Asianet Suvarna News Asianet Suvarna News

ಮಂಗಳಮುಖಿ ವೇಷ ತೊಟ್ಟ ಯುವಕ ಸಾವು : ನಂತರ ಸಿಕ್ತು ಹೊಸ ಟ್ವಿಸ್ಟ್

ಮಂಗಳಮುಖಿಯರ ವೇಷ ತೊಟ್ಟು ಭಿಕ್ಷ ಬೇಡುತ್ತಿದ್ದ ಯುವಕನ ಸಾವಿಗೀಡಾಗಿದ್ದು, ಆತನ ಸಾವಿಗೆ ಬಳಿಕ ಹೊಸ ಟ್ವಿಸ್ಟ್ ಸಿಕ್ಕಿದ್ದು, ಆತನ ಸಾವಿನ ರಹಸ್ಯ ಬಯಲಾಗಿದೆ.

Youth Murdered By Transgenders In Bengaluru
Author
Bengaluru, First Published Aug 18, 2020, 1:04 PM IST

 ಬೆಂಗಳೂರು (ಆ.181): ಮಂಗಳಮುಖಿಯರಂತೆ ವೇಷತೊಟ್ಟು ತಮಗೆ ಪ್ರದೇಶಕ್ಕೆ ಭಿಕ್ಷಾಟನೆ ಬಂದಿದ್ದ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಹತ್ಯೆಗೈದು ಬಳಿಕ ಅಪಘಾತದ ನಾಟಕ ಸೃಷ್ಟಿಸಿದ ಇಬ್ಬರು ಮಂಗಳಮುಖಿಯರು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕೋನಪ್ಪನ ಅಗ್ರಹಾರ ನಿವಾಸಿ ದೇವಿ ಅಲಿಯಾಸ್‌ ಅಶೋಕ್‌ ಕುಮಾರ್‌, ನಿತ್ಯಾ ಅಲಿಯಾಸ್‌ ರಾಮಕೃಷ್ಣ ಬಂಧಿತರು. ಮೂರು ದಿನಗಳ ಹಿಂದೆ ಭಿಕ್ಷಾಟನೆ ವಿವಾದ ಹಿನ್ನೆಲೆಯಲ್ಲಿ ರಾಮನಗರ ತಾಲೂಕಿನ ಹರಿಸಂದ್ರದ ಕಾಳೇಗೌಡನದೊಡ್ಡಿಯ ರಾಜೇಂದ್ರ ಕುಮಾರ್‌ ಮೇಲೆ ಹಲ್ಲೆ ನಡೆಸಿ ಆತನನ್ನು ಆರೋಪಿಗಳು ಕೊಂದಿದ್ದರು. ಬಳಿಕ ನೈಸ್‌ ರಸ್ತೆಯಲ್ಲಿ ಅಪಘಾತವಾಗಿದೆ ಎಂದು ಮೃತನ ಕುಟುಂಬದವರಿಗೆ ಆರೋಪಿಗಳು ಸುಳ್ಳು ಹೇಳಿದ್ದರು. ಆದರೆ ಅನುಮಾನಗೊಂಡ ಮೃತನ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದಾಗ ಕೊಲೆ ರಹಸ್ಯ ಬಯಲಾಗಿದೆ.

ಲೈಂಗಿಕ ಅಲ್ಪಸಂಖ್ಯಾತರ ಸಹವಾಸ:

ಇತ್ತೀಚಿಗೆ ಲೈಂಗಿಕ ಅಲ್ಪಸಂಖ್ಯಾತರ ಸ್ನೇಹ ಮಾಡಿದ್ದ ರಾಜೇಂದ್ರ, ತಾನು ಸಹ ಸೀರೆ, ಬಳೆ ಸೇರಿದಂತೆ ಮಹಿಳೆಯರ ವೇಷಭೂಷಣ ಹಾಕಿಕೊಳ್ಳುತ್ತಿದ್ದ. ನೈಸ್‌ ರಸ್ತೆಯಲ್ಲಿ ಸೀರೆ ಧರಿಸಿಕೊಂಡೇ ಭಿಕ್ಷೆ ಕೇಳುತ್ತಿದ್ದರಿಂದ ಆತನನ್ನು ಸಹ ಮಂಗಳಮುಖಿ ಎಂದು ಲಾರಿ ಚಾಲಕರು ಭಾವಿಸಿದ್ದರು ಎನ್ನಲಾಗಿದೆ.

