ಶಿರಸಿ, (ಆ.17): ಮದುವೆಯಾಗಲು ವಧು ಸಿಗಲಿಲ್ಲ ಎಂಬ ಕಾರಣಕ್ಕೆ ಯುವಕನೋರ್ವ  ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಹೊರವಲದ ಚಿಪಗಿ ಬೆಟ್ಟದಲ್ಲಿ ನಡೆದಿದೆ. 

ಸಹ್ಯಾದ್ರಿ ಕಾಲೋನಿಯ ಮಂಜುನಾಥ ಭೋವಿ (34) ಮೃತಪಟ್ಟ ದುರ್ದೈವಿ.  ಮಂಜುನಾಥನಿಗೆ 34 ವಯಸ್ಸಾಯ್ತು ಇನ್ನೇನು ಮದುವೆ ಮಾಡಿಕೊಳ್ಳುವುದಕ್ಕೆ ಕಳೆದ 4 ವರ್ಷದಿಂದ  ಹುಡುಗಿ ಹುಡುಕುತ್ತಿದ್ದ.

ಪುಂಡರ ವಿರುದ್ಧ ಕ್ರಮಕ್ಕೆ ಮುಂದಾದ ಸಿಎಂ, ಕಂಗನಾ ಮಾತಿಗೆ ಸೊನಾಕ್ಷಿ ಗರಂ: ಆ.17ರ ಟಾಪ್ 10 ಸುದ್ದಿ! 

ಆದ್ರೆ, ಹುಡುಗಿ ಸಿಗದ ಕಾರಣ ಜಿಗುಪ್ಸೆಗೊಂಡು ಇಂದು (ಸೋಮವಾರ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಈಗಿನ ಕಾಲದಲ್ಲಿ ಮದ್ವೆಯಾಗಲು ಹೆಣ್ಣು ಸಿಗುತ್ತಿಲ್ಲ. ಈಗಾಗಿ .ಉಲ್ಟಾ ಹೆಣ್ಣಿಗೆ ವರದಕ್ಷಿಣೆ ಕೊಟ್ಟು ಮದ್ವೆ ಮಾಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಇದ್ರೂ ಇನ್ನೊಂದೆಡೆ ಹಲವು ತಾಯಂದಿರು ಗಂಡು ಮಗು ಬೇಕು, ಗಂಡು ಬೇಕು ಎನ್ನುತ್ತಿದ್ದಾರೆ.