Asianet Suvarna News Asianet Suvarna News

ಕೋವಿಡ್ ಬಳಿಕ ಬೆಂಗಳೂರಲ್ಲಿ ಹೆಚ್ಚಾಗಿದೆ ಭಿಕ್ಷುಕರ ಸಂಖ್ಯೆ!

ಬೆಂಗಳೂರಿನಲ್ಲಿ  Covid 19 ನಂತರ   ಭಿಕ್ಷುಕರ ಸಂಖ್ಯೆ ಹೆಚ್ಚುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.  

beggars number increased after covid 19 In bengaluru gow
Author
Bengaluru, First Published Jun 3, 2022, 8:42 PM IST

ಬೆಂಗಳೂರು (ಜೂ.3): ನಗರದಲ್ಲಿ Covid 19 ಬಳಿಕ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕೊರೋನ ನಂತರ ನಗರದಲ್ಲಿ  ಹೆಚ್ಚುತ್ತಿದೆ ಭಿಕ್ಷುಕರ ಸಂಖ್ಯೆ. ಬೆಂಗಳೂರು ಸಂಚಾರ ಪೊಲೀಸರ (bengaluru traffic police) ವಿಶೇಷ ಕಾರ್ಯಾಚರಣೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಕೈಕಾಲು ಗಟ್ಟಿ ಇದ್ದವರೂ ಕೂಡ ಭಿಕ್ಷೆ ಬೇಡುತ್ತಿದ್ದು, ಭಿಕ್ಷುಕರಿಂದ ಟ್ರಾಫಿಕ್ ಜಾಂ ಕೂಡ ಹೆಚ್ಚಾಗ್ತಿದೆ‌ ಎಂದು ಸಂಚಾರ ಪೊಲೀಸರ ಸ್ಪೆಷಲ್ ಡ್ರೈವ್ ನಲ್ಲಿ ಪತ್ತೆಯಾಗಿದೆ. ಭಿಕ್ಷುಕರು ಕೂಡ ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ. ರಸ್ತೆಯಲ್ಲಿ ಬೇಕಾಬಿಟ್ಟಿ ಓಡಾಡುವ ಭಿಕ್ಷುಕರು ,ನಿರ್ಗತಿಕರನ್ನ ಗುರುತಿಸಿ ಪುನರ್ವಸತಿ ಕೇಂದ್ರಕ್ಕೆ (Rehabilitation Center) ರವಾನೆ ಮಾಡುವ ಕೆಲಸವನ್ನ ಸಂಚಾರ ಪೊಲೀಸರು ಮಾಡ್ತಿದ್ದಾರೆ.

ಆಟೋ ರಾಜ ನಡೆಸುತ್ತಿರುವ ಹೋಪ್  ಆಫ್ ಹೋಮ್ಸ್ ಸಂಸ್ಥೆ ಗೆ ಭಿಕ್ಷುಕರನ್ನ ಕರೆ ತಂದು ಅವರ ಆರೈಕೆ ಮಾಡಲಾಗ್ತಿದೆ‌. ಕೇವಲ ಎರಡು ಗಂಟೆಯ ಕಾರ್ಯಾಚರಣೆಯಲ್ಲಿ 24 ಜನ ಭಿಕ್ಷುಕರನ್ನ ಪುನರ್ವಸತಿ ಕೇಂದ್ರಕ್ಕೆ ಯಲಹಂಕ ಸಂಚಾರ ಪೊಲೀಸ್ರು ಕಳುಹಿಸಿದ್ದು, ಪೊಲೀಸರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ಯವಾಗುತ್ತಿದೆ.