ಗಲಭೆಕೋರರ ಹೆಡೆಮುರಿಕಟ್ಟಲು ಮುಂದಾದ ಸರ್ಕಾರ, ಬಿಎಸ್ ವೈ ಸಭೆಯ ಪ್ರಮುಖಾಂಶಗಳು!

ತಮಿಳುನಾಡು ಮೂಲದ ದೇವಿ ಹಾಗೂ ನಿತ್ಯಾ, ಕೋನಪ್ಪ ಅಗ್ರಹಾರದಲ್ಲಿ ನೆಲೆಸಿದ್ದರು. ಹೊಸೂರು ಹಾಗೂ ನೈಸ್‌ ರಸ್ತೆಗಳಲ್ಲಿ ಈ ಮಂಗಳಮುಖಿಯರು ಭಿಕ್ಷಾಟನೆ ಮಾಡುತ್ತಿದ್ದರು. ಇತ್ತೀಚಿಗೆ ನೈಸ್‌ ರಸ್ತೆಯಲ್ಲಿ ರಾಜೇಂದ್ರ ಭಿಕ್ಷಾಟನೆ ಶುರು ಮಾಡಿದ್ದ. ಇದರಿಂದ ಆರೋಪಿಗಳಿಗೆ ಅಸಮಾಧಾನವಾಗಿತ್ತು. ಆ.14 ರಂದು ರಾತ್ರಿ 10.30ರಲ್ಲಿ ನೈಸ್‌ ರಸ್ತೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಅವರು, ಲಾರಿ ಚಾಲಕನೊಬ್ಬನನ್ನು ತಡೆದು ಹಣ ಕೇಳಿದ್ದಾರೆ. ಆಗ ದಾರಿ ಮಧ್ಯೆ ಮಂಗಳಮುಖಿಗೆ ಹಣ ಕೊಟ್ಟಿದ್ದೇನೆ. ಮತ್ತೆ ನೀವು ಬಂದಿದ್ದೀರಾ ಎಂದು ಚಾಲಕ ಗಲಾಟೆ ಮಾಡಿದ್ದ. ಈ ಮಾತು ಕೇಳಿ ಕೋಪಗೊಂಡ ಆರೋಪಿಗಳು, ಪ್ರತ್ಯೇಕವಾಗಿ ಭಿಕ್ಷೆ ಬೇಡುತ್ತಿದ್ದ ರಾಜೇಂದ್ರನನ್ನು ಕಾರಿನಲ್ಲಿ ಅಪಹರಿಸಿಕೊಂಡು ಮನೆಗೆ ಕರೆದೊಯ್ದಿದ್ದಾರೆ. ಅಲ್ಲಿ ಮನಬಂದಂತೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.

ಸೊಕ್ಕು ಇಳಿದಿಲ್ಲ' ವರದಿಗೆ ತೆರಳಿದ್ದ ಸುವರ್ಣ ಸಿಬ್ಬಂದಿಗೆ ಪುಂಡರ ಅವಾಜ್!

 ಮೃತದೇಹವನ್ನು ರಾಮನಗರಕ್ಕೆ ತೆಗೆದುಕೊಂಡು ಹೋಗಿ ಸಂಬಂಧಿಕರಿಗೆ ಒಪ್ಪಿಸಿದ್ದಾರೆ. ನೈಸ್‌ ರಸ್ತೆಯಲ್ಲಿ ಲಾರಿ ಡಿಕ್ಕಿಯಾಗಿ ರಾಜೇಂದ್ರ ಮೃತಪಟ್ಟಿದ್ದಾನೆ ಎಂದಿದ್ದರು. ಆದರೆ ಈ ಮಾತಿನಿಂದ ಶಂಕೆಗೊಂಡ ಮೃತನ ಸಂಬಂಧಿಕರು, ಪೊಲೀಸರಿಗೆ ದೂರು ನೀಡಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Follow Us:
Download App:
  • android
  • ios