ಮಂಡ್ಯ (ಆ.18) : ಭಿಕ್ಷುಕಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದಿದ್ದ ಆರೋಪಿಯನ್ನು ನಗರದ ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಕೀಲಾರ ಗ್ರಾಮದ ಕುಮಾರ (19) ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ. 

ಆರೋಪಿ ಕೀಲಾರ ಕುಮಾರ ಕಳೆದ ಕೆಲ ವರ್ಷಗಳಿಂದ ಮನೆ ತೊರೆದು ಬೀದಿ ಬದಿ, ರೈಲು ನಿಲ್ದಾಣ, ಬಸ್‌ ನಿಲ್ದಾಣ, ಉದ್ಯಾನವನ ಸೇರಿದಂತೆ ವಿವಿಧೆಡೆ ರಾತ್ರಿ ಉಳಿದುಕೊಳ್ಳುತ್ತಿದ್ದ. ಕುಡಿತದ ಚಟಕ್ಕೆ ಬಲಿಯಾಗಿದ್ದ ಈತ ಸಿಕ್ಕಿದ್ದನ್ನು ತಿಂದು, ಎಲ್ಲೆಂದರಲ್ಲಿ ಉಳಿದುಕೊಳ್ಳುತ್ತಿದ್ದನು. ಈ ಮಧ್ಯೆ ಸುಮಾರು 40 ವರ್ಷದ ಭಿಕ್ಷುಕಿ ಸಹ ಈತನೊಡನೆ ರಾತ್ರಿ ಸಿಲ್ವರ್‌ ಜ್ಯೂಬಿಲಿ ಪಾರ್ಕ್, ರೈಲು ನಿಲ್ದಾಣ ಮತ್ತಿತರ ಕಡೆಗಳಲ್ಲಿ ಉಳಿದುಕೊಳ್ಳುತ್ತಿದ್ದಳು. ಇಬ್ಬರ ನಡುವೆ ಅನೈತಿಕ ಚಟುವಟಿಕೆಯೂ ಇತ್ತು ಎನ್ನಲಾಗಿದೆ.

ಮಂಗಳಮುಖಿ ವೇಷ ತೊಟ್ಟ ಯುವಕ ಸಾವು : ನಂತರ ಸಿಕ್ತು ಹೊಸ ಟ್ವಿಸ್ಟ್...

ಜು. 23ರ ರಾತ್ರಿ ಬೆಂಗಳೂರು ಮೈಸೂರು ಹೆದ್ದಾಯಲ್ಲಿರುವ ಬಾಟಾ ಶೋ ರಂ ಪಕ್ಕದಲ್ಲಿ ಭಿಕ್ಷುಕಿ ಮೇಲೆ ಆರೋಪಿ ಕುಮಾರ ಹಾಗೂ ಮತ್ತೊಬ್ಬ ಸೇರಿ ಅತ್ಯಾಚಾರ ನಡೆಸಿದ್ದರು. ಪಾನಮತ್ತರಾಗಿದ್ದ ಮೂವರು ಪರಸ್ಪರ ನಡುವೆ ಜಗಳ, ಮಾತಿನ ಚಕಮಕಿ ನಡೆಯಿತು. ಅತಿರೇಕಕ್ಕೆ ತಿರುಗಿದಾಗ ಆಕೆ ತಲೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿ ಪರಾರಿಯಾಗಿದ್ದ.

ಕಳೆದ ಶನಿವಾರ ನಗರದ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕುಡಿದು ಓಡಾಡುತ್ತಿದ್ದ ವೇಳೆ ಪೊಲೀಸರು ಕುಮಾರನನ್ನು ಬಂಧಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಮದ್ವೆಯಾಗಲು ಹುಡ್ಗಿ ಸಿಗ್ಲಿಲ್ಲವೆಂದು ಜೀವ ಬಿಟ್ಟ ಹುಡ್ಗ..

ಬಂಧಿತ ಕುಮಾರನನ್ನು ಭಾನುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸಿದ್ದಾರೆ. ಪೂರ್ವಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.