ರಾಜಕೀಯ ವಿದ್ಯಮಾನಗಳ ಬಗ್ಗೆ ಟ್ವೀಟ್, KSRDPRU GUEST FACULTY ಅಮಾನತಿಗೆ ಆಗ್ರಹ

ಭಿಕ್ಷುಕರನ್ನ ಗುರುತಿಸಿ ಅವರ ಪೂರ್ವಾಪರ ವಿಚಾರದ ವೇಳೆ ಹ್ಯೂಮನ್ ಟ್ರಾಫಿಕಿಂಗ್ ಬಗ್ಗೆ ಕೂಡ ಗಮನ  ಪೊಲೀಸರು ಗಮನ ಹರಿಸುತ್ತಿದ್ದಾರೆ. ಮಾನವ ಕಳ್ಳಸಾಗಾಣಿಕೆ ಮಾಡಿ ಅವರಿಂದ ಭಿಕ್ಚೆ ಬೇಡಿಸಿ ಹಣ ಸಂಪಾದಿಸುವ  ಜಾಲ ಕೂಡ ನಗರದಲ್ಲಿದ್ದು ಈ ಹಿಂದೆ ಕೂಡ ಚೈಲ್ಡ್ ಟ್ರಾಫಿಕಿಂಗ್ , ಹ್ಯೂಮನ್ ಟ್ರಾಫಿಕಿಂಗ್ ಜಾಲವನ್ನ  ಪೊಲೀಸರು ಪತ್ತೆಮಾಡಿದ್ದರು.

ಈ ಹಿನ್ನಲೆ ಭಿಕ್ಷುಕರನ್ನ ಗುರುತಿಸಿ ಪುನರ್ವಸತಿ ಕಳಿಸುವ ಕಾರ್ಯಾಚರಣೆ ಜೊತೆಗೆ ಮಾನವ ಕಳ್ಳಸಾಗಾಣಿಕೆ ಬಗ್ಗೆಯೂ ಸಂಚಾರ ಪೊಲೀಸರು ಮಾಹಿತಿ ಕಲೆ ಹಾಕ್ತಿದ್ದಾರೆ.

Hijab Row; ಎರಡು ದಿನ ಗಡುವು, ಸಮನ್ವಯ ಸಮಿತಿ ಹೆಸರಲ್ಲಿ ಫೀಲ್ಡಿಗಿಳಿತಾ ಸಿಎಫ್ ಐ? 

Bengaluru Flyoverಗಳು ಎಷ್ಟು ಸುರಕ್ಷಿತ?: ತುಮಕೂರು - ಬಳ್ಳಾರಿ ರಸ್ತೆ ಸಂಪರ್ಕ ಕಲ್ಪಿಸೋ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಕಥೆ ಗೊತ್ತೇ. ಮೇಲ್ಸೇತುವೆಯ 102 ಮತ್ತು 103ನೇ ಪಿಲ್ಲರ್ ಮಧ್ಯೆ ಕೇಬಲ್ ಸಮಸ್ಯೆ ಕಂಡು ಬಂದ ಹಿನ್ನಲೆ ಫ್ಲೈ ಓವರ್ ನಲ್ಲಿ ಹೆವಿ ವೆಹಿಕಲ್ಸ್ ಓಡಾಡಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ವಾಹನ ಸವಾರರು ಫ್ಲೈಓವರ್ ( flyovers) ಮೇಲೆ ಸಂಚರಿಸಲು ಭಯಭೀತರಾಗಿದ್ದಾರೆ.

ಇದರ ಬೆನ್ನಲ್ಲೆ ಬಿಬಿಎಂಪಿಗೂ ಫ್ಲೈಓವರ್ (BBMP  flyover) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪೀಣ್ಯ ಫ್ಲೈಓವರ್ ಡ್ಯಾಮೇಜ್ ಆದ  ಬೆನ್ನಲ್ಲೇ ಬಿಬಿಎಂಪಿ (Bruhat Bengaluru Mahanagara Palike -BBMP) ಅಧಿಕಾರಿಗಳಲ್ಲಿ  ರಾಜಧಾನಿ ಫ್ಲೈಓವರ್ ಗಳ ಸೇಫ್ಟಿ ಬಗ್ಗೆ ಆತಂಕ ಹೆಚ್ಚಾಗಿದೆ. ಹೀಗಾಗಿ ನಗರದಲ್ಲಿರುವ ಎಲ್ಲಾ ಮೇಲ್ಸೇತುವೆಗಳ ಸದೃಢತೆ ಪರಿಶೀಲನೆಗೆ ಮುಂದಾಗಿದೆ. ಡೇಂಜರ್ ಫ್ಲೈಓವರ್ ಯಾವ್ಯಾವುದು, ಅವುಗಳ ಸ್ಥಿತಿ ಹೇಗಿದೆ, ಎಷ್ಟು ವರ್ಷ ಹಳೆಯವು ಎಂದು ಪರಿಶೀಲನೆ ನಡೆಸ್ತಿದೆ. ಇದಕ್ಕಾಗಿ ಇನ್ ಫ್ರಾ ಕಂಪೆನಿಗೆ ಟೆಂಡರ್ ನೀಡಲಾಗಿದೆ. 

