Donation to Temple: ಹೃದಯ ಶ್ರೀಮಂತಿಕೆ ಮೆರೆದ ಭಿಕ್ಷುಕಿ, ಶೂ ಎಸೆದವರು ಕರೆದು ಸನ್ಮಾನಿಸಿದರು

ಆಕೆ ದೇವಸ್ಥಾನಕ್ಕೆ ಹೊರಟಿದ್ದಳು ಆದರೆ ಅದನ್ನು ನೋಡಿದ ಜನ ಆಕೆ ಭಿಕ್ಷುಕಿ ಎಂಬ ಕಾರಣಕ್ಕೆ ಆಕೆಯ ಮೇಲೆ ಶೂ ಎಸೆದರು. ಆದರೆ ಕೆಲವೇ ಕ್ಷಣದಲ್ಲಿ ಹೀಗೆ ಶೂ ಎಸೆದವರೇ ಆಕೆಯನ್ನು ಕರೆದು ಸನ್ಮಾನಿಸಿದ ಘಟನೆ ಕಡೂರಿನಲ್ಲಿ ನಡೆದಿದೆ.

Beggar donated: Beggar Became celebrities in Kadoor donated 10K to Temple akb

ಆಕೆ ಕೆಂಪಮ್ಮ ವಯಸ್ಸು ೬೫ ಭಿಕ್ಷೆ ಬೇಡಿಯೇ ಜೀವನ ನಡೆಸುತ್ತಿದ್ದ ಕೆಂಪಮ್ಮ ಈಗ ಫುಲ್‌ ಸೆಲೆಬ್ರಿಟಿ ಆಗಿದ್ದಾಳೆ. ಅಂದು ಕಡೂರಿನ ನಿರ್ಮಾಣ ಹಂತದಲ್ಲಿದ್ದ ಪಾತಾಳ ಆಂಜನೇಯ ಸ್ವಾಮಿ ದೇಗುಲ(Patala Anjaneya swami Temple) ಕ್ಕೆ ಭೇಟಿ ನೀಡಲೆಂದು ಕೆಂಪಮ್ಮ(kempamma) ಹೊರಟ್ಟಿದ್ದಳು. ಆದರೆ ಭಿಕ್ಷಾಟನೆ ಮಾಡುತ್ತಿದ್ದ ಕಾರಣಕ್ಕೆ ಭಿಕ್ಷುಕಿಯನ್ನು ದೇಗುಲದ ಒಳ ಬಿಡಬಾರದೆಂದು ಭಾವಿಸಿದ ಜನ ಆಕೆಯನ್ನು ನೋಡಿ ಆಕೆಯ ಮೇಲೆ ಶೂ ಬಿಸಾಕಿದರು. ಆದರೆ ಭಿಕ್ಷೆ ಬೇಡಿ ಬಂದ ಹಣವನ್ನು ದೇಗುಲದ ಟ್ರಸ್ಟ್‌ಗೆ ನೀಡಲು ಆಕೆ ಬಂದಿದ್ದು ಎಂದು ತಿಳಿಯುತ್ತಿದ್ದಂತೆ ಜನ ಬೆರಗಾಗಿ ನಿಂತಿದ್ದು ಸುಳ್ಳಲ್ಲ. ಕೋಟಿ ಕೋಟಿ ಇದ್ದವರೇ 1 ರೂಪಾಯಿ ನೀಡಲು ಹಿಂದೆ ಮುಂದೆ ನೋಡುವ ಇಂದಿನ ಕಾಲದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ವೃದ್ಧ ಮಹಿಳೆ ಸುಮಾರು 10 ಸಾವಿರ ರೂಪಾಯಿಗಳನ್ನು ದೇಗುಲ ನಿರ್ಮಾಣ ಕಾರ್ಯಕ್ಕೆ ನೀಡಿದ್ದಾರೆ.

ವೃದ್ಧ ಭಿಕ್ಷುಕಿಯಿಂದ ಸಾಲಿಗ್ರಾಮ ದೇವಾಲಯಕ್ಕೆ 1ಲಕ್ಷ ದೇಣಿಗೆ !

ಕೆಂಪಮ್ಮ(Kempamma) ತಮ್ಮ ಚೀಲದಿಂದ 20 ರೂಪಾಯಿಗಳ 500 ನೋಟುಗಳನ್ನು ದೇಗುಲದ ಅರ್ಚಕ ದತ್ತು ವಾಸುದೇವ್‌(Dattu Vasudev) ಅವರಿಗೆ ನೀಡುತ್ತಿದ್ದಂತೆ ನೆರೆದಿದ್ದವರೆಲ್ಲಾ ಅಚ್ಚರಿಗೆ ಒಳಗಾಗಿದ್ದಾರೆ. ಇದು ಆಕೆ ಹಲವು ವರ್ಷಗಳಿಂದ ಸಂಗ್ರಹಿಸಿಟ್ಟ ಹಣವಾಗಿದೆ. ಅರ್ಚಕರ ಬಳಿ ಹಣ ನೀಡಿದ ಆಕೆ ಈ ಹಣದಿಂದ ದೇಗುಲದ ಗೋಪುರಕ್ಕೆ ಬೆಳ್ಳಿಯ ಲೇಪನ ಮಾಡಿಸುವಂತೆ ಹೇಳಿದ್ದಾಳೆ.

