ಕೋಟ (ಫೆ.06): ಇಲ್ಲಿನ ಸಾಲಿಗ್ರಾಮದ ಶ್ರೀ ಗುರುನರಸಿಂಹ, ಆಂಜನೇಯ ದೇವಳದ ಪರಿಸರದಲ್ಲಿ ನಿತ್ಯದ ಜೀವನಕ್ಕಾಗಿ ಭಿಕ್ಷೆ ಬೇಡುವ, ಅಜ್ಜಿ ಅಶ್ವತ್ಥಮ್ಮ ಅವರು  ದೇವಸ್ಥಾನದ ಅನ್ನದಾನ ಸೇವೆಗೆ 1 ಲಕ್ಷ ರು. ದೇಣಿಗೆ ನೀಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 ಸರ್ವರಿಗೂ ಒಳಿತಾಗಲಿ, ಲೋಕಕ್ಕೆ ಹಿತವಾಗಲಿ ಮತ್ತು ಹಸಿದವರ ಹೊಟ್ಟೆತುಂಬಲಿ, ಕರೋನಾದಿಂದ ಮುಕ್ತಿ ದೊರೆಯಲಿ ಎಂಬ ಪ್ರಾರ್ಥನೆಯೊಂದಿಗೆ ತಾನು ಸಂಗ್ರಹಿಸಿದ ಹಣವನ್ನು ಶ್ರೀಗುರುನರಸಿಂಹ ದೇವರಿಗೆ ಅರ್ಪಿಸುತ್ತಿದ್ದೇನೆ ಎಂದವರು ಈ ಸಂದರ್ಭದಲ್ಲಿ ಹೇಳಿದರು.

ಶ್ರೀದೇವಳದ ಅರ್ಚಕ ವೇ.ಮೂ. ಜನಾರ್ದನ ಅಡಿಗ ಮತ್ತು ವ್ಯವಸ್ಥಾಪಕ ಕೆ. ನಾಗರಾಜ ಹಂದೆ ಅವರು ಅಶ್ವತ್ಥಮ್ಮ ಅವರಿಗೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.

ಖಾತೆಯಲ್ಲಿ ಲಕ್ಷಾಂತರ ಹಣವಿದ್ರು ಭಿಕ್ಷುಕರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ :ನೆರವಿನ ಹಸ್ತ ..

ಸಾಲಿಗ್ರಾಮ ಮಯ್ಯ ಟಿಫೀನ್‌ ರೂಂನ ಮಾಲೀಕ ರಾಘವೇಂದ್ರ ಹೆಬ್ಬಾರ್‌ ಮತ್ತು ಮಾನಸ ಸ್ಟುಡಿಯೋ ಮಾಲೀಕ ರವಿಕುಮಾರ್‌ ಉಪಸ್ಥಿತರಿದ್ದರು.

ಅವರು ಈ ಹಿಂದೆಯೂ ಅನೇಕ ದೇವಾಲಯಗಳಿಗೆ ತಾವು ಭಿಕ್ಷೆ ಬೇಡಿ ಸಂಗ್ರ​ಹಿ​ಸಿದ ಹಣ​ವನ್ನು ದಾನ ಮಾಡಿದ್ದಾರೆ. ಅವರ ಈ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಪ್ರಶಂಸೆ ವ್ಯಕ್ತವಾಗಿದೆ.

ಭಾರತದ ಉದ್ದಗಲಕ್ಕೂ ಇರುವ ಹಲವು ಪವಿತ್ರ ಕ್ಷೇತ್ರಗಳ ಯಾತ್ರೆ ಮಾಡಿರುವ ಅಶ್ವ​ತ್ಥ​ಮ್ಮ, ಅಯ್ಯಪ್ಪಸ್ವಾಮಿ ಪರಮಭಕ್ತೆ.