BENGALURU; ಬಿಲ್ ಕೇಳಿದಕ್ಕೆ‌ ಆಸ್ಪತ್ರೆ ಉಡಾಯಿಸುವುದಾಗಿ ಬೆದರಿಕೆ!

ನಗರದಲ್ಲಿ ಬಿಬಿಎಂಪಿ, ನಗರಾಭಿವೃದ್ಧಿ ಇಲಾಖೆ, ಬಿಡಿಎ,ಸೇರಿ ವಿವಿಧ ಇಲಾಖೆಗಳಿಂದ ಒಟ್ಟು 44 ಮೇಲ್ಸೇತುವೆಗಳ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಬಹುತೇಕ ಫ್ಲೈಓವರ್ ಗಳು 20 ವರ್ಷಕ್ಕೂ ಹಳೆಯದಾಗಿವೆ. ಹೀಗಾಗಿ ಹಲವು ಫ್ಲೈಓವರ್ ಗಳು ಹಾಳಾಗಿರುವ ಹಿನ್ನೆಲೆ ಪರಿಶೀಲನೆ ಮಾಡಲಾಗ್ತಿದೆ. 

ಮೇಲ್ಸೇತುವೆಗಳ ಬೀಮ್, ಪಿಲ್ಲರ್ ಹಾಗೂ ಇನ್ನಿತರ ಅಂಶಗಳನ್ನು ವೈಜ್ಞಾನಿಕ ಮಾದರಿಯಲ್ಲಿ ಲೇಸರ್ ಕಿರಣ ಹಾಯಿಸಿ ಕಮಿಟಿ ಟೆಸ್ಟ್ ಮಾಡ್ತಿದೆ. ನಗರದಲ್ಲಿರುವ 44 ಫ್ಲೈಓವರ್ಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಹೀಗಾಗಿ ಒಂದೊಂದು ಮೇಲ್ಸೇತುವೆಯದ್ದು ಒಂದೊಂದು ಸಮಸ್ಯೆಯಾಗಿದ್ದು  ಶಿಥಿಲಾವಸ್ಥೆಯತ್ತ ಹೋಗಿದೆ. ಅಲ್ಲದೆ ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ವಾಹನಗಳ ಸಂಖ್ಯೆಯು ಹೆಚ್ಚುತ್ತಿದ್ದು ಮೇಲ್ಸೇತುವೆ ವಾಹನಗಳ ಭಾರ ತಡೆಯಕ್ಕಾಗ್ತಿಲ್ಲ. 

ಹೀಗಾಗಿ ಫ್ಲೈಓವರ್ ಗಳು ಯಾವಾಗ ಏನಾಗುತ್ತೋ ಅಂತಾ ಪಾಲಿಕೆ ತಲೆಕೆಡಿಸಿಕೊಂಡಿದೆ. ಮತ್ತೊಂದು ಅವಘಡ ಸಂಭವಿಸುವ ಮುನ್ನ, ಮುನ್ನೆಚ್ಚರಿಕೆ ಕ್ರಮವಾಗಿ ಫ್ಲೈಓವರ್ ಗಳ ಫಿಟ್ನೆಸ್ ಗೆ ಮುಂದಾಗಿದೆ. ಇನ್ನೊಂದು ವಾರದಲ್ಲಿ ಫ್ಲೈಓವರ್ಗಳ ಪರಿಸ್ಥಿತಿ ಹೇಗಿದೆ ಅನ್ನೋ ರಿಪೋರ್ಟ್ ಬಿಬಿಎಂಪಿ ಕೈ ಸೇರಲಿದೆ.

 

Follow Us:
Download App:
  • android
  • ios