ಹೀಗೆ ದೇಗುಲಕ್ಕೆ ಕೆಂಪಮ್ಮ ಹಣ ನೀಡುತ್ತಿರುವುದು ಇದು ಎರಡನೇ ಬಾರಿ. ಕೆಂಪಜ್ಜಿ ಎಂದು ಕರೆಯಲ್ಪಡುವ ಈ ಕೆಂಪಮ್ಮ ಕಡೂರಿನ ಸಾಯಿಬಾಬಾ ಮಂದಿರದ ಹೊರಗೆ ಯಾವಾಗಲೂ ಕಾಣ ಸಿಗುತ್ತಾಳೆ. ಈಕೆ ದೇಗುಲದ ಹೊರಗೆ ಅಥವಾ ಸಮೀಪದ ಬಸ್‌ ನಿಲ್ದಾಣಗಳಲ್ಲಿ ರಾತ್ರಿ ನಿದ್ರಿಸುತ್ತಾಳೆ. 2019ರಲ್ಲಿ ಈಕೆ ಮೊದಲ ಬಾರಿ ದೇಗುಲಕ್ಕೆ ಹಣ ನೀಡಿದಾಗ ಹೊಟೇಲೊಂದು ಆಕೆಗೆ ಉಚಿತವಾಗಿ ಆಹಾರ ನೀಡುವುದಕ್ಕೆ ಆರಂಭಿಸಿತ್ತು,.

ಆಕೆಯ ದಾನಕ್ಕೆ ಬೆಲೆ ಕಟ್ಟಲಾಗದು. ಇದು ಶುದ್ಧ ಭಕ್ತಿಯಿಂದ ಕೂಡಿದ್ದು ಎಂದು ದೇಗುಲದ ಮತ್ತೊಬ್ಬ ಪಾತಾಳ ಆಂಜನೇಯ ಸ್ವಾಮಿ ದೇಗುಲದ ಮತ್ತೊಬ್ಬ ಅರ್ಚಕರಾದ ಮಲ್ಲಿಕಾರ್ಜುನ(Mallikarjuna) ಪ್ರತಿಕ್ರಿಯಿಸಿದ್ದಾರೆ. ಕೆಂಪಮ್ಮಗೆ ತನ್ನವರು ಎಂಬುವವರು ಯಾರೂ ಇಲ್ಲ. ಈ ಹಿನ್ನೆಲೆಯಲ್ಲಿ ದೇಗುಲದ ಆಡಳಿತ ಮಂಡಳಿ ಇನ್ನು ಮುಂದೆ ಆಕೆಯನ್ನು ನೋಡಿಕೊಳ್ಳಲಿದೆ ಎಂದು ಇದೇ ವೇಳೆ ಅರ್ಚಕರು ಹೇಳಿದರು.

Computer Science ಪದವೀಧರೆ ಹೀಗಾಗಿದ್ದು ಹೇಗೆ?: ಭಿಕ್ಷುಕಿಯ ವಿಡಿಯೋ ವೈರಲ್

ಹೀಗೆ ಭಿಕ್ಷೆ ಬೇಡಿ ದಾನ ಮಾಡಿದವರಲ್ಲಿ ಕೆಂಪಮ್ಮ ಮೊದಲಿಗರಲ್ಲ, ಈ ಹಿಂದೆ ಉಡುಪಿಯ ಕೋಟಾದಲ್ಲಿ ಭಿಕ್ಷುಕಿಯೊಬ್ಬರು ಭಿಕ್ಷೆ ಬೇಡಿ ಸಂಗ್ರಹವಾದ 1 ಲಕ್ಷ ರೂ. ಹಣವನ್ನು ಸಾಲಿಗ್ರಾಮ(saligrama) ದ ಶ್ರೀ ಗುರುನರಸಿಂಹ ದೇವಾಲಯಕ್ಕೆ ದಾನ ನೀಡಿದ್ದರು. ಅಶ್ವತ್ಥಮ್ಮ ಎಂಬ ಹೆಸರಿನ ಈ ಅಜ್ಜಿ ದೇಗುಲದ ಅನ್ನದಾನ ಸೇವೆಗೆ ಈ ಹಣವನ್ನು ನೀಡಿದ್ದರು. ಸರ್ವರಿಗೂ ಒಳಿತಾಗಲಿ, ಲೋಕಕ್ಕೆ ಹಿತವಾಗಲಿ ಮತ್ತು ಹಸಿದವರ ಹೊಟ್ಟೆತುಂಬಲಿ, ಕರೋನಾದಿಂದ ಮುಕ್ತಿ ದೊರೆಯಲಿ ಎಂಬ ಪ್ರಾರ್ಥನೆಯೊಂದಿಗೆ ತಾನು ಸಂಗ್ರಹಿಸಿದ ಹಣವನ್ನು ಶ್ರೀಗುರುನರಸಿಂಹ ದೇವರಿಗೆ ಅರ್ಪಿಸುತ್ತಿದ್ದೇನೆ ಎಂದವರು ಈ ಸಂದರ್ಭದಲ್ಲಿ ಹೇಳಿದರು.

ಒಟ್ಟಿನಲ್ಲಿ ಕೋಟಿ ಇದ್ದರೂ ಹಾರುವ ಹಕ್ಕಿಗೆ ಒಂದು ಅಗುಳು ಅನ್ನ ನೀಡಲು ಹಿಂದೆ ಮುಂದೆ ನೋಡುವ ಜನರಿರುವ ಈ ಕಾಲದಲ್ಲಿ ಈ ಇಬ್ಬರು ಭಿಕ್ಷುಕಿಯರು ಹೃದಯ ವೈಶಾಲ್ಯತೆಯಲ್ಲಿ ತಾವು ಯಾವ ಕೋಟ್ಯಾಧಿಪತಿಗೂ ಕಮ್ಮಿ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 

Latest Videos
Follow Us:
Download App:
  • android
  • ios