ್‌, ಉಪ ಮೇಯರ್‌ ಚುನಾವಣೆಗೆ ಮೀಸಲಾತಿ ಘೋಷಣೆಯಾದರೂ ಅದನ್ನು ಮಾಡುತ್ತಿಲ್ಲ. ಇದು ಬಿಜೆಪಿ ಪಕ್ಷದ ಹುನ್ನಾರವಲ್ಲದೇ ಮತ್ತೇನು? ಎಂದು ಕೋನರಡ್ಡಿ ಪ್ರಶ್ನಿಸಿದ್ದಾರೆ.

ಇನ್ನು, ಅಣ್ಣಿಗೇರಿ ಪುರಸಭೆಯಲ್ಲಿ ಕಾಂಗ್ರೆಸ್‌ 12 ಸ್ಥಾನಗಳನ್ನು ಗೆದ್ದಿದೆ. ಜೊತೆಗೆ ಅದೇ ದಿನವೇ ಇಬ್ಬರು ಪಕ್ಷೇತರರು ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ. ಬಹುಮತಕ್ಕೆ 13 ಸ್ಥಾನಗಳು ಬೇಕಿದ್ದು, ಬಿಜೆಪಿ ಈ ವಿಷಯದಲ್ಲಿ ತಂತ್ರ ಹೂಡುತ್ತಿದೆ. ಆದ್ದರಿಂದ ಕೂಡಲೇ ಮೀಸಲಾತಿ ಘೋಷಣೆ ಮಾಡಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನಡೆಸಬೇಕು. ಇಲ್ಲದೇ ಹೋದಲ್ಲಿ ಹೋರಾಟ ನಿಶ್ಚಿತ ಎಂದು ಕೋನರಡ್ಡಿ ಎಚ್ಚರಿಕೆ ನೀಡಿದರು.
 

Follow Us:
Download App:
  • android
  • ios